ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣ ಚುನಾವಣೆ: ಬಿಜೆಪಿ ಪಟ್ಟಿಯಲ್ಲಿ ಬಬಿತಾ ಪೋಗಟ್, ಯೋಗೇಶ್ವರ್ ದತ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಅಕ್ಟೋಬರ್‌ನಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕುಸ್ತಿಪಟುಗಳಾದ ಬಬಿತಾ ಪೋಗಟ್ ಮತ್ತು ಯೋಗೇಶ್ವರ್ ದತ್ ಅವರು ಬಿಜೆಪಿಯ ಟಿಕೆಟ್ ಪಡೆದುಕೊಂಡಿದ್ದಾರೆ. ಹಾಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕರ್ನಾಲ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಏಳು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ.

ಮಹಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಶೋಕ್ ಚವಾಣ್ ಸೇರಿ 51 ಅಭ್ಯರ್ಥಿಗಳುಮಹಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಶೋಕ್ ಚವಾಣ್ ಸೇರಿ 51 ಅಭ್ಯರ್ಥಿಗಳು

ಹರಿಯಾಣದಲ್ಲಿ 90 ವಿಧಾನಸಭೆ ಕ್ಷೇತ್ರಗಳಿದ್ದು, 78 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಹಿರಿಯ ಮುಖಂಡರೊಂದಿಗೆ ಕೇಂದ್ರ ಕಚೇರಿಯಲ್ಲಿ ಭಾನುವಾರ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದರು.

 Haryana Assembly Elections 2019 BJP First List Babita Pogat Yogeshwar Dutt

ಹರಿಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ಅವರಿಗೆ ತೊಹಾನಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಬಬಿತಾ ಪೋಗಟ್ ದರಿ ಮತ್ತು ಯೋಗೇಶ್ವರ್ ದತ್ ಅವರು ಬರೋಡಾದಿಂದ ಕಣಕ್ಕಿಳಿಯಲಿದ್ದಾರೆ.

ಮಹಾರಾಷ್ಟ್ರದಲ್ಲಿ ಮೈತ್ರಿ ಸುಗಮ... ಶಿವಸೇನೆಗೆ ಡಿಸಿಎಂ ಪೋಸ್ಟ್ ಪಕ್ಕಾ!ಮಹಾರಾಷ್ಟ್ರದಲ್ಲಿ ಮೈತ್ರಿ ಸುಗಮ... ಶಿವಸೇನೆಗೆ ಡಿಸಿಎಂ ಪೋಸ್ಟ್ ಪಕ್ಕಾ!

ಇಬ್ಬರು ಸಚಿವರಾದ ಬಾದಶಹಾಪುರದ ರಾವ್ ನರಬೀರ್ ಸಿಂಗ್ ಮತ್ತು ಫರೀದಾಬಾದ್‌ನ ವಿಪುಲ್ ಗೋಯಲ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 47 ಸೀಟುಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ 15, ಐಎನ್‌ಎಲ್‌ಡಿ 19 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಉಳಿದ ಸ್ಥಾನಗಳಲ್ಲಿ ಕೆಲವು ಸ್ಥಳೀಯ ಪಕ್ಷಗಳು ಮತ್ತು ಕ್ಷೇತರರು ಗೆಲುವು ಕಂಡಿದ್ದರು.

Infographics: ಬದಲಾದ ವೇಳಾಪಟ್ಟಿ, ಚುನಾವಣೆ ಎಲ್ಲಿ? ಯಾವಾಗ?Infographics: ಬದಲಾದ ವೇಳಾಪಟ್ಟಿ, ಚುನಾವಣೆ ಎಲ್ಲಿ? ಯಾವಾಗ?

ಹರಿಯಾಣ ವಿಧಾನಸಭೆಯ ಅವಧಿಯು ನ.2ರಂದು ಮುಕ್ತಾಯಗೊಳ್ಳಲಿದ್ದು, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗೆ ಅ.21ರಂದು ಚುನಾವಣೆ ಘೋಷಣೆ ಮಾಡಲಾಗಿದೆ. ಅ. 4 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅ. 24ರಂದು ಫಲಿತಾಂಶ ಹೊರಬೀಳಲಿದೆ.

English summary
BJP has released its first list of candidates for Haryana assembly elections 2019. Wrestlers Babita Pogat and Yogeshwar Dutt got tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X