ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಾಯ ಮಾಡಲು ಪೆರೋಲ್ ಕೇಳಿದ ರಾಮ್ ರಹೀಂಗೆ ನಿರಾಶೆ

|
Google Oneindia Kannada News

ಚಂಡೀಗಢ, ಜೂನ್ 25: ಅತ್ಯಾಚಾರ ಪ್ರಕರಣದಲ್ಲಿ ಜೈಲುವಾಸಿಯಾಗಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ ಮೀತ್ ರಾಮ್ ರಹೀಂ ಸಿಂಗ್ ಅವರಿಗೆ ಹಿನ್ನಡೆಯಾಗಿದೆ. ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಹೋಗಲು ಪೆರೋಲ್ ಕೇಳಿದ್ದ ರಾಮ್ ರಹೀಂ ಅವರಿಗೆ ಪೆರೋಲ್ ಸಿಗುವುದು ಕಷ್ಟ ಎಂದು ತಿಳಿದು ಬಂದಿದೆ.

ನ್ಯೂಸ್ 18 ವರದಿಯಂತೆ ಸಿರ್ಸಾ ಆಡಳಿತ ಅಧಿಕಾರಿಗಳು, ರಾಮ್ ರಹೀಂ ಅವರ ಮನವಿ ಅರ್ಜಿಯನ್ನು ಪರಿಶೀಲಿಸಿ, ಕೋರ್ಟಿಗೆ ವರದಿ ನೀಡಿದ್ದಾರೆ. ಬೇಸಾಯ, ತೋಟಗಾರಿಕೆ ಮಾಡಲು ಅನುಮತಿ ಕೋರಿ ಪೆರೋಲ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ರಾಮ್ ರಹೀಂ ಹೆಸರಲ್ಲಿ ಯಾವುದೇ ಜಮೀನು ಇಲ್ಲ ಎಂದು ದಾಖಲೆಯನ್ನು ಒದಗಿಸಿದ್ದಾರೆ.

ಕೃಷಿ ಮಾಡಬೇಕು, ಪೆರೋಲ್ ನೀಡಿ ಎಂದ ಅತ್ಯಾಚಾರ ಅಪರಾಧಿ ದೇವಮಾನವ! ಕೃಷಿ ಮಾಡಬೇಕು, ಪೆರೋಲ್ ನೀಡಿ ಎಂದ ಅತ್ಯಾಚಾರ ಅಪರಾಧಿ ದೇವಮಾನವ!

ಒಂದು ವರ್ಷಗಳ ಕಾಲ್ ಜೈಲುವಾಸ ಅನುಭವಿಸಿದ ಮೇಲೆ ಪೆರೋಲ್ ಮೇಲೆ ಹೊರ ಬರಲು ಅವಕಾಶ ಇರುತ್ತದೆ. ಆದರಂತೆ ರಾಮ್ ರಹೀಂ ಅವರ ಮನವಿಯನ್ನು ಸಿರ್ಸಾ ಜಿಲ್ಲಾಡಳಿತಕ್ಕೆ ಕಳಿಸಲಾಗಿತ್ತು. ಜಿಲ್ಲಾಡಳಿತ ನೀಡಿದ ವರದಿ ಆಧಾರಿಸಿ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ ಎಂದು ಹರ್ಯಾಣದ ಬಂದಿಖಾನೆ ಸಚಿವ ಕೆಎಲ್ ಪಾನ್ವರ್ ಹೇಳಿದ್ದಾರೆ.

ರಾಮ್ ರಹೀಂಗೆ 20 ವರ್ಷಗಳ ಜೈಲುಶಿಕ್ಷೆ

ರಾಮ್ ರಹೀಂಗೆ 20 ವರ್ಷಗಳ ಜೈಲುಶಿಕ್ಷೆ

ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ 51 ವರ್ಷ ವಯಸ್ಸಿನ ರಾಮ್ ರಹೀಂ ನೆಲೆಸಿದ್ದಾರೆ. ಎರಡು ಅತ್ಯಾಚಾರ ಪ್ರಕರಣ, ಪತ್ರಕರ್ತರ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಈಗ 42 ದಿನಗಳ ಕಾಲ ಪೆರೋಲ್ ಗಾಗಿ ಮನವಿ ಮಾಡಿಕೊಂಡಿದ್ದಾರೆ. ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ 2017ರ ಆಗಸ್ಟ್‌ನಲ್ಲಿ ರಾಮ್ ರಹೀಮ್‌ಗೆ ಪಂಚಕುಲದ ಸಿಬಿಐ ನ್ಯಾಯಾಲಯವು ರಾಮ್ ರಹೀಂಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ರಾಮ್ ರಹೀಮ್ ಜತೆಗಿನ ಸಂಬಂಧ ಬಗ್ಗೆ ಹನಿಪ್ರೀತ್ರಾಮ್ ರಹೀಮ್ ಜತೆಗಿನ ಸಂಬಂಧ ಬಗ್ಗೆ ಹನಿಪ್ರೀತ್

ರಾಮ್ ರಹೀಮ್ ಅವರಿಗೆ ಲಕ್ಷಾಂತರ ಭಕ್ತರಿದ್ದಾರೆ ಏಕೆ?

ರಾಮ್ ರಹೀಮ್ ಅವರಿಗೆ ಲಕ್ಷಾಂತರ ಭಕ್ತರಿದ್ದಾರೆ ಏಕೆ?

ಅಪರಾಧ ಪ್ರಕರಣದ ತೀರ್ಪು ಪ್ರಕಟಿಸಲು ಕ್ರಿಕೆಟ್ ಸ್ಟೇಡಿಯಂನ್ನು ಜೈಲಾಗಿ ಪರಿವರ್ತಿಸಲಾಗಿತ್ತು. ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪಿನ ಪ್ರಭಾವ ಪಂಜಾಬ್, ಹರ್ಯಾಣ ಅಲ್ಲದೆ ರಾಜಸ್ಥಾನಕ್ಕೂ ವ್ಯಾಪಿಸಿದೆ. ಜಾತಿ ವ್ಯವಸ್ಥೆಯಲ್ಲಿ ಮುಳುಗಿರುವ ಪಂಜಾಬ್ ಹಾಗೂ ಹರ್ಯಾಣದಲ್ಲಿ ಡೇರಾ ಸಚ್ಚಾ ಸೌಧಾ ಸಂಸ್ಥೆ ಮೂಲಕ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಹೊಸ ಬೆಳಕು ಮೂಡಿಸಿದ್ದರು. ಜಾತಿ ರಹಿತ ವ್ಯವಸ್ಥೆ ತರಲು ಯತ್ನಿಸಿದರು.

ಇದಕ್ಕೆ ಸಾರ್ವಜನಿಕರಿಂದ ಭರಪೂರ ವ್ಯಕ್ತವಾಗಿತ್ತು. ಸಮಾಜದಲ್ಲಿ ಹಿಂದುಳಿದ ವರ್ಗದವರು ರಾಮ್ ರಹೀಮ್ ಬೆನ್ನಹಿಂದೆ ನಿಂತರು. ಸಬ್ಸಿಡಿ ದರದಲ್ಲಿ ಆಹಾರ ವಿತರಣೆ, ಔಷಧಿ ಪೂರೈಕೆ ಮಾಡುವ ಮೂಲಕ ಜನಪ್ರಿಯತೆ ಗಳಿಸಿದರು. ಸರಿ ಸುಮಾರು 104ಕ್ಕೂ ಅಧಿಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿರುವ ರಾಮ್ ರಹೀಮ್ ಅವರು ಪಂಜಾಬಿನ ಬಹುಮುಖ್ಯ ಸಮಸ್ಯೆಯ ವಿರುದ್ಧ ಹೋರಾಟ ನಡೆಸಿದರು.

ರಹೀಮ್ ಒಬ್ಬ ರಾಕ್ ಸಂಗೀತಗಾರ

ರಹೀಮ್ ಒಬ್ಬ ರಾಕ್ ಸಂಗೀತಗಾರ

ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ರಾಮ್ ರಹೀಮ್ ಒಬ್ಬ ರಾಕ್ ಸಂಗೀತಗಾರ! ಅವನ ಹೈ ವೇ ಲವ್ ಚಾರ್ಜರ್ ಎಂಬ ಆಲ್ಬಮ್ ಬಿಡುಗಡೆಯಾದ ಮೂರೇ ದಿನಗಳಲ್ಲಿ ಮೂರು ಮಿಲಿಯನ್ ಗಿಂತ ಹೆಚ್ಚು ಪ್ರತಿ ಮಾರಾಟವಾಗಿ ದಾಖಲೆ ಬರೆದಿತ್ತು! ನೆಟ್ ವರ್ಕ್ ತೆರೆ ಲವ್ ಕಾ, ಲವ್ ರಬ್ ಸೆ ಮುಂತಾದ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ. ಸಂಗೀತದ ಮೂಲಕ ಯುವಕರಿಗೆ ಧನಾತ್ಮಕ ಸಂದೇಶಗಳನ್ನು ನೀಡಿ ಅವರನ್ನು ಮದ್ಯಪಾನ, ಮಾದಕ ವ್ಯಸನದಂಥ ಚಟಗಳಿಂದ ಮುಕ್ತಗೊಳಿಸುತ್ತಿದ್ದನಂತೆ. ಅಷ್ಟೇ ಅಲ್ಲ, ಸಂತಾನಹೀನತೆಗೂ ಚಿಕಿತ್ಸೆ ನೀಡುತ್ತಿದ್ದನಂತೆ.

ಕೊಲೆ ಕೇಸ್ : ಸ್ವಯಂಘೋಷಿತ ದೇವಮಾನವ ರಾಮ್ ಪಾಲ್ ಗೆ ಜೀವಾವಧಿ ಶಿಕ್ಷೆಕೊಲೆ ಕೇಸ್ : ಸ್ವಯಂಘೋಷಿತ ದೇವಮಾನವ ರಾಮ್ ಪಾಲ್ ಗೆ ಜೀವಾವಧಿ ಶಿಕ್ಷೆ

ಬಹುಮುಖ ಪ್ರತಿಭೆ ಎಂದು ಹೊಗಳಲಾಗಿದೆ

ಬಹುಮುಖ ಪ್ರತಿಭೆ ಎಂದು ಹೊಗಳಲಾಗಿದೆ

ಡೇರಾ ವೆಬ್ ಸೈಟ್ ನಲ್ಲಿ ರಾಮ್ ರಹೀಮ್ ನನ್ನು ಲೇಖಕ, ಸಂಶೋಧಕ, ಕೃಷಿಕ, ವಿಜ್ಞಾನಿ, ಕ್ರೀಡಾಪಟು, ಬಹು ಭಾಷಾ ತಜ್ಞ, ವಿದ್ವಾಂಸ, ನಿರ್ದೇಶಕ, ಸಂಗೀತಗಾರ, ಡಿ ಅಡಿಕ್ಷನ್ ಸ್ಪೆಶಲಿಸ್ಟ್ ಎಂದು ಉಲ್ಲೇಖಿಸಲಾಗಿದೆ! 2014 ಡೇರಾ ಮುಖ್ಯಸ್ಥರೇ ಹೇಳಿದ್ದ ಪ್ರಕಾರ ದೇಶದಲ್ಲಿ 5 ಕೋಟಿಗೂ ಹೆಚ್ಚು ಜನ ಡೇರಾ ಅನುಯಾಯಿಗಳಿದ್ದಾರೆ. ಅದರಲ್ಲಿ 25 ಲಕ್ಷಕ್ಕೂ ಹೆಚ್ಚು ಜನ ಹರ್ಯಾಣದಲ್ಲಿದ್ದಾರೆ! 2015 ರಲ್ಲಿ ಬಿಡುಗಡೆಯಾದ MSG: The Messenger ಎಂಬ ಸಿನೆಮಾದಲ್ಲೂ ನಟಿಸಿದ್ದ ರಾಮ್ ರಹೀಮ್, ಈ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕೀರ್ತಿ ಸಂಪಾದಿಸಲು ಉತ್ಸುಕನಾಗಿದ್ದನಂತೆ.

English summary
Jailed Dera Sacha Sauda chief Gurmeet Ram Rahim Singh is unlikely to get parole for 'farming at the fields', despite the Haryana government is backing the request citing 'good behaviour'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X