• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್‌ನಲ್ಲಿ ವಾರಾಂತ್ಯ ಲಾಕ್‌ಡೌನ್: ರೈತರ ಪ್ರತಿಭಟನೆ

|
Google Oneindia Kannada News

ಚಂಡೀಗಢ, ಮೇ 08: ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಪಂಜಾಬ್ ಸರ್ಕಾರ ವಾರಾಂತ್ಯ ಲಾಕ್‌ಡೌನ್ ವಿಧಿಸಿದ್ದು, ರೈತರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್‌ನ 32 ರೈತ ಸಂಘಗಳು ರಾಜ್ಯದಲ್ಲೂ ಲಾಕ್ ಡೌನ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು ಮತ್ತು ಸರ್ಕಾರದ ನಿರ್ಬಂಧಗಳನ್ನು ಧಿಕ್ಕರಿಸುವಂತೆ ಅಂಗಡಿಯವರನ್ನು ಒತ್ತಾಯಿಸಿದೆ.

ಅಬ್ಬಬ್ಬಾ..! ಮತ್ತೆ 4 ಲಕ್ಷ ಗಡಿ ದಾಟಿದ ದೈನಂದಿನ ಕೊರೊನಾ ಸಂಖ್ಯೆಅಬ್ಬಬ್ಬಾ..! ಮತ್ತೆ 4 ಲಕ್ಷ ಗಡಿ ದಾಟಿದ ದೈನಂದಿನ ಕೊರೊನಾ ಸಂಖ್ಯೆ

ಕೋವಿಡ್ -19 ಸೋಂಕು ಮತ್ತು ಸಾವು ನೋವುಗಳು ಹೆಚ್ಚುತ್ತಿರುವುದರ ಮಧ್ಯೆ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಲಾಕ್‌ಡೌನ್ ವಿರುದ್ಧ ರೈತರು ಶನಿವಾರ ಪಂಜಾಬ್‌ನ ಹಲವು ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ಲಾಕ್‌ಡೌನ್ ಪರಿಹಾರವಲ್ಲ. ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಖೋಕ್ರಿಕಲನ್ ಆರೋಪಿಸಿದರು.

ಮೊಗಾ, ಪಟಿಯಾಲ, ಅಮೃತಸರ, ಅಜ್ನಾಲಾ ಸೇರಿದಂತೆ ರಾಜ್ಯದ ಇತರ ಸ್ಥಳಗಳಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ನಾವು ಅಂಗಡಿ ಮಾಲೀಕರಿಗೆ ತಮ್ಮ ಅಂಗಡಿಗಳನ್ನು ತೆರೆಯುವಂತೆ ಮನವಿ ಮಾಡುತ್ತಿದ್ದೇವೆ. ನಾವು ಅವರೊಂದಿಗೆ ಇದ್ದೇವೆ ಎಂದು ಮೊಗಾದಲ್ಲಿ ಭಾರತಿ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಖೋಕ್ರಿಕಲನ್ ಅವರು ಹೇಳಿದ್ದಾರೆ.

English summary
Farmers took out protest marches at several places in Punjab on Saturday against the weekend lockdown imposed by the state government amid rising cases of COVID-19 infection and fatalities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X