• search
 • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವ್ಯಾಕ್ಸಿನ್ ಲಸಿಕೆ ಪಡೆದ ಮೇಲೆ ಹರ್ಯಾಣ ಸಚಿವ ಅನಿಲ್‌ ವಿಜ್‌ಗೆ ಕೊರೊನಾ ಸೋಂಕು

|

ಹರ್ಯಾಣ, ಡಿಸೆಂಬರ್ 05: ಹರ್ಯಾಣದ ಆರೋಗ್ಯ, ಗೃಹ ಸಚಿವ ಅನಿಲ್‌ವಿಜ್‌ಗೆ ಕೊರೊನಾ ಸೋಂಕು ತಗುಲಿದೆ.

ಈ ಕುರಿತು ಅವರು ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅನಿಲ್ ವಿಜ್ ಅವರು ನವೆಂಬರ್ 20 ರಂದು ಅಂಬಾಲಾದ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್‌ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದರು.

ಕೋವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗಕ್ಕೆ ಹರ್ಯಾಣದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಮಾರಕ ಕೊರೊನಾ ವೈರಸ್‌ಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯನ್ನು, ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಸ್ವೀಕರಿದ್ದರು.

ಅಂಬಾಲಾದ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಅನಿಲ್ ವಿಜ್ ಅವರ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು. ಅನಿಲ್ ವಿಜ್ ಸ್ವಯಂಪ್ರೇರಿತರಾಗಿ ಕೊವ್ಯಾಕ್ಸಿನ್ ಲಸಿಕೆಯನ್ನು ತಮ್ಮ ಮೇಲೆ ಪ್ರಯೋಗ ಮಾಡುವಂತೆ ಕೋರಿಕೊಂಡಿದ್ದರು.

ಅನಿಲ್ ವಿಜ್ ಆರೋಗ್ಯ ಸ್ಥಿರವಾಗಿದ್ದು, ಲಸಿಕೆ ಪಡೆದ ಮೇಲೆ ಅವರ ದೇಹದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ ಸುಮಾರು 10 ದಿನಗಳ ಬಳಿಕ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹರಿಯಾಣದಲ್ಲಿ ಮಾರಕ ಕೊರೊನಾ ವೈರಸ್‌ಗೆ ಸಂಶೋಧನಾ ಹಂತದಲ್ಲಿರುವ ಕೊವ್ಯಾಕ್ಸಿನ್ ಲಸಿಕೆಯ, ಮೂರನೇ ಹಂತದ ಪ್ರಯೋಗಾರ್ಥ ಪರೀಕ್ಷೆ ನಡೆಯುತ್ತಿದೆ.

   Chahal Jadeja ಅದಲು ಬದಲು ಸರಿ ಇಲ್ಲ ಎಂದ Henriques | Oneindia Kannada

   ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆ ದೇಶದಾದ್ಯಂತ ಗಮನ ಸೆಳೆದಿದೆ.

   English summary
   Days after getting a shot of Covid vaccine, Haryana Home and Health Minister Anil Vij on Saturday tested positive for corona virus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X