ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ವಿರುದ್ಧ ಅಮಿತ್ ಶಾ ಅಸಮಾಧಾನ: ದೆಹಲಿಗೆ ಬುಲಾವ್

|
Google Oneindia Kannada News

ಚಂಡೀಗಡ, ಅಕ್ಟೋಬರ್ 24: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಭಾರಿ ಆಘಾತ ಎದುರಾಗಿದೆ. ಮತ್ತೆ ಅಧಿಕಾರಕ್ಕೆ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಹಿನ್ನಡೆಯಾಗಿದೆ.

ಬಿಜೆಪಿ ಸ್ಪಷ್ಟ ಬಹುಮತ ಪಡೆಯದೆ ಅತಂತ್ರ ವಿಧಾನಸಭೆ ಫಲಿತಾಂಶ ಬರುವುದು ಖಚಿತವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಖಟ್ಟರ್ ಅವರಿಗೆ ದೆಹಲಿಯಿಂದ ಬುಲಾವ್ ಬಂದಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಲಾಬಿ ಮಾಡಿ ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಿದ್ದ ಖಟ್ಟರ್ ವಿರುದ್ಧ ಅಮಿತ್ ಶಾ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

Maharashtra and Haryana Election Results 2019 Live: ಹರ್ಯಾಣದಲ್ಲಿ ಬಿಜೆಪಿಗೆ ಶಾಕ್, ಬಹುಮತ ಸಿಗೋದು ಡೌಟ್!Maharashtra and Haryana Election Results 2019 Live: ಹರ್ಯಾಣದಲ್ಲಿ ಬಿಜೆಪಿಗೆ ಶಾಕ್, ಬಹುಮತ ಸಿಗೋದು ಡೌಟ್!

Recommended Video

Siddaramaiah Met Sonia Gandhi in New Delhi | Oneindia Kannada

ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾದ ಲೋಪದ ಬಗ್ಗೆ ಅಮಿತ್ ಶಾ ಸಿಟ್ಟಿಗೆದ್ದಿದ್ದು, ಕೂಡಲೇ ದೆಹಲಿಗೆ ಬರುವಂತೆ ಖಟ್ಟರ್ ಅವರಿಗೆ ಕರೆ ನೀಡಿದ್ದಾರೆ ಎನ್ನಲಾಗಿದೆ.

Haryana Assembly elections 2019 Amit Shah Unhappy With Haryana Manohar Lal Khattar

ಈ ನಡುವೆ ಹರಿಯಾಣದಲ್ಲಿ ಸರ್ಕಾರ ರಚಿಸುವ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸಲು ಬಿಜೆಪಿ ತೀರ್ಮಾನಿಸಿದೆ. ವಿರೋಧಪಕ್ಷಗಳ ವಿರುದ್ಧವಾಗಲೀ ಅಥವಾ ಪಕ್ಷದ ನಾಯಕರ ವಿರುದ್ಧವಾಗಲೀ ಹೇಳಿಕೆ ನೀಡದಂತೆ ಮುಖಂಡರಿಗೆ ಸೂಚನೆ ನೀಡಿದೆ.

ಹರ್ಯಾಣದ ಅತಂತ್ರ ಸ್ಥಿತಿ: ಜೆಜೆಪಿ ಕಿಂಗ್ ಮೇಕರ್, ಸಿಎಂ ಕುರ್ಚಿ ಮೇಲೆ ದುಷ್ಯಂತ್ ಕಣ್ಣುಹರ್ಯಾಣದ ಅತಂತ್ರ ಸ್ಥಿತಿ: ಜೆಜೆಪಿ ಕಿಂಗ್ ಮೇಕರ್, ಸಿಎಂ ಕುರ್ಚಿ ಮೇಲೆ ದುಷ್ಯಂತ್ ಕಣ್ಣು

ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶದ ಸೂಚನೆ ದೊರೆತ ಹಿನ್ನೆಲೆಯಲ್ಲಿ ಕಿಂಗ್ ಮೇಕರ್ ಜೆಜೆಪಿಯತ್ತ ಕಾಂಗ್ರೆಸ್ ಮತ್ತು ಬಿಜೆಪಿಯ ಗಮನ ಹರಿದಿದೆ. ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡುವ ಮೂಲಕ ಸರ್ಕಾರ ರಚಿಸಲು ಕಾಂಗ್ರೆಸ್ ಮುಂದಾಗಿದೆ.

English summary
BJP President Amit Shah reportedly unhappy over the ticket distribution with CM Manohar Lal Khattar in Haryana assembly elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X