ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಪೇದೆಯಾಗಿದ್ದ ಕಾರ್ಗಿಲ್ ವೀರನನ್ನು ಕೊನೆಗೂ ಗುರುತಿಸಿದ ಸರ್ಕಾರ

|
Google Oneindia Kannada News

ಚಂಡೀಘಡ, ಜುಲೈ 26: ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ವೀರಚಕ್ರ ಪದಕ ಪಡೆದಿದ್ದ ಯೋಧ ಸಾಮಾನ್ಯ ಟ್ರಾಫಿಕ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ. ಆತನ ಸಾಧನೆ ಗುರುತಿಸಲು ಪಂಜಾಬ್ ಸರ್ಕಾರಕ್ಕೆ ಒಂಬತ್ತು ವರ್ಷಗಳು ಬೇಕಾದವು.

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಸತ್ಪಾಲ್ ಸಿಂಗ್ ಪಂಜಾಬ್‌ ರಾಜ್ಯದ ಸಂಗ್ರೂರ್ ಜಿಲ್ಲೆಯಲ್ಲಿ ಪೇದೆಯಾಗಿ ಒಂಬತ್ತು ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕೊನೆಗೂ ಅವರನ್ನು ಗುರುತಿಸಿರುವ ಪಂಜಾಬ್ ಸರ್ಕಾರ ಅವರಿಗೆ ಒಂದೇ ಬಾರಿ ಎರಡು ಪದೋನ್ನತಿ ನೀಡಿವೆ.

ಕಾರ್ಗಿಲ್ ವಿಜಯ್ ದಿವಸಕ್ಕೆ ಇಪ್ಪತ್ತು; ದೇಶ ಕಾಯುವ ಯೋಧರಿಗೆ ವಂದೇಕಾರ್ಗಿಲ್ ವಿಜಯ್ ದಿವಸಕ್ಕೆ ಇಪ್ಪತ್ತು; ದೇಶ ಕಾಯುವ ಯೋಧರಿಗೆ ವಂದೇ

ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು ನೇರವಾಗಿ ಆದೇಶ ಹೊರಡಿಸಿದ್ದು, ಪೇದೆಯಾಗಿದ್ದ ಸತ್ಪಾಲ್ ಸಿಂಗ್ ಅವರು ಈಗ ಇನ್ಸ್ಪೆಕ್ಟರ್ ಹುದ್ದೆಗೆ ಏರಿದ್ದಾರೆ. ಸತ್ಪಾಲ್ ಸಿಂಗ್ ಅವರಿಗಾಗಿಯೇ ಪೊಲೀಸ್‌ ಕಾನೂನಿನ 12.3 ನಿಯಮವನ್ನು ಸಡಿಸಿಲಾಗಿದೆ.

Double Promotion To Kargil Soldier Who Working As Police Constable

2010 ರಲ್ಲಿ ಸತ್ಪಾಲ್ ಅವರು ಪಂಜಾಬ್ ಪೊಲೀಸ್ ಸೇರುವ ಸಮಯದಲ್ಲಿ ಅವರ ಸಾಧನೆಯನ್ನು ಆಗಿನ ಅಕಾಲಿದಳ-ಬಿಜೆಪಿ ಸರ್ಕಾರವು ಪೂರ್ಣವಾಗಿ ನಿರ್ಲಕ್ಷಿಸಿವೆ ಎಂದು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು ಹೇಳಿದ್ದಾರೆ.

ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯ್ ಸಂದರ್ಭದಲ್ಲಿ ಸತ್ಪಾಲ್ ಸಿಂಗ್ ಅವರು, ದ್ರಾಸ್ ಸೆಕ್ಟರ್ ನಲ್ಲಿ ನಿಯೋಜನೆಗೊಂಡಿದ್ದರು. ಪಾಕಿಸ್ತಾನದ ಸೇನಾ ನಾಯಕನಾಗಿದ್ದ ಕರ್ನಲ್ ಶೇರ್ ಖಾನ್ ಸೇರಿದಂತೆ ನಾಲ್ವರನ್ನು ಯುದ್ಧದಲ್ಲಿ ಕೊಂದಿದ್ದರು.

English summary
Punjab government gave double promotion to Kargil soldier Satpal Singh who working as police constable in Punjab police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X