ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಗಾಯಕ ದಲೆರ್ ಮೆಹಂದಿಗೆ 2 ವರ್ಷ ಜೈಲುಶಿಕ್ಷೆ

|
Google Oneindia Kannada News

ಚಂಡೀಗಡ, ಜುಲೈ 14: ಹತ್ತೊಂಬತ್ತು ವರ್ಷಗಳ ಹಿಂದಿನ ಅಕ್ರಮ ಮಾನವ ಸಾಗಾಣಿಕೆ ಪ್ರಕರಣವೊಂದರಲ್ಲಿ ಗಾಯಕ ದಲೆರ್ ಮೆಹಂದಿಗೆ ಎರಡು ವರ್ಷ ಜೈಲುಶಿಕ್ಷೆ ಮತ್ತೆ ದೃಢಪಟ್ಟಿದೆ. ಪಾಟಿಯಾಲ ಸೆಷನ್ಸ್ ಕೋರ್ಟ್ ಗುರುವಾರ ಕೆಳಗಿನ ಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.

2003ರಲ್ಲಿ ದಾಖಲಾದ ಪ್ರಕರಣದಲ್ಲಿ ಟ್ರಯಲ್ ಕೋರ್ಟ್ ೨೦೧೮ರಲ್ಲಿ ದಲೆರ್ ಮೆಹಂದಿಯನ್ನು ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಆನಂತರ ಜಾಮೀನು ಪಡೆದು ಹೊರಬಂದಿದ್ದ ದಲೆರ್ ಮೆಹಂದಿ ಪಾಟಿಯಾಲ ಸೆಷೆನ್ಸ್ ಕೋರ್ಟ್‌ನಲ್ಲಿ ಆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

ಸೋನಿಯಾಗೆ ಇಡಿ ನೋಟಿಸ್‌: ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆಸೋನಿಯಾಗೆ ಇಡಿ ನೋಟಿಸ್‌: ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಏನಿದು ಪ್ರಕರಣ?
ಪಿಜನ್ ಪೆಲ್ಟಿಂಗ್ ಮ್ಯೂಸಿಕ್ ತಂಡಗಳ ಮೂಲಕ ಜನರನ್ನು ಅಮೆರಿಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ದಲೆರ್ ಮೆಹಂದಿಯ ಅಣ್ಣ ಶಂಶೇರ್ ಮೆಹಂದಿ ಮೇಲೆ ಪ್ರಕರಣ ದಾಖಲಾಯಿತು. ನಂತರ ದಲೆರ್ ಮೆಹಂದಿಯ ಹೆಸರೂ ಈ ಪ್ರಕರಣದಲ್ಲಿ ತಗುಲಿಹಾಕಿಕೊಂಡಿತು. ಅಮೆರಿಕಕ್ಕೆ ಕರೆದೊಯ್ಯುತ್ತೇವೆಂದು ಜನರಿಂದ ದೊಡ್ಡ ಮೊತ್ತದ ಹಣ ಪಡೆದು ವಂಚಿಸಿದ ಆರೋಪಗಳೂ ಕೇಳಿಬಂದವು. ಮೆಹಂದಿ ಸಹೋದರರು ಸೇರಿ ಏಳು ಮಂದಿ ವಿರುದ್ಧ ೨೦೦೩ರಲ್ಲಿ ಪ್ರಕರಣ ದಾಖಲಾಯಿತು.

Daler Mehndis 2 Year Imprisonment Sentence Upheld by Higher Court

2018ರಲ್ಲಿ ಪಾಟಿಯಾಲ ಟ್ರಯಲ್ ಕೋರ್ಟ್ ದಲೆರ್ ಮೆಹಂದಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತು. ಇದನ್ನು ಪ್ರಶ್ನಿಸಿ ಮೆಹಂದಿ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿಯೂ ಇದೇ ತೀರ್ಪು ಎತ್ತಿಹಿಡಿಯಲಾಗಿದೆ. ಸದ್ಯ ಪೊಲೀಸರು ಮೆಹಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.ಬಕ್ಷೀಶ್ ಸಿಂಗ್ ಎಂಬುವವರು ನೀಡಿದ ದೂರಿನ ಮೇರೆಗೆ ಮೊದಲು ಪ್ರಕರಣ ದಾಖಲಾಯಿತು. ಬಳಿಕ 35ಕ್ಕೂ ಹೆಚ್ಚು ದೂರುಗಳು ಮುಂದಿನ ದಿನಗಳಲ್ಲಿ ದಾಖಲಾದವು.

ನ್ಯಾಯಯುತ ಮತ್ತು ಸಮಂಜಸವಾದ ಟೀಕೆ ನ್ಯಾಯಾಂಗ ನಿಂದನೆಯಲ್ಲನ್ಯಾಯಯುತ ಮತ್ತು ಸಮಂಜಸವಾದ ಟೀಕೆ ನ್ಯಾಯಾಂಗ ನಿಂದನೆಯಲ್ಲ

1998 ಮತ್ತು 1999ರಲ್ಲಿ ಮೆಹಂದಿ ಸಹೋದರರು ಎರಡು ಮ್ಯೂಸಿಕ್ ತಂಡಗಳ ಜೊತೆ 10 ಮಂದಿಯನ್ನು ಅಮೆರಿಕಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರನ್ನು ವಾಪಸ್ ಕರೆದುಕೊಂಡು ಬರದೇ ಅಲ್ಲಿಯೇ ಅಕ್ರಮವಾಗಿ ಬಿಟ್ಟು ಬರಲಾಯಿತು ಎಂಬ ಆರೋಪ ಕೇಳಿಬಂದಿತ್ತು.

2018ರಲ್ಲಿ ಪಾಟಿಯಾಲ ಟ್ರಯಲ್ ಕೋರ್ಟ್ ದಲೆರ್ ಮೆಹಂದಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತು. ಇದನ್ನು ಪ್ರಶ್ನಿಸಿ ಮೆಹಂದಿ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿಯೂ ಇದೇ ತೀರ್ಪು ಎತ್ತಿಹಿಡಿಯಲಾಗಿದೆ. ಸದ್ಯ ಪೊಲೀಸರು ಮೆಹಂದಿಯನ್ನು ಕಸ್ಟಡಿಗೆ ತೆಗೆದುಕೊಂಡರಾದರೂ ಜಾಮೀನು ನೀಡಿ ಬಿಡುಗಡೆ ಮಾಡಲಾಯಿತು.

ಬಿಜೆಪಿ ಸೇರ್ಪಡೆ
2018ರಲ್ಲಿ ಪಾಟಿಯಾಲ ಟ್ರಯಲ್ ಕೋರ್ಟ್ 2 ವರ್ಷ ಜೈಲುಶಿಕ್ಷೆ ವಿಧಿಸಿದ ಬಳಿಕ ಜಾಮೀನಿನ ಮೇಲೆ ಹೊರಬಂದ ದಲೆರ್ ಮೆಹಂದಿ ಒಂದು ವರ್ಷ ನಂತರ ಬಿಜೆಪಿ ಸೇರಿದ್ದರು.

ಯಾರು ಈ ದಲೆರ್ ಮೆಹಂದಿ?
54 ವರ್ಷದ ದಲೆರ್ ಮೆಹಂದಿ ಖ್ಯಾತ ಪಂಜಾಬಿ ಪಾಪ್ ಗಾಯಕ. ತೊಂಬತ್ತರ ದಶಕ ಮತ್ತು 2000ರ ದಶಕದಲ್ಲಿ ಬಹಳ ಹೆಸರುವಾಸಿಯಾಗಿದ್ದವರು. ಅದರಲ್ಲೂ ತೊಂಬತ್ತರ ದಶಕದಲ್ಲಿ ಇವರ ಹಾಡುಗಳು ಸಿಕ್ಕಾಪಟ್ಟೆ ಖ್ಯಾತವಾಗಿದ್ದವು. ಇವರ ಆಲ್ಬಂಗಳು ಬಿಸಿದೋಸೆಗಳಂತೆ ಮಾರಾಟವಾಗುತ್ತಿದ್ದವು.

ಇವರ ಒಬ್ಬ ಸಹೋದರ ಮಿಕಾ ಸಿಂಗ್ ಕೂಡ ಖ್ಯಾತ ಗಾಯಕ. ಗಾಯಕ ಹನ್ಸ್ ರಾಜ್ ಹನ್ಸ್ ಅವರ ಮಗ ನವರಾಜ್ ಹನ್ಸ್ ದಲೆರ್ ಮೆಹಂದಿಯ ಅಳಿಯ.

(ಒನ್ಇಂಡಿಯಾ ಸುದ್ದಿ)

English summary
Patiala Session court has upheld verdict given by trial court sentencing Daler Mehndi 2 years imprisonment in human trafficking case of 2003.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X