• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೆಬ್ರವರಿ 2ರ ವೇಳೆ ಪ್ರತಿಭಟನಾ ಸ್ಥಳದಲ್ಲಿ ದಾಖಲೆ ಪ್ರಮಾಣದ ರೈತರು

|

ಚಂಡೀಗಢ,ಜನವರಿ 30: ಫೆಬ್ರವರಿ 2ರ ಹೊತ್ತಿಗೆ ಪ್ರತಿಭಟನಾ ಸ್ಥಳದಲ್ಲಿ ದಾಖಲೆ ಪ್ರಮಾಣದ ರೈತರು ಸೇರಿದ್ದಾರೆ ಎಂದು ಪ್ರತಿಭಟನಾ ನಿರತ ರೈತರ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜ.26 ರಂದು ನಡೆದ ಹಿಂಸಾಚಾರದ ಘಟನೆಯನ್ನೂ ರಾಜೇವಾಲ್ ಖಂಡಿಸಿದ್ದು ಆ ಘಟನೆ ದುರದೃಷ್ಟಕರ ಎಂದು ಹೇಳಿದ್ದಾರೆ.

ರಾಜಸ್ಥಾನ, ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ ಹಾಗೂ ಉತ್ತರಾಖಂಡ್ ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರು ಬೇರೆ ಬೇರೆ ರಾಜ್ಯಗಳಿಂದ ಆಗಮಿಸಲಿದ್ದಾರೆ ಎನ್ನುತ್ತಾರೆ ರಾಜೇವಾಲ್.

ದೆಹಲಿ ಗಲಭೆ ನಂತರ ಪಂಜಾಬ್ ಮೂಲದ ನೂರು ರೈತರು ಕಾಣೆ

ಜ.26 ರಿಂದ ನಾವು ದೆಹಲಿ ಗಡಿ ಪ್ರದೇಶಗಳಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ, ಆದರೆ ಸರ್ಕಾರ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ಅಧ್ಯಕ್ಷ ರಾಜೇವಾಲ್ ಆರೋಪಿಸಿದ್ದಾರೆ.

ತಪ್ಪು ಮಾಹಿತಿ ನೀಡುವ ಮೂಲಕ ಜನತೆಯನ್ನು ದಾರಿತಪ್ಪಿಸುವ ಚಳುವಳಿಗೆ ಮಸಿ ಬಳಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದೂ ರಾಜೇವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ರಾಜೇವಾಲ್ ಕರೆ ನೀಡಿದ್ದಾರೆ.

ಇದೇ ವೇಳೆ ಪ್ರತಿಭಟನಾ ಸ್ಥಳಗಳಲ್ಲಿ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸಿರುವ ಹರ್ಯಾಣ ಸರ್ಕಾರದ ಕ್ರಮವನ್ನು ರಾಜೇವಾಲ್ ಖಂಡಿಸಿದ್ದಾರೆ.

ಜ.26 ರಂದು ನಡೆದ ದುರದೃಷ್ಟಕರ ಘಟನೆ, ಹಿಂಸಾಚಾರದ ಕೆಲವು ಚಿತ್ರಗಳನ್ನು ತೋರಿಸಿ ಜನರಲ್ಲಿ ಭಯ ಮೂಡಿಸುವ ಕೆಲಸವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.

English summary
Farmer leader Balbir Singh Rajewal on Saturday said he expects a record gathering by February 2 at the border points of Delhi, where farmers are protesting against three recent agriculture laws of the Centre, with a large number of people from various States turning up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X