ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ರಷ್ಯಾದ ಎಸ್‌-400 ಕ್ಷಿಪಣಿ ನಿರೋಧಕ ನಿಯೋಜನೆ

|
Google Oneindia Kannada News

ಚಂಡೀಗಢ, ಡಿಸೆಂಬರ್ 21: ರಷ್ಯಾದ ಎಸ್‌-400 ಕ್ಷಿಪಣಿ ನಿರೋಧಕದ ಮೊದಲ ತಂಡವನ್ನು ಪಂಜಾಬ್ ಗಡಿಯಲ್ಲಿ ನಿಯೋಜಿಸಲಾಗಿದೆ. ವಾಯು ಮತ್ತು ಸಮುದ್ರ ಮಾರ್ಗಗಳಿಂದ ಎಸ್​-400 ಘಟಕಗಳನ್ನು ಭಾರತಕ್ಕೆ ತರಲಾಗಿದೆ. ಈ ವರ್ಷದ ಅಂತ್ಯದಲ್ಲಿ ಮೊದಲ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ರಷ್ಯಾ ತಲುಪಿಸಲಿದೆ.

ಶತ್ರುದೇಶದಿಂದ ಹಾರಿಬರುವ ವಿಮಾನಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು 400 ಕಿಮೀ ದೂರದಲ್ಲಿ ಗುರುತಿಸಿ, ಪ್ರತಿರೋಧ ಕ್ರಮ ಜರುಗಿಸಲು ಎಸ್​-400 ಘಟಕಗಳು ನೆರವಾಗಲಿವೆ. ಒಂದು ವೇಳೆ ಸಂಘರ್ಷ ಪರಿಸ್ಥಿತಿ ಏರ್ಪಟ್ಟರೆ ಸಮರಭೂಮಿಯಲ್ಲಿ ಎಸ್​-400 ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಆಗದು.

ಎಸ್-400 ಕ್ಷಿಪಣಿ ನಿರೋಧಕ ವ್ಯವಸಸ್ಥೆಯಲ್ಲಿ ನಾಲ್ಕು ವಿಧದ ಕ್ಷಿಪಣಿಗಳಿರುತ್ತವೆ. ಶತ್ರುದೇಶಗಳ ವಿಮಾನಗಳು, ಖಂಡಾಂತರ ಕ್ಷಿಪಣಿಗಳು, ವೈಮಾನಿಕ ದಾಳಿ ಮುನ್ಸೂಚನೆ ನೀಡುವ ವಿಮಾನಗಳನ್ನು ಇವು ಹೊಡೆದುರುಳಿಸಬಲ್ಲವು. ದೂರಗಾಗಿ ಕ್ಷಿಪಣಿಗಳನ್ನು 400ರಿಂದ 250 ಕಿಮೀ, ಮಧ್ಯಮ ಹಂತದ ಕ್ಷಿಪಣಿಗಳನ್ನು 120 ಕಿಮೀ ಮತ್ತು ಕಡಿಮೆ ಅಂತರದ ಕ್ಷಿಪಣಿಗಳನ್ನು 40 ಕಿಮೀ ದೂರದಲ್ಲಿ ಹೊಡೆದುರುಳಿಸಬಲ್ಲದು.

First Squadron Of S-400 Deployed In Punjab Sector: Report

ಎಸ್​-400 ಬಳಕೆಗಾಗಿ ರಷ್ಯಾದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮೊದಲ ತುಕಡಿಯನ್ನು ನಿಯೋಜಿಸಿದ ನಂತರ ಪೂರ್ವದ ಗಡಿಗಳಲ್ಲಿ ಹೆಚ್ಚುವರಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಎಎನ್​ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಕ್ಟೋಬರ್ 2018ರಲ್ಲಿ ಭಾರತವು ಎಸ್​-400 ಕ್ಷಿಪಣಿ ವ್ಯವಸ್ಥೆಯ ಸ್ಥಾಪನೆಗೆ 5.43 ಶತಕೋಟಿ ಡಾಲರ್​ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದವಾದ ಐದು ವರ್ಷಗಳ ಒಳಗೆ ಘಟಕಗಳ ಪೂರೈಕೆ ಆಗುತ್ತದೆ ಎಂದು ರಷ್ಯಾ ತಿಳಿಸಿದೆ.

"ಮೊದಲ ಸ್ಕ್ವಾಡ್ರನ್ ಅನ್ನು ಪಂಜಾಬ್ ಸೆಕ್ಟರ್‌ನಲ್ಲಿ ನಿಯೋಜಿಸಲಾಗುತ್ತಿದೆ. ಮೊದಲ ಎಸ್‌-400 ಕ್ಷಿಪಣಿ ನಿರೋಧಕ ತುಕಡಿಯು ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳ ವೈಮಾನಿಕ ಬೆದರಿಕೆಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಹೊಂದಿವೆ" ಎಂದು ಸರ್ಕಾರಿ ಮೂಲಗಳು ಎಎನ್‌ಐಗೆ ತಿಳಿಸಿವೆ.

ಚೀನಾ ಈಗಾಗಲೇ ಎಸ್​-400 ತುಕಡಿಗಳನ್ನು ಲಡಾಖ್ ಸುತ್ತುವರಿಯುವ ಟಿಬೆಟ್ ಮತ್ತು ಅರುಣಾಚಲ ಪ್ರದೇಶದಲ್ಲಿ ನೆಲೆಗೊಳಿಸಿದೆ. ರಷ್ಯಾದಿಂದ ಖರೀದಿಸಿರುವ ವಾಯುದಾಳಿ ನಿರೋಧಕ ವ್ಯವಸ್ಥೆಯು ಈಗಾಗಲೇ ಭಾರತ ತಲುಪಿದೆ.

ಈ ಘಟಕಗಳನ್ನು ಮೊದಲು ಪಶ್ಚಿಮ ವಲಯದಲ್ಲಿ ಸ್ಥಾಪಿಸಲು ರಕ್ಷಣಾ ಇಲಾಖೆ ಉದ್ದೇಶಿಸಿದೆ. ಚೀನಾ ಮತ್ತು ಪಾಕಿಸ್ತಾನದಿಂದ ಇರುವ ಬೆದರಿಕೆಯನ್ನು ಏಕಕಾಲಕ್ಕೆ ಎದುರಿಸಲು ಸಾಧ್ಯವಿರುವ ಆಯಕಟ್ಟಿನ ಪ್ರದೇಶದಲ್ಲಿ ಈ ಘಟಕಗಳನ್ನು ನೆಲೆಗೊಳಿಸಲು ಭಾರತ ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳನ್ನು ಉದ್ದೇಶಿಸಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಎಸ್-400 ವಾಯುದಾಳಿ ನಿರೋಧಕ ಖರೀದಿಗಾಗಿ ಭಾರತ ಸರ್ಕಾರವು ಸುಮಾರು 35,000ರೂ. ಕೋಟಿ ಮೊತ್ತದ ಒಪ್ಪಂದವನ್ನು ರಷ್ಯಾದೊಂದಿಗೆ ಮಾಡಿಕೊಂಡಿದೆ. ಐದು ಎಸ್​-400 ತುಕಡಿಗಳನ್ನು ರೂಪಿಸಿ, ನೆಲೆಗೊಳಿಸಲು ಭಾರತ ಯೋಜನೆ ರೂಪಿಸಿದೆ.

ಸುಮಾರು 400 ಕಿ.ಮೀ. ದೂರದಲ್ಲಿರುವ ಸ್ಟೆಲ್ತ್ ತಂತ್ರಜ್ಞಾನಗಳನ್ನು ಒಳಗೊಂಡಂತೆ ಹಾರುವ ಗುರಿಗಳನ್ನು ಹೊಡೆದುರುಳಿಸಲು ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಸಿಡಿತಲೆ ಕ್ಷಿಪಣಿಗಳು ಮತ್ತು ಶಬ್ದಾತೀತ ಗುರಿಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಹಿಂದಿನ ಆವೃತ್ತಿಯಾದ S-300ಗೆ ಹೋಲಿಸಿದರೆ S-400 ಸುಮಾರು 2.5 ಪಟ್ಟು ಹೆಚ್ಚು ವೇಗದ ಫೈರಿಂಗ್ ದರವನ್ನು ಹೊಂದಿದೆ. ಈ ಸರಣಿಯ ಮೊದಲ ಎಸ್-400 ಸ್ಕ್ವಾಡ್ರನ್ ವಿತರಣೆ ಪ್ರಕ್ರಿಯೆ ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ಭಾರತಕ್ಕೆ ಉಪಕರಣಗಳನ್ನು ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೇಶದೊಳಗೆ ಬರುವ ಶತ್ರು ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು 400 ಕಿ.ಮೀ. ವ್ಯಾಪ್ತಿಯೊಳಗೆ ನಾಶಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ಸುಮಾರು 600 ಕಿ.ಮೀ. ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಎಸ್‌-400 ಕ್ಷಿಪಣಿ ನಿರೋಧಕ ವ್ಯವಸ್ಥೆಯು ನಾಲ್ಕು ವಿಭಿನ್ನ ಕ್ಷಿಪಣಿಗಳನ್ನು ಹೊಂದಿದ್ದು ಅದು ಶತ್ರು ವಿಮಾನಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು AWACS ವಿಮಾನಗಳನ್ನು 400 ಕಿಮೀ, 250 ಕಿಮೀ, ಮಧ್ಯಮ-ಶ್ರೇಣಿಯ 120 ಕಿ.ಮೀ. ಮತ್ತು ಅಲ್ಪ-ಶ್ರೇಣಿಯ 40 ಕಿಮೀ ಅಂತರದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಭಾರತೀಯ ವಾಯುಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಎಸ್-40 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿರ್ವಹಿಸಲು ಈಗಾಗಲೇ ರಷ್ಯಾದಲ್ಲಿ ತರಬೇತಿ ಪಡೆದಿದ್ದಾರೆ. ಈ ಸಮರ್ಥ ವಾಯು ರಕ್ಷಣಾ ವ್ಯವಸ್ಥೆಯು ದಕ್ಷಿಣ ಏಷ್ಯಾದ ಆಕಾಶದಲ್ಲಿ ಭಾರತಕ್ಕೆ ವಾಯು ಗಡಿಗೆ ಭದ್ರತೆ ನೀಡಲಿದೆ. ಶತ್ರು ವಿಮಾನಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು 400 ಕಿಮೀ ದೂರದಿಂದ ಹೊಡೆದುರುಳಿಸಲು ಎಸ್‌-400 ಸಮರ್ಥವಾಗಿದೆ.

English summary
The Indian Air Force (IAF) on Monday first squadron of deployed Russia-made S-400 missile system in the Punjab sector, news agency ANI reported. This will give a boost to country's air defence capabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X