ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಧಾನಿ ಅದ ನಂತರವೇ ನನಗೆ ನಾಯಿ, ಕೀಟ, ಭಸ್ಮಾಸುರ ಎಂದಿದೆ ಕಾಂಗ್ರೆಸ್'

|
Google Oneindia Kannada News

Recommended Video

ನನ್ನನ್ನು ತುಂಡು ತುಂಡಾಗಿ ಕತ್ತರಿಸಲು ಅವರು ರೆಡಿಯಾಗಿದ್ದಾರೆ..? | Oneindia kannada

ಕುರುಕ್ಷೇತ್ರ (ಹರಿಯಾಣ), ಮೇ 9: "ಅವರ ಭ್ರಷ್ಟಾಚಾರವನ್ನು ನಾನು ನಿಲ್ಲಿಸಿದೆ ಮತ್ತು ವಂಶಪಾರಂಪರ್ಯ ಆಡಳಿತಕ್ಕೆ ಸವಾಲು ಹಾಕಿದೆ. ಆ ಕಾರಣಕ್ಕೆ ಅವರು ಪ್ರೀತಿಯ ಮುಖವಾಡ ಹಾಕಿಕೊಂಡು ನನ್ನನ್ನು ಬೈತಾ ಇದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಕುರುಕ್ಷೇತ್ರದಲ್ಲಿ ಬುಧವಾರ ಚುನಾವಣೆ ಸಭೆಯಲ್ಲಿ ಹೇಳಿದರು.

ನನ್ನ ಮನೆಗೆ ಭೇಟಿ ನೀಡುತ್ತಿದ್ದೇನೆ. ಹರಿಯಾಣ ಮತ್ತು ಕುರುಕ್ಷೇತ್ರ ಸತ್ಯದ ನೆಲ. ಆದ್ದರಿಂದ ಇಲ್ಲಿಂದಲೇ ನನ್ನ ದೇಶದ ಜನರಿಗೆ ಹೇಳಬಯಸುತ್ತೇನೆ: ಅವರ ಪ್ರೀತಿಯ ಡಿಕ್ಷನರಿ ಅಂದರೆ ಏನು ಮತ್ತು ನನಗೆ ಅವರು ಬಳಸಿದ ಪದಗಳೇನು ಅಂತ ಹೇಳುತ್ತೇನೆ.

'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ

ಕಾಂಗ್ರೆಸ್ ನ ನಾಯಕರೊಬ್ಬರು ನನ್ನನ್ನು ಕ್ರಿಮಿ ಅಂತ ಕರೆದಿದ್ದರು. ಒಬ್ಬ ನಾಯಕರು ಹುಚ್ಚು ನಾಯಿ ಅಂದಿದ್ದರು. ಇನ್ನೊಬ್ಬರು ಭಸ್ಮಾಸುರ ಅಂದರು. ಮತ್ತೊಬ್ಬರು, ವಿದೇಶಾಂಗ ಖಾತೆ ಸಚಿವರಾಗಿದ್ದವರು ನನ್ನನ್ನು ಕೋತಿ ಎಂದರು. ಇನ್ನೊಬ್ಬ ಸಚಿವರು ದಾವೂದ್ ಇಬ್ರಾಹಿಂ ಜತೆಗೆ ನನ್ನ ಹೋಲಿಕೆ ಮಾಡಿದರು ಎಂದು ಮೋದಿ ಆರೋಪಿಸಿದರು.

Narendra Modi

ಅವರು ನನ್ನ ತಾಯಿಯನ್ನು ಬಯ್ದರು. ಮತ್ತು ನನ್ನ ತಂದೆ ಯಾರು ಅಂತ ಕೇಳಿದರು. ಮತ್ತು ನೆನಪಿಟ್ಟುಕೊಳ್ಳಿ, ಇವೆಲ್ಲವನ್ನೂ ನಾನು ಪ್ರಧಾನಿ ನಂತರವೇ ಹೇಳಿದರು. ಕಾಂಗ್ರೆಸ್ ನಾಯಕರ ನಡತೆಯನ್ನು ಯಾರೂ ಪ್ರಶ್ನಿಸಲಿಲ್ಲ. ನನ್ನನ್ನು ತುಂಡಾಗಿ ಕತ್ತರಿಸುತ್ತೇನೆ ಎಂದು ಮಾತನಾಡಿದವರಿಗೆ ಟಿಕೆಟ್ ನೀಡುವ ಮೂಲಕ ಬೆಂಬಲಕ್ಕೆ ಕಾಂಗ್ರೆಸ್ ನಿಂತಿತು. ಏಕೆಂದರೆ, ಅವರು ಮೋದಿಯನ್ನು ತುಂಡಾಗಿ ಕತ್ತರಿಸಲು ಬಯಸುತ್ತಾರೆ ಎಂದು ಹೇಳಿದರು.

'ಶಹೆನ್‌ಶಾ' ರಾಬರ್ಟ್ ವಾದ್ರಾ ಶೀಘ್ರದಲ್ಲೇ ಜೈಲಿಗೆ: ಪ್ರಧಾನಿ ಮೋದಿ'ಶಹೆನ್‌ಶಾ' ರಾಬರ್ಟ್ ವಾದ್ರಾ ಶೀಘ್ರದಲ್ಲೇ ಜೈಲಿಗೆ: ಪ್ರಧಾನಿ ಮೋದಿ

ಇಂಥ ಮಾತನ್ನು ಸಾರ್ವಜನಿಕವಾಗಿ ಆಡುವುದು ತಪ್ಪು ಎಂದು ನನಗೆ ಗೊತ್ತು. ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳೂ ನನ್ನ ಭಾಷಣ ಕೇಳುತ್ತಾರೆ. ಅವರು ಈ ಮಾತುಗಳನ್ನು (ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ಬಳಸಿದ ಪದಗಳು) ಕಲಿಯಲೂ ಬಾರದು, ಮಾತನಾಡಲೂ ಬಾರದು ಎಂದು ಅವರು ಹೇಳಿದರು.

English summary
Congress leaders abused me many times after I became PM, said Narendra Modi in an election rally at Kurukshetra, Hariyana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X