ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ನಗೆಟಿವ್ Or ಪಾಸಿಟಿವ್: 1400 ರೂ.ಗೆ ಕೇಳಿದ ಪ್ರಮಾಣಪತ್ರ!

|
Google Oneindia Kannada News

ಚಂಡೀಘರ್, ನವೆಂಬರ್.23: ಕೊರೊನಾವೈರಸ್ ಹರಡುವಿಕೆ ನಡುವೆ ಹರಿಯಾಣದಲ್ಲಿ ವೈದ್ಯಕೀಯ ಪ್ರಮಾಣಪತ್ರ ವಿತರಣೆಯಲ್ಲೂ ಹಣ ಮಾಡಲು ಹೊರಟಿದ್ದ ನಕಲಿ ರೋಗಶಾಸ್ತ್ರ ಪ್ರಯೋಗಾಲದ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಗುರುಗ್ರಾಮ್ ನಲ್ಲಿರುವ ಸೈನಿಖೇರಾ ಗ್ರಾಮದಲ್ಲಿ ಪೊಲೀಸರು ನಕಲಿ ಕೊವಿಡ್-19 ಪ್ರಮಾಣಪತ್ರವನ್ನು ನೀಡುತ್ತಿದ್ದ ಪ್ರಯೋಗಾಲಯದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಡಿಮೆ ಬೆಲೆಗೆ ಕೊರೊನಾವೈರಸ್ ಸೋಂಕು ತಗುಲಿಲ್ಲ ಎಂದು ಜನರಿಗೆ ಪ್ರಮಾಣಪತ್ರ ವಿತರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

Covid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿCovid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿ

ಕೋಲ್ಕತ್ತಾ ಮೂಲದ ಅನಿರ್ಬನ್ ರಾಯ್ ಮತ್ತು ಮುರ್ಷಿದಾಬಾದ್ ಮೂಲದ ಪರಿಮಳ್ ರಾಯ್ ಎಂಬ ಇಬ್ಬರು ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನಕಲಿ ಪ್ರಮಾಣಪತ್ರದ ಮಾಹಿತಿ ಆಧರಿಸಿ ದಾಳಿ

ನಕಲಿ ಪ್ರಮಾಣಪತ್ರದ ಮಾಹಿತಿ ಆಧರಿಸಿ ದಾಳಿ

ಹರಿಯಾಣದ ಸೈನಿಖೇರಾ ಗ್ರಾಮದ ಕೊವಿಡ್-19 ಪ್ರಯೋಗಾಲಯದಲ್ಲಿ ನಕಲಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ 1000ಕ್ಕೂ ಅಧಿಕ ಜನರಿಗೆ ಕೊರೊನಾವೈರಸ್ ಸೋಂಕು ತಗುಲಿಲ್ಲ ಎಂದು ಸುಳ್ಳುಸುಳ್ಳಾಗಿ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಎಸ್ ಪಿ ಇಂದ್ರಜಿತ್ ಯಾದವ್ ಮಾಹಿತಿ ನೀಡಿದ್ದಾರೆ.

ಕೊವಿಡ್-19 ಪರೀಕ್ಷೆಗೆ ಜಿಲ್ಲಾ ಆರೋಗ್ಯ ಇಲಾಖೆ ಅನುಮತಿಯಿಲ್ಲ

ಕೊವಿಡ್-19 ಪರೀಕ್ಷೆಗೆ ಜಿಲ್ಲಾ ಆರೋಗ್ಯ ಇಲಾಖೆ ಅನುಮತಿಯಿಲ್ಲ

ಡೈನೆಕ್ಟ್ ಡೆಯಾಗ್ನಸ್ಟಿಕ್ ಮತ್ತು ನವದೆಹಲಿಯ ಕೀರ್ತಿ ನಗರದಲ್ಲಿರುವ ಪಾಥ್ ಪ್ರಯೋಗಾಲಯದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆ ಅವರ ಲೆಟರ್ ಹೆಡ್ ನಲ್ಲಿ ನಕಲಿ ವೈದ್ಯಕೀಯ ಪ್ರಮಾಣಪತ್ರ ನೀಡುತ್ತಿದ್ದರು. ಅಲ್ಲದೇ ಆರೋಪಿಗಳು ಜಿಲ್ಲಾ ಆರೋಗ್ಯ ಇಲಾಖೆಯ ಅನುಮತಿಯನ್ನೂ ಪಡೆದುಕೊಳ್ಳದೇ ಕೊವಿಡ್-19 ಸೋಂಕಿನ ತಪಾಸಣೆ ನಡೆಸುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.

ಸಿಎಂ ಫ್ಲೈಯಿಂಗ್ ಸ್ಕ್ವಾಡ್ ಭರ್ಜರಿ ಕಾರ್ಯಾಚರಣೆ

ಸಿಎಂ ಫ್ಲೈಯಿಂಗ್ ಸ್ಕ್ವಾಡ್ ಭರ್ಜರಿ ಕಾರ್ಯಾಚರಣೆ

ಹರಿಯಾಣದ ಮೆಡಿಕಾರ್ಟ್ ಪ್ಯಾಥಾಲಜಿ ಲ್ಯಾಬ್ ಮತ್ತು ಮೆಡಿಕಲ್ ಟೂರಿಸಂಗೆ ಒಬ್ಬ ನಕಲಿ ಗ್ರಾಹಕನನ್ನು ಕಳುಹಿಸಿಕೊಡಲಾಗಿತ್ತು. ಗ್ರಾಹಕನು ತನಗೆ ಕೊರೊನಾವೈರಸ್ ಪಾಸಿಟಿವ್ ಪ್ರಮಾಣಪತ್ರ ನೀಡುವಂತೆ ಕೇಳಿದರೆ ಅದೇ ರೀತಿ ವರದಿಯನ್ನು ನೀಡಲಾಗಿದ್ದು, ಈ ಪ್ರಯೋಗಾಲಯವು ಡೈನೆಕ್ಸ್ ಡಯಾಗ್ನೆಸ್ಟಿಕ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದು ನಂತರದಲ್ಲಿ ಬೆಳಕಿಗೆ ಬಂದಿತು. ತಕ್ಷಣ ದಾಳಿ ನಡೆಸಿದ ಹರಿಯಾಣದ ಮುಖ್ಯಮಂತ್ರಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಪೊಲೀಸರೊಂದಿಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊವಿಡ್-19 ಪ್ರಮಾಣಪತ್ರ ಪಡೆದು ವಿದೇಶಕ್ಕೆ ಪ್ರಯಾಣ!

ಕೊವಿಡ್-19 ಪ್ರಮಾಣಪತ್ರ ಪಡೆದು ವಿದೇಶಕ್ಕೆ ಪ್ರಯಾಣ!

ಕೊರೊನಾವೈರಸ್ ಸೋಂಕು ತಗುಲಿಲ್ಲ ಎಂದು ವೈದ್ಯಕೀಯ ಪ್ರಮಾಣಪತ್ರ ಹೊಂದಿರುವವರಿಗೆ ವಿದೇಶ ಪ್ರಯಾಣಕ್ಕೆ ತೆರಳಲು ಅನುಮತಿಯಿದೆ. ಈ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ಜನರು ತಮಗೆ ಕೊವಿಡ್-19 ಸೋಂಕು ಇಲ್ಲ ಎನ್ನುವಂತೆ ಹಣವನ್ನು ಕೊಟ್ಟು ನಕಲಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಹರಿಯಾಣದ ಹಲವೆಡೆ ವಿದೇಶಗಳಿಗೆ ತೆರಳಲು ಅನುಕೂಲವಾಗುವಂತೆ ನಕಲಿ ಪ್ರಮಾಣಪತ್ರ ಸೃಷ್ಟಿಸಿ ಕೊಡಲಾಗುತ್ತಿದೆ ಎಂದು ದೂರುಗಳು ಬಂದಿದ್ದರು. ಈ ಹಿನ್ನೆಲೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಡ್ರಗ್ ಕಂಟ್ರೋಲರ್ ಆಫೀಸರ್ ಅಮಂದೀಪ್ ಚೌವ್ಹಾಣ್ ತಿಳಿಸಿದ್ದರು.

1400 ರಿಂದ 3000 ರೂಪಾಯಿಗೆ ಒಂದು ಪ್ರಮಾಣಪತ್ರ

1400 ರಿಂದ 3000 ರೂಪಾಯಿಗೆ ಒಂದು ಪ್ರಮಾಣಪತ್ರ

ಕಳೆದ ಎರಡು ತಿಂಗಳುಗಳಿಂದ ಈ ರೀತಿ ಕೊರೊನಾವೈರಸ್ ಸೋಂಕಿನ ತಪಾಸಣೆ ಮತ್ತು ನಕಲಿ ಪ್ರಮಾಣಪತ್ರದ ದಂಧೆಯನ್ನು ನಡೆಸುತ್ತಿದ್ದರು. ಒಂದು ನಕಲಿ ಪ್ರಮಾಣಪತ್ರ ನೀಡುವುದಕ್ಕೆ 1400 ರೂಪಾಯಿಂದ 3000 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಕೊವಿಡ್-19 ಸೋಂಕು ಇಲ್ಲ ಎಂದು ಪ್ರಮಾಣಪತ್ರ ಪಡೆದು ಕೆಲವರು ವಿದೇಶಗಳಿಗೆ ತೆರಳಿದರೆ, ಇನ್ನು ಕೆಲವರು ಕಚೇರಿಗಳಲ್ಲಿ ರಜೆ ಪಡೆದುಕೊಳ್ಳುವುದುದಕ್ಕೆ ತಮಗೆ ಕೊವಿಡ್-19 ಸೋಂಕು ತಗುಲಿದೆ ಎಂದು ನಕಲಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Recommended Video

ಪಬ್ ಜಿ ಆಟಗಾರರಿಗೆ 6 ಕೋಟಿ ಬಹುಮಾನ!! | Oneindia Kannada

English summary
Coronavirus Positive Or Negative: Haryana People Getting Fake Certificate In Just Rs.1400 To 3000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X