India
 • search
 • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಭ್ರಷ್ಟಾಚಾರ ಆರೋಪ: ಪಂಜಾಬ್‌ ಮಾಜಿ ಸಚಿವ ಬಂಧನ

|
Google Oneindia Kannada News

ಚಂಡೀಗಢ, ಜೂ. 8: ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಸಾಧು ಸಿಂಗ್ ಧರಂಸೋತ್‌ರನ್ನು ಭ್ರಷ್ಟಾಚಾರ ಆರೋಪದ ಮೇಲೆ ಬುಧವಾರ ಮುಂಜಾನೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಮತ್ತು ಅರಣ್ಯ ಸಚಿವರಾಗಿದ್ದ ಅವರನ್ನು ವಿಜಿಲೆನ್ಸ್ ಬ್ಯೂರೋ ಅಮ್ಲೋಹ್‌ನಿಂದ ಬಂಧಿಸಲಾಗಿದೆ. ಜಿಲ್ಲಾ ಅರಣ್ಯ ಅಧಿಕಾರಿ ಗುರಮನ್‌ಪ್ರೀತ್ ಸಿಂಗ್ ಮತ್ತು ಗುತ್ತಿಗೆದಾರ ಹರ್ಮಿಂದರ್ ಸಿಂಗ್ ಹಮ್ಮಿಯನ್ನು ಬಂಧಿಸಿದ ಕೆಲವು ದಿನಗಳ ನಂತರ ಇವರನ್ನು ಬಂಧಿಸಲಾಗಿದೆ.

ಇವರಿಬ್ಬರು ಸಿಂಗ್‌ ಅವರು ಸಚಿವರಾಗಿದ್ದಾಗ ಅರಣ್ಯ ಇಲಾಖೆಯಲ್ಲಿನ ಆಪಾದಿತ ಅಕ್ರಮಗಳ ವಿವರಗಳನ್ನು ಒದಗಿಸಿದ್ದಾರೆ ಎಂಬ ಆರೋಪ ಇದೆ. ಪಂಜಾಬ್‌ನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಏಪ್ರಿಲ್‌ನಲ್ಲಿ ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.

ಈ ಬಗ್ಗೆ ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಮುಖ್ಯ ನಿರ್ದೇಶಕ ವರೀಂದರ್ ಕುಮಾರ್ ಮಾತನಾಡಿ, ಜಿಲ್ಲಾ ಅರಣ್ಯಾಧಿಕಾರಿ ಮತ್ತು ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಿದಾಗ ಮಾಜಿ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಪ್ರತಿ ಮರವನ್ನು ಕಡಿಯಲು ಧರಂಸೋತ್‌ಗೆ 500 ರುಪಾಯಿ ನೀಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ಕಾಲಾನಂತರದಲ್ಲಿ ಅವರಿಗೆ ಸುಮಾರು 1.25 ಕೋಟಿ ನೀಡಲಾಗಿದೆ. ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್ ತಮ್ಮ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗೆ ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು ಸಹ ಹಣವನ್ನು ತೆಗೆದುಕೊಳ್ಳುತ್ತಿದ್ದರು ಎಂದು ರೋಪಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಬಂಧನ ರಾಜಕೀಯ ಸೇಡಿನ ಕ್ರಮ ಎಂದು ಬಣ್ಣಿಸಿದ್ದಾರೆ. ಭಗವಂತ್ ಮನ್ ಸಾಹಿಬ್ ನೀವು ನಿರೀಕ್ಷಿಸಿದಂತೆ ಸಾಧು ಸಿಂಗ್ ಧರಮ್‌ಸೋಟ್ ಅವರನ್ನು ಬಂಧಿಸುವ ಮೂಲಕ ಕಾನೂನುಬಾಹಿರ ಕ್ರಮ, ನಿರುದ್ಯೋಗ ಮತ್ತು ಪಂಜಾಬ್‌ನಲ್ಲಿ ಕೇಜ್ರಿವಾಲ್ ಮತ್ತು ಇತರರ ಮಧ್ಯೆ ಹಸ್ತಕ್ಷೇಪ ಮಾಡುವ ಸಮಸ್ಯೆಗಳನ್ನು ನಿವಾರಿಸಲು ಬಯಸುತ್ತೀರಿ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ. ದಯವಿಟ್ಟು ಇದನ್ನು ಕಾಂಗರೂ ನ್ಯಾಯಾಲಯದ ನ್ಯಾಯವನ್ನಾಗಿ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

   ದಕ್ಷಿಣ ಆಫ್ರಿಕಾ ಪ್ಲೇಯರ್ಸ್ ಗೆ ಶ್ರೇಯಸ್ ಅಂದ್ರೆ ಭಯ | Oneindia Kannada
   English summary
   The Vigilance Bureau has arrested Panjab former minister and Congress leader Sadhu Singh Dharansoot on charges of corruption.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X