ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾರಿ ಬ್ಯಾಗ್‌ಗೆ 14 ರೂ.: ಡೊಮಿನೊಸ್‌ಗೆ ಬಿತ್ತು 10 ಲಕ್ಷ ರೂ. ದಂಡ

|
Google Oneindia Kannada News

ಚಂಡೀಗಢ, ಡಿಸೆಂಬರ್ 19: ಗ್ರಾಹಕರಿಗೆ ಹೆಚ್ಚಿನ ದರ ವಿಧಿಸುವ ಮೂಲಕ ಹಲವು ಸಲ ದಂಡ ತೆರಬೇಕಾದ ಶಿಕ್ಷೆ ಅನುಭವಿಸಿರುವ ಡೊಮಿನೊಸ್ ಪಿಜ್ಜಾ ಮತ್ತೆ ಎಡವಟ್ಟು ಮಾಡಿಕೊಂಡಿದೆ.

ಇಬ್ಬರು ವಿಭಿನ್ನ ಗ್ರಾಹಕರಿಗೆ ಕ್ಯಾರಿ ಬ್ಯಾಗ್‌ಗಾಗಿ 14 ರೂ. ಪಡೆದುಕೊಂಡಿದ್ದ ಡೊಮಿನೊಸ್ ಪಿಜ್ಜಾ ಭಾರೀ ದಂಡ ತೆರುವಂತಾಗಿದೆ. ಡೊಮಿನೊಸ್ ಪಿಜ್ಜಾದ ಮಾಲೀಕ ಸಂಸ್ಥೆ ಜುಬಿಲಿಯಂಟ್ ಫುಡ್ ವರ್ಕ್ಸ್ ಲಿಮಿಟೆಡ್‌ನ ಮನವಿಯನ್ನು ಚಂಡೀಗಢ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ವಜಾಗೊಳಿಸಿದೆ. ಕ್ಯಾರಿ ಬ್ಯಾಗ್‌ಗೆ 14 ರೂ. ದರ ವಿಧಿಸಿದ್ದ ಸಂಸ್ಥೆಯು ಇಬ್ಬರು ಗ್ರಾಹಕರಿಗೂ ಆ ಹಣವನ್ನು ಮರುಪಾವತಿ ಮಾಡುವಂತೆ ಸೂಚಿಸಿದೆ.

ಅಲ್ಲದೆ, ಗ್ರಾಹಕರಿಗೆ ಕಿರುಕುಳ, ಮಾನಸಿಕ ನೋವು ಮತ್ತು ವ್ಯಾಜ್ಯದ ವೆಚ್ಚವಾಗಿ ತಲಾ 1500 ರೂ. ಪರಿಹಾರ ನೀಡುವಂತೆ ಕೂಡ ಆದೇಶಿಸಿದೆ. ನಿಯಮಾವಳಿಗಳನ್ನು ಮೀರಿ ಗ್ರಾಹಕರಿಗೆ ತೊಂದರೆ ನೀಡಿದ್ದಕ್ಕಾಗಿ 9,80,000 ರೂ. ದಂಡವನ್ನು ಪಿಜಿಐ ಚಂಡೀಗಢ ನಿರ್ವಹಿಸುತ್ತಿರುವ ಬಡ ರೋಗಿಗಳ ಕಲ್ಯಾಣ ನಿಧಿಗೆ (ಪಿಪಿಡಬ್ಲ್ಯೂಎಫ್) ಠೇಚಣಿ ರೂಪದಲ್ಲಿ ಇರಿಸುವಂತೆ ಸಹ ನಿರ್ದೇಶಿಸಲಾಗಿದೆ.

Dominos Pizza Fined Rs 10 Lakh For Charging Rs 14 For Carry Bags

ಜಿತೇಂದರ್ ಬನ್ಸಾಲ್ ಎಂಬ ಗ್ರಾಹಕರಿಂದ ಡೊಮಿನೊಸ್, ಕ್ಯಾರಿ ಬ್ಯಾಗ್‌ಗೆ 14 ರೂ. ಹಣ ಪಡೆದುಕೊಂಡಿತ್ತು. ಇದರ ವಿರುದ್ಧ ಅವರು ಜುಲೈನಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು. ವೇದಿಕೆಯು ಸಂಸ್ಥೆಗೆ ಐದು ಲಕ್ಷ ರೂ. ದಂಡ ವಿಧಿಸಿತ್ತು. ಇದರ ವಿರುದ್ಧ ಮೇಲಿನ ಆಯೋಗಕ್ಕೆ ಮನವಿ ಸಲ್ಲಿಸಿದ್ದ ಸಂಸ್ಥೆ, ಕ್ಯಾರಿ ಬ್ಯಾಗ್‌ಗಳಿಗೆ ಹೆಚ್ಚಿನ ದರ ವಿಧಿಬಾರದು ಎಂದು ಮಾರಾಟಗಾರರನ್ನು ತಡೆಯಲು ಯಾವುದೇ ಕಾನೂನು ಇಲ್ಲ ಎಂದು ವಾದಿಸಿತ್ತು.

ವಕೀಲರಾಗಿರುವ ಪಂಕಜ್ ಚಾಂದ್‌ಗೋಥಿಯಾ ನ.13ರಂದು ಕ್ಯಾರಿ ಬ್ಯಾಗ್‌ಗೆ 14 ರೂ ವಿಧಿಸಿದ್ದ ಸಂಸ್ಥೆ ವಿರುದ್ಧ ಜಿಲ್ಲಾ ಗ್ರಾಹಕ ವ್ಯವಹಾರಗಳ ವ್ಯಾಜ್ಯ ಪರಿಹಾರ ವೇದಿಕೆ-IIಗೆ ದೂರು ನೀಡಿದ್ದರು. ಈ ದೂರು ಕೂಡ ಆಯೋಗದ ಮೆಟ್ಟಿಲೇರಿತ್ತು. ಇಲ್ಲಿಯೂ ಸಂಸ್ಥೆ ದಂಡದ ಮೊತ್ತ ತೆರುವಂತಾಗಿದೆ.

ಕಾನೂನಿನ ಪ್ರಕಾರ ಕ್ಯಾರಿ ಬ್ಯಾಗ್‌ಗೆ ಹಣ ನೀಡುವಂತೆ ಗ್ರಾಹಕರಿಗೆ ಹೇಳುವಂತಿಲ್ಲ. 2019ರ ಫೆಬ್ರವರಿಯಲ್ಲಿ ಕೂಡ ಇದೇ ರೀತಿಯ ಪ್ರಕರಣದಲ್ಲಿ ಡೊಮಿನೋಸ್ ದಂಡ ತೆತ್ತಿತ್ತು. ಆದರೆ ಆ ತಪ್ಪನ್ನು ಮತ್ತೆ ಮಾಡುವ ಮೂಲಕ ಪುನಃ ಭಾರಿ ದಂಡ ಕಟ್ಟುವಂತಾಗಿದೆ.

English summary
Domino's Pizza was fined Rs 10 lakh by Chandigarh consumer redressal commission for charging Rs 14 for carry bags for two different consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X