• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಶಾಸಕನನ್ನು ಥಳಿಸಿದ ಪ್ರತಿಭಟನಾನಿರತ ರೈತರು

|
Google Oneindia Kannada News

ಚಂಡೀಗಢ, ಮಾರ್ಚ್ 28: ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಂಬಾಜ್‌ನಲ್ಲಿ ಬಿಜೆಪಿ ಶಾಸಕನಿಗೆ ಥಳಿಸಿದ್ದಾರೆ. ಕಾಂಗ್ರೆಸ್ ಈ ದಾಳಿಯನ್ನು ಖಂಡಿಸಿದೆ.

ಬಿಜೆಪಿಯ ಅಬೋರ್ ಕ್ಷೇತ್ರದ ಶಾಸಕ ಅರುಣ್ ನಾರಂಗ್ ಮೇಲೆ ರೈತರು ಹಲ್ಲೆ ಮಾಡಿದ್ದು, ಶರ್ಟ್ ಹರಿದು ಹಾಕಿದ್ದಾರೆ. ಶಾಸಕರ ಮೇಲೆ ಮಸಿಯನ್ನು ಎರಚಿದ್ದಾರೆ.

ಶಿವಮೊಗ್ಗ ರೈತ ಸಮಾವೇಶದಿಂದ ರೈತ ಸಂಘಕ್ಕೆ ಲಾಭವೇನು.. ನಷ್ಟವೇನು? ಶಿವಮೊಗ್ಗ ರೈತ ಸಮಾವೇಶದಿಂದ ರೈತ ಸಂಘಕ್ಕೆ ಲಾಭವೇನು.. ನಷ್ಟವೇನು?

ಪಂಜಾಬ್‌ನಲ್ಲಿನ ಅಕಾಲಿದಳ ಮತ್ತು ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿವೆ. ಇಂತಹ ಘಟನೆಗಳಿಂದ ರೈತರ ಹೋರಾಟದ ಶಕ್ತಿಯನ್ನು ಕುಗ್ಗಿಸಲಿವೆ ಎಂದು ಹೇಳಿದ್ದಾರೆ.

ನರ ಭಕ್ಷಕ ನಾಪತ್ತೆ: ಕೊಡಗು ಡಿಸಿ, ಎಸ್ಪಿಗೆ ರೈತ ಸಂಘದಿಂದ ದಿಗ್ಭಂಧನ ನರ ಭಕ್ಷಕ ನಾಪತ್ತೆ: ಕೊಡಗು ಡಿಸಿ, ಎಸ್ಪಿಗೆ ರೈತ ಸಂಘದಿಂದ ದಿಗ್ಭಂಧನ

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಶಾಸಕ ಅರುಣ್ ನಾರಂಗ್ ಹೋಗುತ್ತಿದ್ದರು. ಆಗ ರೈತ ಸಂಘಟನೆಗಳ ಸದಸ್ಯರು ಅವರನ್ನು ಸುತ್ತುವರೆದಿದ್ದಾರೆ. ಅವರ ಮೇಲೆ ಮಸಿಯನ್ನು ಎರಚಿದ್ದಾರೆ.

ಮಾ.31ರಂದು ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ್ ಸಮಾವೇಶಮಾ.31ರಂದು ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ

ತಕ್ಷಣ ಪೊಲೀಸರು ಶಾಸಕರನ್ನು ಸ್ಥಳೀಯ ಅಂಗಡಿಯೊಂದಕ್ಕೆ ಕರೆದುಕೊಂಡು ಹೋದರು. ಅವರು ಅಂಗಡಿಯಿಂದ ಹೊರಬರುತ್ತಿದ್ದಂತೆ ಮತ್ತೆ ಸುತ್ತುವರೆದ ಗುಂಪು ಅವರ ಮೇಲೆ ಹಲ್ಲೆ ಮಾಡಿದೆ, ಶರ್ಟ್ ಹರಿದು ಹಾಕಿದೆ.

ಶಾಸಕರು ಪತ್ರಿಕಾಗೋಷ್ಠಿ ಮಾಡುವುದಕ್ಕೆ ರೈತ ಸಂಘದ ಸದಸ್ಯರು ವಿರೋಧ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. "ನನ್ನ ಮೇಲೆ ಕೆಲವರು ಹಲ್ಲೆ ಮಾಡಿದರು, ಬಟ್ಟೆ ಹರಿದು ಹಾಕಿದರು" ಎಂದು ಶಾಸಕ ಅರುಣ್ ನಾರಂಗ್ ಹೇಳಿದ್ದಾರೆ.

ಕೊಲೆ ಪ್ರಯತ್ನ ಆರೋಪದ ಅಡಿಯಲ್ಲಿ 250 ರಿಂದ 300 ಜನರ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ಗುಂಪಿನಲ್ಲಿದ್ದ ರೈತರನ್ನು ಗುರುತಿಸಲು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

English summary
Group of farmers thrashed BJP's Abohar MLA Arun Narang tore his clothes and threw black ink at him in Punjab's Muktsar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X