ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣ: ಕೊಳವೆ ಬಾವಿಗೆ ಬಿದ್ದ ಬಾಲಕಿ ದುರಂತ ಸಾವು

|
Google Oneindia Kannada News

ಚಂಡೀಗಡ, ನವೆಂಬರ್ 4: ಹರಿಯಾಣದ ಕರ್ನಲ್ ಜಿಲ್ಲೆಯ ಹರಿಸಿಂಗ್ ಪುರ ಗ್ರಾಮದಲ್ಲಿ 50 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಐದು ವರ್ಷದ ಬಾಲಕಿಯನ್ನು ಉಳಿಸುವ ಪ್ರಯತ್ನ ಫಲ ನೀಡಲಿಲ್ಲ. ಆಕೆಯನ್ನು ಹೊರತೆಗೆಯುವಲ್ಲಿ ರಕ್ಷಣಾ ಕಾರ್ಯಪಡೆ ಯಶಸ್ವಿಯಾದರೂ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಸೋಮವಾರ ಮೃತಪಟ್ಟಿದ್ದಾಳೆ.

ಬೋರ್‌ವೆಲ್‌ಗೆ ಬಿದ್ದಿದ್ದ ಪುಟಾಣಿಯನ್ನು ರಕ್ಷಿಸಿದರೂ ಬದುಕುಳಿಯಲಿಲ್ಲಬೋರ್‌ವೆಲ್‌ಗೆ ಬಿದ್ದಿದ್ದ ಪುಟಾಣಿಯನ್ನು ರಕ್ಷಿಸಿದರೂ ಬದುಕುಳಿಯಲಿಲ್ಲ

ಭಾನುವಾರ ಹೊಲದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಐದು ವರ್ಷದ ಶಿವಾನಿ 50 ಅಡಿ ಆಳದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಜಾರಿ ತಲೆ ಕೆಳಗಾಗಿ ಬಿದ್ದಿದ್ದಳು. ಆಕೆಯನ್ನು ಹೊರತೆಗೆಯಲು ಸುಮಾರು 18 ಗಂಟೆ ಸತತ ಪ್ರಯತ್ನ ನಡೆದಿತ್ತು. ಸೋಮವಾರ ಕೊನೆಗೂ ಆಕೆಯ ದೇಹವನ್ನು ತೆಗೆಯುವಲ್ಲಿ ಎನ್‌ಡಿಆರ್ಎಫ್ ಸಿಬ್ಬಂದಿ ಯಶಸ್ವಿಯಾದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆ ಆಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ಬೋರ್‌ವೆಲ್‌ಗೆ ಬಿದ್ದ 2 ವರ್ಷದ ಬಾಲಕ: ಹೊರತೆಗೆಯಲು ಹರಸಾಹಸಬೋರ್‌ವೆಲ್‌ಗೆ ಬಿದ್ದ 2 ವರ್ಷದ ಬಾಲಕ: ಹೊರತೆಗೆಯಲು ಹರಸಾಹಸ

ಆಟವಾಡಲು ಹೋಗಿದ್ದ ಮಗಳನ್ನು ಪೋಷಕರು ಹುಡುಕಾಡಿದ್ದರು. ಎಲ್ಲಿಯೂ ಆಕೆ ಕಾಣಿಸದೆ ಹೋದಾಗ ಕೊಳವೆ ಬಾವಿಯೊಳಗೆ ಬಿದ್ದಿರಬಹುದು ಎಂಬ ಅನುಮಾನ ಮೂಡಿತ್ತು. ಬಳಿಕ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು. ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್ಎಫ್ ಕೂಡ ಸೇರಿಕೊಂಡಿತ್ತು.

 Harnaya 5 Year Old Girl Dies After Trapped In Borewell

ಮಗುವಿನ ಉಸಿರಾಟಕ್ಕೆ ಅಡ್ಡಿಯಾಗದಂತೆ ಕೊಳವೆಯೊಳಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು. ರಕ್ಷಣಾ ತಂಡ ಬಳಸಿದ್ದ ಕ್ಯಾಮೆರಾಗೆ ಮಗುವಿನ ಕಾಲುಗಳ ಚಿತ್ರ ಲಭಿಸಿತ್ತು. ಮಗು ಜೀವಂತ ಇರಬಹುದು ಎಂಬ ಆಶಯದೊಂದಿಗೆ ಪೋಷಕರ ಧ್ವನಿಯನ್ನು ಮುದ್ರಿಸಿ ಆಕೆಗೆ ಕೇಳಿಸುವ ಪ್ರಯತ್ನ ಮಾಡಲಾಯಿತು. ಇದರಿಂದ ಆಕೆ ಎಚ್ಚರವಾಗಿ ಪ್ರತಿಕ್ರಿಯಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಗುವಿನಲ್ಲಿ ಯಾವುದೇ ಚಲನೆ ಕಂಡುಬಂದಿರಲಿಲ್ಲ. ತಲೆಕೆಳಗಾಗಿ ಬಿದ್ದಿದ್ದರಿಂದ ಆಕೆಯನ್ನು ರಕ್ಷಿಸುವ ಪ್ರಯತ್ನ ಕ್ಲಿಷ್ಟಕರವಾಗಿತ್ತು. ಸತತ ಕಾರ್ಯಾಚರಣೆ ಬಳಿಕ ಹೊರತೆಗೆದರೂ ಆಕೆ ಆಗಲೇ ಮೃತಪಟ್ಟಿದ್ದಳು.

ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ ಮತ್ತೆ ಹೆತ್ತವರ ಮಡಿಲು ಸೇರಲಿಲ್ಲಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ ಮತ್ತೆ ಹೆತ್ತವರ ಮಡಿಲು ಸೇರಲಿಲ್ಲ

ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ಈ ರೀತಿಯ ಹೃದಯ ಕಲಕುವ ಘಟನೆ ನಡೆದಿತ್ತು. 2 ವರ್ಷದ ಸುಜಿತ್ ವಿಲ್ಸನ್ ಹೊಲದಲ್ಲಿ ಆಟವಾಡುವಾಗ ಕೊಳವೆ ಬಾವಿಯೊಳಗೆ ಬಿದ್ದಿದ್ದ. ಆತನ ರಕ್ಷಣೆಗೆ 80 ಗಂಟೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಬಾಲಕ ಮೃತಪಟ್ಟಿದ್ದ.

English summary
A five year old girl in Haryana dies on Monday after she got trapped in 50 feet deep borewell for 18 hours at Harsinghpura village in Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X