• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳ್ಳನ ಹಿಡಿಯಲು ಬಾಲಕಿಯ ಸಾಹಸ, ಕೈ ಕೊಯ್ದರೂ ಬಿಡಲಿಲ್ಲ ಕೊರಳ್ಪಟ್ಟಿ

|

ಚಂಡೀಗಢ, ಸೆಪ್ಟೆಂಬರ್ 02: ಕದ್ದೋಡುತ್ತಿದ್ದ ಕಳ್ಳನಿಂದ ಮೊಬೈಲ್ ಪಡೆಯಲು ಹೋಗಿ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಾಲಕಿಯ ಮೊಬೈಲ್‌ನ್ನು ಕದ್ದು ಬೈಕ್‌ನಲ್ಲಿ ಹೋಗಲು ಯತ್ನಿಸಿದ್ದಾರೆ. ಆದರೆ ಆಕೆ ಅವರನ್ನು ಅಡ್ಡಗಟ್ಟಿ ಬೈಕ್‌ನಲ್ಲಿ ಕುಳಿತಿದ್ದ ಹಿಂಬದಿ ಸವಾರನನ್ನು ಎಳೆದು ನೆಲಕ್ಕೆ ಹಾಕಿದ್ದಾಳೆ.

ಕಳ್ಳನಿಗೆ ಕೊರೊನಾ ವೈರಸ್ ಸೋಂಕು: ಶಿವಮೊಗ್ಗ ಪೊಲೀಸರಲ್ಲಿ ಆತಂಕ ಶುರು

ಬಳಿಕ ಇಬ್ಬರ ಮಧ್ಯೆ ಚಕಮಕಿ ನಡೆದಿದೆ, ಕಳ್ಳ ತನ್ನ ಬಳಿ ಇದ್ದ ಹರಿತವಾದ ಆಯುಧದಿಂದ ಆಕೆಯ ಕೈ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆ ತೀವ್ರವಾಗಿ ಗಾಯಗೊಂಡಿದ್ದರೂ ಕೂಡ ಆತನನ್ನು ಎಳೆದು ನೆಲಕ್ಕೆ ಬೀಳಿಸಿದ್ದಷ್ಟೇ ಅಲ್ಲದೆ ಪೊಲೀಸರಿಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾಳೆ.

ಅಂತ್ಯದಲ್ಲಿ ಅಲ್ಲಿ ಅಕ್ಕಪಕ್ಕ ಓಡಾಡುತ್ತಿದ್ದ ಜನರು ಆಕೆಯ ಸಹಾಯಕ್ಕೆ ಬಂದಿದ್ದಾರೆ, ಆತನನ್ನು ಹಿಡಿದಿದ್ದಾರೆ.ಕುಸುಮ್ ಕುಮಾರಿ ಟ್ಯೂಷನ್‌ನಿಂದ ಹಿಂದಿರುಗುವಾಗ ಜಲಂಧರ್-ಕುಪರ್ತಲಾ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಬಂಧಿತನನ್ನು ಅವಿನಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಸೆಕ್ಷನ್ 389 ಬಿ, 307(ಕೊಲೆಯತ್ನ) ಪ್ರಕರಣಗಳಗಳಲ್ಲಿ ದೂರು ದಾಖಲಾಗಿದೆ.

English summary
A teenage girl was attacked with a sharp weapon by two motorcycle-borne thieves who tried to snatch her mobile phone but she managed to pull down one of them off the bike, CCTV footage from Punjab shows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X