ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಪೆ ಗುಣಮಟ್ಟ, 11 ಸ್ಯಾನಿಟೈಸರ್ ಕಂಪನಿಗಳ ವಿರುದ್ಧ ಎಫ್ಐಆರ್

|
Google Oneindia Kannada News

ಚಂಡೀಗಢ, ಆಗಸ್ಟ್ 6: ಕೊರೊನಾ ವೈರಸ್‌ ಹರಡುವಿಕೆ ತಡೆಯಲು ಸ್ಯಾನಿಟೈಸರ್ ಬಳಕೆ ಅಗತ್ಯ. ಇಂತಹ ಸ್ಯಾನಿಟೈಸರ್ ಉದ್ಯಮದಲ್ಲೂ ಅಕ್ರಮ ನಡೆಯುತ್ತಿದೆ. ಕಳಪೆ ಗುಣಮಟ್ಟದ ಕಾರಣ 11 ಸ್ಯಾನಿಟೈಸರ್ ಕಂಪನಿಗಳ ವಿರುದ್ಧ ಚಂಡೀಗಢ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಪರೀಕ್ಷೆಗೆ ಒಳಪಡಿಸಿದಾಗ ಗುಣಮಟ್ಟದ ನಿಯತಾಂಕಗಳು ವಿಫಲವಾದ ಕಾರಣ 11 ಸ್ಯಾನಿಟೈಜರ್ ಬ್ರಾಂಡ್‌ಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಬುಧವಾರ ತಿಳಿಸಿದ್ದಾರೆ.

ವಿಶ್ವಕ್ಕೆ ಮತ್ತೊಂದು 'ವೈರಸ್' ಅಂಟಿಸಲು ಹೊರಟಿದೆಯಾ ಚೀನಾ?ವಿಶ್ವಕ್ಕೆ ಮತ್ತೊಂದು 'ವೈರಸ್' ಅಂಟಿಸಲು ಹೊರಟಿದೆಯಾ ಚೀನಾ?

ರಾಜ್ಯದ ಹಲವು ಕಡೆಗಳಲ್ಲಿ ಸ್ಯಾನಿಟೈಸರ್ ಬ್ಯಾಂಡ್‌ಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಕಳೆಪೆ ಗುಣಮುಟ್ಟ ಹೊಂದಿದ್ದ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

Fir Filed Against 11 Sanitizer Company After Quality Test Failure At Haryana

ಎಫ್ಐಆರ್ ಜೊತೆಗೆ ಪರೀಕ್ಷೆಗಳಲ್ಲಿ ವಿಫಲವಾದ ಬ್ರ್ಯಾಂಡ್‌ಗಳ ಪರವಾನಗಿಯನ್ನು ರದ್ದುಗೊಳಿಸಲು ಅಥವಾ ಅಮಾನತುಗೊಳಿಸಲು ನೋಟಿಸ್ ನೀಡಲಾಗಿದೆ ಎಂದು ಸಚಿವ ವಿಜ್ ಸೂಚಿಸಿದ್ದಾರೆ. ಪರೀಕ್ಷೆಗಳಲ್ಲಿ ವಿಫಲವಾದ ಸ್ಯಾನಿಟೈಜರ್ ಬ್ರಾಂಡ್‌ಗಳ ಸಂಪೂರ್ಣ ಸ್ಟಾಕ್ ಅನ್ನು ಮಾರುಕಟ್ಟೆಯಿಂದ ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಹರಿಯಾಣದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯು ರಾಜ್ಯಾದ್ಯಂತ ಸುಮಾರು 248 ಸ್ಯಾನಿಟೈಸರ್ ಕಂಪನಿಗಳ ಮಾದರಿಯನ್ನು ಸಂಗ್ರಹಿಸಿದ್ದು, ಅದರಲ್ಲಿ 123 ಮಾದರಿಗಳ ಪರೀಕ್ಷಾ ವರದಿಗಳು ಬಂದಿವೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸಚಿವ ವಿಜ್ 'ಇಲ್ಲಿಯವರೆಗೆ ಬಂದ ವರದಿಗಳಲ್ಲಿ, 109 ಮಾದರಿಗಳು ಗುಣಮಟ್ಟದ ಪರೀಕ್ಷೆಗಳನ್ನು ಪಾಸು ಮಾಡಿವೆ, ಆದರೆ 14 ವಿಫಲವಾಗಿದೆ. ಇವುಗಳಲ್ಲಿ 9 ಬ್ರಾಂಡ್‌ಗಳು ಗುಣಮಟ್ಟವಿಲ್ಲದವು ಎಂದು ಕಂಡುಬಂದಿದೆ, ಆದರೆ 5 ಬ್ರಾಂಡ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಮೆಥನಾಲ್ ಇರುವುದು ಕಂಡುಬಂದಿದೆ, ಇದು ಹಾನಿಕಾರಕವಾಗಿದೆ' ಎಂದು ಹೇಳಿದರು.

English summary
Haryana police have filed FIR against 11 sanitizer company after Quality test failure. and also suspend the license of the brands whose samples failed the tests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X