ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಸುತ್ತಿನ ಜನಗಣತಿ ಎಲ್ಲಿಂದ ಪ್ರಾರಂಭ: ಯಾವಾಗ?

|
Google Oneindia Kannada News

ಚಂಡೀಗಢ, ಫೆಬ್ರವರಿ 15: ಮೊದಲನೇ ಹಂತದ ಜನಗಣತಿ ಹರ್ಯಾಣದಿಂದ ಪ್ರಾರಂಭವಾಗಲಿದೆ.

ಜನಗಣತಿ 2021 ಹರ್ಯಾಣದಿಂದ ಆರಂಭವಾಗಲಿದ್ದು, ಮೇ 1ರಿಂದ ಜೂನ್ 15ರವರೆಗೆ ನಡೆಯಲಿದೆ. ಒಟ್ಟು 58 ಸಾವಿರ ಮೇಲ್ವಿಚಾರಕರಿರಲಿದ್ದಾರೆ.

ಏನಿದು NPR? CAA, NRC ಮತ್ತು NPR ಸಂಬಂಧ, ವ್ಯತ್ಯಾಸಗಳೇನು?ಏನಿದು NPR? CAA, NRC ಮತ್ತು NPR ಸಂಬಂಧ, ವ್ಯತ್ಯಾಸಗಳೇನು?

ಜನಗಣತಿ ಅಧಿಕಾರಿಗಳು ಶುಕ್ರವಾರ ನಡೆದ ರಾಜ್ಯ ಮಟ್ಟದ ಸಮಾವೇಶವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ.ಶುಕ್ರವಾರ ಹರಿಯಾಣದಲ್ಲಿ ಎನ್‌ಪಿಆರ್ ಅಪ್‌ಡೇಷನ್ ಕಾರ್ಯಕ್ರಮದಲ್ಲಿ ಹರ್ಯಾಣ ಮುಖ್ಯ ಕಾರ್ಯದರ್ಶಿ ಕೇಶ್ನಿ ಆನಂದ್ ಅರೋರಾ ನೇತೃತ್ವದಲ್ಲಿ ಸಭೆ ನಡೆಯಿತು. ಜನಗಣತಿ ಆಯುಕ್ತ ವಿವೇಕ್ ಜೋಶಿ ಹಾಜರಿದ್ದರು.

First Phase Of Census 2021 To Be Conducted In Haryana

ಎಲ್ಲಾ ಪ್ರಕ್ರಿಯೆಗಳು ಅಣತಿಯೆಂತೇ ನಡೆಯಬೇಕು. ಮೇ 1ರಿಂದ ಜೂನ್ 15ರೊಳಗಾಗಿ ಹರಿಯಾಣದಲ್ಲಿ ಜನಗಣತಿ ಮುಗಿಯಬೇಕು ಎಂದು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಜನಗಣತಿ ಡಾಟಾವನ್ನು ವಿಶೇಷವಾಗಿ ರೂಪಿಸಿರುವ ಮೊಬೈಲ್ ಅಪ್ಲಿಕೇಷನ್ ಮೂಲಕ ಪಡೆಯಬಹುದಾಗಿದೆ.ಕಟ್ಟಡ ಸಂಖ್ಯೆ, ಸೆನ್ಸಸ್‌ ಹೌಸ್‌ ಸಂಖ್ಯೆ, ನಿವಾಸಿಗಳ ಸಂಖ್ಯೆ, ಕುಡಿಯುವ ನೀರಿನ ಮೂಲ, ಬೆಳಕಿನ ಮೂಲ, ಶೌಚಾಲಾಯ ವ್ಯವಸ್ಥೆ ಹಾಗೂ ಮಾದರಿ, ಟಿವಿ, ಲ್ಯಾಪ್‌ಟಾಪ್‌, ಇಂಟರ್‌ನೆಟ್‌, ಮೋಟಾರ್‌ ಸೈಕಲ್‌, ಕಾರು, ಮೊಬೈಲ್‌ ಸಂಖ್ಯೆ ಸೇರಿದಂತೆ ಒಟ್ಟು 31 ವಿಚಾರಗಳ ಬಗ್ಗೆ ಪ್ರತಿ ಮನೆಯಿಂದ ಮಾಹಿತಿ ಸಂಗ್ರಹಿಸಲಾಗುವುದು.

ಇದೇ ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ಮಾದರಿಯಲ್ಲಿ ನೋಂದಣಿ ಮಾಡಲಾಗುತ್ತಿದೆ. ಎರಡನೇ ಹಂತದ ಜನಗಣತಿ ಫೆಬ್ರವರಿ 9 ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ.

ಜನಗಣತಿಯು 1948ರ ಜನಗಣತಿ ಕಾಯ್ದೆಯಿಂದ ಮಾನ್ಯತೆ ಪಡೆದು ನಡೆಯುತ್ತದೆ. ಎನ್‌ಪಿಆರ್‌ಅನ್ನು 1955ರ ಪೌರತ್ವ ಕಾಯ್ದೆಯಡಿ ರೂಪಿಸಲಾದ ನಿಯಮಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. 1955ರ ಪೌರತ್ವ ಕಾಯ್ದೆಗೆ 2004ರಲ್ಲಿ ಸೆಕ್ಷನ್ 14A ಅನ್ನು ಅಡಕ ಮಾಡಲಾಗಿತ್ತು. ಇದರ ಮೂಲಕ ಭಾರತದ ಪ್ರತಿ ನಾಗರಿಕನ ಕಡ್ಡಾಯ ನೋಂದಣಿ ಮಾಡಿಕೊಳ್ಳುವುದು ಹಾಗೂ ಅವರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡುವುದಕ್ಕೆ ಚಾಲನೆ ನೀಡಲಾಗಿತ್ತು.

ಈ ಪಟ್ಟಿಯನ್ನು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಸಿಎಎ-ಎನ್‌ಆರ್‌ಸಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿರುವ ಬೆನ್ನಿಗೆ ಈ ಅಧಿಸೂಚನೆ ಹೊರಬಿದ್ದಿದೆ.

English summary
The First phase of Census 2021 will be conducted in Haryana from may 1 to June 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X