ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಾತ್ಮಕ ಟ್ವೀಟ್: ಐಟಿ ಸೆಲ್‌ನ ಮುಖ್ಯಸ್ಥನನ್ನು ಕೈಬಿಟ್ಟ ಹರ್ಯಾಣ ಬಿಜೆಪಿ

|
Google Oneindia Kannada News

ಚಂಡಿಗಢ, ಜು.8: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಅಮಾನತು ಹಾಗೂ ದೆಹಲಿ ಬಿಜೆಪಿ ಮುಖಂಡ ನವೀನ್‌ ಕುಮಾರ್‌ ವಜಾ ಬೆನ್ನಲ್ಲೇ ಮುಸ್ಲಿಮರ ಬಗ್ಗೆ ಅವಹೇಳಕಾರಿ ಟ್ವೀಟ್ ಮಾಡಿರುವ ಬಿಜೆಪಿಯ ಮತ್ತೊಬ್ಬ ಐಟಿ ಸಲ್‌ ಮುಖ್ಯಸ್ಥನನ್ನು ಕೈಬಿಡಲಾಗಿದೆ.

ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ವಿವಾದ ದೇಶ, ವಿದೇಶಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ಕಾರಣವಾದ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಬಿಜೆಪಿ ತಲೆಗೆ ಬಂದಿದೆ. ಮುಸ್ಲಿಮರು ಮತ್ತು ಇಸ್ಲಾಂ ವಿರುದ್ಧ ವಿವಾದಾತ್ಮಕ ಟ್ವೀಟ್‌ಗಳಿಗಾಗಿ ಹರ್ಯಾಣ ಘಟಕದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅರುಣ್ ಯಾದವ್ ಅವರ ಬಂಧನಕ್ಕೆ ಹೆಚ್ಚುತ್ತಿರುವ ಆಗ್ರಹಗಳ ನಡುವೆ ಬಿಜೆಪಿ ಪಕ್ಷವು ಅವರನ್ನು ಕೈಬಿಟ್ಟಿದೆ.

 ನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪ ನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪ

ಅರುಣ್ ಯಾದವ್ ಅವರು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗಾಗಿ ಈಗ ವಿವಾದವನ್ನು ಎದುರಿಸುತ್ತಿದ್ದಾರೆ. ಅವರ ವಿರೋಧಿಗಳು ವ್ಯಾಪಕವಾಗಿ ಅವರು ಮಾಡಿರುವ ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ. ಅನೇಕರು 2018 ರ ಟ್ವೀಟ್‌ನಿಂದ ಬಂಧಿಸಲ್ಪಟ್ಟಿರುವ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್ ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರನ್ನು ಉದಾಹರಿಸಿ ನಿರ್ಭಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

ಈ ವರ್ಷ ಮೇ ಮತ್ತು 2017 ರ ನಡುವೆ ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ಸಾವಿರಾರು ಬಾರಿ ಹಂಚಿಕೊಳ್ಳುವುದರೊಂದಿಗೆ #ArrestArunYadav ಎಂಬ ಹ್ಯಾಶ್‌ ಟ್ಯಾಗ್‌ ಗುರುವಾರ ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್‌ಗಳಲ್ಲಿ ಒಂದಾಗಿದೆ.

ನೂಪುರ್ ಶರ್ಮಾಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಗ್ಗೆ ಟೀಕೆ ನೂಪುರ್ ಶರ್ಮಾಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಗ್ಗೆ ಟೀಕೆ

ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ತನ್ನ ಅವಹೇಳನಕಾರಿ ಹೇಳಿಕೆಗಳ ಮೂಲಕ ಭಾರೀ ಕೋಲಾಹಲವನ್ನು ಉಂಟುಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಯಾದವ್ ತೋರಿದ ಕಾಳಜಿಯು ಸರಿಹೊಂದುತ್ತದೆ ಎಂದು ಹಲವರು ಹೇಳಿದ್ದಾರೆ. ಆದರೆ ಮೊಹಮ್ಮದ್‌ ಜುಬೈರ್ ಅವರಂತೆ ಅರುಣ್‌ ಯಾವುದೇ ಕ್ರಮವನ್ನು ಎದುರಿಸಿಲ್ಲ.

 ವಿವಾದಿತ ವ್ಯಕ್ತಿಯ ವಜಾ

ವಿವಾದಿತ ವ್ಯಕ್ತಿಯ ವಜಾ

ಅರುಣ್‌ ಯಾದವ್ ವಿರುದ್ಧ ಇನ್ನೂ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಹರ್ಯಾಣ ಪೊಲೀಸ್‌ ಮೂಲಗಳು ತಿಳಿಸಿವೆ. ಬಿಜೆಪಿಯು ಮತ್ತೊಂದು ವಿವಾದಿತ ವ್ಯಕ್ತಿಯನ್ನು ವಜಾಗೊಳಿಸಿದೆ. ಆದರೆ ಈ ಕಣ್ಣು ಹೊರೆಸುವ ಬದಲು ಈ ದ್ವೇಷದ ಗುಲಾಮರನ್ನು ಬಂಧಿಸಲಾಗುತ್ತದೆಯೇ? ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ. ವಿ. ಟ್ವೀಟ್ ಮಾಡಿದ್ದಾರೆ.

 ಜೂನ್ 27 ರಂದು ಜುಬೈರ್ ಬಂಧನ

ಜೂನ್ 27 ರಂದು ಜುಬೈರ್ ಬಂಧನ

"ಹಲೋ @ಡಿಜಿಪಿ ಹರ್ಯಾಣ @ದಿಲ್ಲಿಪೊಲೀಸ್‌ 2018 ರ ಟ್ವೀಟ್‌ಗಾಗಿ ಜುಬೈರ್ ಅವರನ್ನು ಬಂಧಿಸಬಹುದಾದರೆ, ಅರುಣ್ ಯಾದವ್ ಏಕೆ ಬಂಧನ ಮಾಡಬಾರದು?" ಎಂದು ಟಿಪ್ಪು ಸುಲ್ತಾನ್ ಪಕ್ಷದ ಅಧ್ಯಕ್ಷ ಶೇಖ್ ಸಾಡೆಕ್ ಟ್ವೀಟ್ ಮಾಡಿದ್ದಾರೆ.

ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳ ಸಂಬಂಧದ ನಂತರ ಜೂನ್ 27 ರಂದು ಜುಬೈರ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಯಿತು.

 14 ದಿನಗಳವರೆಗೆ ನ್ಯಾಯಾಂಗ ಬಂಧನ

14 ದಿನಗಳವರೆಗೆ ನ್ಯಾಯಾಂಗ ಬಂಧನ

ಜುಲೈ 2ರಂದು, ಪೋಲೀಸರು ಜುಬೈರ್ ವಿರುದ್ಧ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿಯಲ್ಲಿ ಹೆಚ್ಚುವರಿ ಆರೋಪವನ್ನು ಸೇರಿಸಿದರು. ಅವರನ್ನು ಇನ್ನೂ 14 ದಿನಗಳವರೆಗೆ ಕಸ್ಟಡಿಯಲ್ಲಿ ಇರಿಸಲಾಯಿತು. ಜುಲೈ 4 ರಂದು ದ್ವೇಷದ ಭಾಷಣ ಆರೋಪ ಹೊತ್ತಿರುವ ಮೂವರು ಕಟ್ಟರ್‌ ಹಿಂದೂದಿಗಳನ್ನು "ದ್ವೇಷಿಗಳು" ಎಂದು ಕರೆದಿದ್ದಕ್ಕಾಗಿ ಜುಬೈರ್‌ ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಯಿತು. ಗುರುವಾರ ಅವರನ್ನು ಇನ್ನೂ 14 ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ.

 ಆಕೆಯನ್ನು ಏಕೆ ಬಂಧಿಸಿಲ್ಲ

ಆಕೆಯನ್ನು ಏಕೆ ಬಂಧಿಸಿಲ್ಲ

ಕೊಲೆ ಬೆದರಿಕೆಗಳನ್ನು ಉಲ್ಲೇಖಿಸಿ ಮೊಹಮ್ಮದ್‌ ಜುಬೇರ್ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಕಳೆದ ವಾರ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಆಕೆಯನ್ನು ಏಕೆ ಬಂಧಿಸಿಲ್ಲ ಮತ್ತು ದೇಶದಾದ್ಯಂತ ಗಲಭೆಗಳನ್ನು ಹೊತ್ತಿಸಿದ ಆಕೆಯನ್ನು ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು.

Recommended Video

Dinesh Karthik ವಿಚಾರದಲ್ಲಿ Rohit Sharma ನಿರ್ಧಾರ ಸರೀನಾ? | *Cricket | OneIndia Kannada

English summary
The BJP has dropped out amid growing demands for the arrest of Haryana unit IT chief Arun Yadav for his controversial tweets against Muslims and Islam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X