ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುಗ್ರಾಮದಲ್ಲಿ ಕಾರಿನಲ್ಲಿ1.30 ಕೋಟಿ ರೂ ನಗದು ಸಾಗಿಸುತ್ತಿದ್ದ ವ್ಯಕ್ತಿ ಬಂಧನ

|
Google Oneindia Kannada News

ಗುರುಗ್ರಾಮ, ಅಕ್ಟೋಬರ್ 18: ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, 1.30 ಕೋಟಿ ರೂ. ನಗದು ಸಾಗಿಸುತ್ತಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ.

ಅಕ್ಟೋಬರ್ 21ರಂದು ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಂಧಿತನನ್ನು ದಿವೇಶ್ ಎಂದು ಗುರುತಿಸಲಾಗಿದೆ. ಹರ್ಯಾಣದ ಎಂಜಿ ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಹಣ ಸಿಕ್ಕಿದೆ.

ಸಮೀಕ್ಷೆ; ಮಹಾರಾಷ್ಟ್ರ, ಹರ್ಯಾಣದಲ್ಲಿ ಯಾರಿಗೆ ಜಯ?ಸಮೀಕ್ಷೆ; ಮಹಾರಾಷ್ಟ್ರ, ಹರ್ಯಾಣದಲ್ಲಿ ಯಾರಿಗೆ ಜಯ?

ಗುರುಗ್ರಾಮ ಪೊಲೀಸ್ ಸುಭಾಷ್ ದಿವೇಶ ಅವರ ವಿಚಾರಣೆ ನಡೆಸುತ್ತಿದ್ದಾರೆ. ಮತದಾರರನ್ನು ಸೆಳೆಯಲು ಈ ಹಣ ಬಳಕೆ ಮಾಡುತ್ತಿದ್ದರು ಎನ್ನುವ ಅನುಮಾನ ವ್ಯಕ್ತವಾಗಿದೆ, ಇಲ್ಲವಾದಲ್ಲಿ ಅಷ್ಟೊಂದು ಹಣವನ್ನು ಯಾಕೆ ಅವರು ತೆಗೆದುಕೊಂಡು ಹೋಗುತ್ತಿದ್ದರು ಎನ್ನುವ ಪ್ರಶ್ನೆ ಎದುರಾಗಿದೆ.

Delhi Man Arrested In Gurugram With 1.30 Crore Cash

ಗುರುಗ್ರಾಮದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, 1172 ಚುನಾವಣಾ ಬೂತ್‌ಗಳಿವೆ. ನಾಲ್ಕು ಸಾವಿರ ಪೊಲೀಸರು ಭದ್ರತೆ ಒದಗಿಸಲಿದ್ದಾರೆ.

ದೆಹಲಿ, ಫರೀದಾಬಾದ್, ನೂಹ್ ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಶಾಂತಿ ಕದಡುವ ಯಾವುದೇ ಪ್ರಯತ್ನ ನಡೆಯದಂತೆ ಎಸ್‌ಎಚ್‌ಓ ನಿಗಾ ವಹಿಸಲಿದ್ದಾರೆ ಎಂದು ಗುರುಗ್ರಾಮ ಪೊಲೀಸ್ ಆಯುಕ್ತ ಅಖಿಲ್ ತಿಳಿಸಿದ್ದಾರೆ.

English summary
A man carrying Rs. 1.30 crore in the boot of his car was arrested in Gurugram on Thursday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X