ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಎಎಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಹರ್ಭಜನ್ ಸಿಂಗ್ ಸ್ಪರ್ಧೆ

|
Google Oneindia Kannada News

ಚಂಡೀಗಢ, ಮಾರ್ಚ್ 17: ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ಈ ಬಾರಿ ವಿಧಾನಸಭೆ ಚುನಾವಣೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೆ, ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಆದರೆ, ಅದೆಲ್ಲ ಸುಳ್ಳು, ಜನರು ಇಂತಹ ವದಂತಿಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹರ್ಭಜನ್ ಸಿಂಗ್ ಹೇಳಿದ್ದರು. ನಂತರ ಆಮ್ ಆದ್ಮಿ ಪಕ್ಷ ಸೇರಿದ್ದರು. ಈಗ ಪಂಜಾಬ್ ರಾಜ್ಯದ ಎಎಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಹರ್ಭಜನ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ.

2022ರಲ್ಲಿ ಆಮ್ ಆದ್ಮಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ 92 ಸ್ಥಾನ ಗೆದ್ದು ಅಧಿಕಾರ ಸ್ಥಾಪಿಸಿದೆ. ಭಗವಂತ್ ಮಾನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ 18, ಶಿರೋಮಣಿ ಅಕಾಲಿ ದಳ 3, ಬಿಜೆಪಿ 2, ಬಿಎಸ್ ಪಿ 1, ಇತರೆ 1 ಸ್ಥಾನ ಗಳಿಸಿದ್ದಾರೆ.

ಪಂಜಾಬ್‌ ನೂತನ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿಪಂಜಾಬ್‌ ನೂತನ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ರಾಜ್ಯ ಸರ್ಕಾರವು ಹರ್ಭಜನ್ ಸಿಂಗ್ ಅವರಿಗೆ ನೂತನ ಕ್ರೀಡಾ ವಿಶ್ವವಿದ್ಯಾಲಯದ ಉಸ್ತುವಾರಿ ಕೂಡಾ ನೀಡಬಹುದು ಎನ್ನಲಾಗಿದೆ.

Harbhajan Singh to be AAPs Punjab candidate for Rajya Sabha polls this year

ಫೆಬ್ರವರಿಯಲ್ಲಿ ನಡೆದ ಪಂಜಾಬ್ ಚುನಾವಣೆಗೂ ಮುನ್ನ 'ಟರ್ಬನೇಟರ್' ಹರ್ಭಜನ್ ಸಿಂಗ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಹಲವಾರು ಮಾಧ್ಯಮಗಳು ಈ ಸಾಧ್ಯತೆಯ ಬಗ್ಗೆ ವರದಿ ಮಾಡಿದ್ದವು, ಜೊತೆಗೆ ಬಿಜೆಪಿಯ ಹಿರಿಯ ನಾಯಕರೊಬ್ಬರು, "ನಾವು ಹರ್ಭಜನ್ ಮತ್ತು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸಿದ್ದೇವೆ ಎಂದಿದ್ದರು. ಆದರೆ, ನಂತರ ಸುದ್ದಿಯನ್ನು ಮಾಜಿ ಕ್ರಿಕೆಟರ್ ಅಲ್ಲಗೆಳೆದಿದ್ದರು.

ಪಂಜಾಬ್ ಸಿಎಂ ಚನ್ನಿ ಸೋಲಿಸಿದ ಮೊಬೈಲ್ ಅಂಗಡಿ ಓನರ್ ಲಾಭ್ ಸಿಂಗ್ಪಂಜಾಬ್ ಸಿಎಂ ಚನ್ನಿ ಸೋಲಿಸಿದ ಮೊಬೈಲ್ ಅಂಗಡಿ ಓನರ್ ಲಾಭ್ ಸಿಂಗ್

ಆದಾಗ್ಯೂ, ವದಂತಿಗಳು ಅಲ್ಲಿಗೆ ನಿಲ್ಲಲಿಲ್ಲ, ಕೆಲವೇ ದಿನಗಳ ನಂತರ, ಅನುಭವಿ ಕ್ರಿಕೆಟಿಗ ಅಂದಿನ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗೆ ಪೋಸ್ ನೀಡಿದ್ದು, ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದರು"ಚಿತ್ರವು ಸಾಧ್ಯತೆಗಳಿಂದ ತುಂಬಿದೆ. ಭಜ್ಜಿ ಜೊತೆ ಹೊಳೆಯುವ ನಕ್ಷತ್ರ". ಎಂದು ಅಡಿಬರಹ ನೀಡಲಾಗಿತ್ತು. ಆದರೆ, ನಂತರ ಹರ್ಭಜನ್ ಸಿಂಗ್ ಎಎಪಿ ಪರ ವಾಲಿದ್ದರು.

2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಬಹುಮತವನ್ನು ಪಡೆದಿತ್ತು. ಈ ಮೂಲಕ 10 ವರ್ಷಗಳ ನಂತರ ಎಸ್‌ಎಡಿ-ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾಗಿತ್ತು.117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿತ್ತು.

English summary
Former India cricketer Harbhajan Singh will be the Aam Aadmi Party's Punjab candidate for the Rajya Sabha elections this year, the party has announced. The Aam Aadmi Party is going to get five seats in the Rajya Sabha, by the end of this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X