ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರಣಾಜನಕ ಪರಿಸ್ಥಿತಿ": ಕ್ಯಾಪ್ಟನ್ ಸಿಂಗ್ ವಾಗ್ಬಾಣ

|
Google Oneindia Kannada News

ಚಂಡೀಘರ್, ಅಕ್ಟೋಬರ್ 1: ಪಂಜಾಬಿನಲ್ಲಿ ಕಾಂಗ್ರೆಸ್ ಈಗ ಕರುಣಾಜನಕ ಸ್ಥಿತಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ. ಜಾತ್ಯತೀತ ನಿಲುವುಗಳ ಬಗ್ಗೆ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಮಾಡಿದ ಪ್ರಶ್ನೆಗಳಿಗೆ ಕ್ಯಾಪ್ಟನ್ ಸಿಂಗ್ ಕಟುವಾದ ಮಾತುಗಳಲ್ಲಿ ಉತ್ತರ ನೀಡಿದ್ದಾರೆ.

"ಸಿಎಂ ಸ್ಥಾನದಿಂದ ಕೆಳಗಿಳಿಯುವ ಮೂರು ವಾರಗಳ ಮೊದಲೇ ನಾನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ರಾಜೀನಾಮೆ ನೀಡಿದ್ದೆ, ಆದರೆ ಅವರು ನೀವೇ ಮುಂದುವರಿಯಬೇಕು ಎಂದು ಹೇಳಿದ್ದರು," ಎಂದು ಸಿಂಗ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಸಿಂಗ್, ರಾವತ್ ಒತ್ತಡದಲ್ಲಿರುವಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

 ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು; ಕಪಿಲ್‌ಗೆ ನಾಯಕರ ಬೆಂಬಲ ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು; ಕಪಿಲ್‌ಗೆ ನಾಯಕರ ಬೆಂಬಲ

"ಕಳೆದ ಕೆಲವು ತಿಂಗಳುಗಳಿಂದ ಎದುರಿಸುತ್ತಿರುವ ಏಕೈಕ ಒತ್ತಡವೆಂದರೆ ಕಾಂಗ್ರೆಸ್‌ಗೆ ಅವರ ಸ್ವಂತ ನಿಷ್ಠೆ. ಈ ಕಾರಣದಿಂದಾಗಿ ಅವಮಾನಗಳ ಮೇಲೆ ಅವಮಾನಗಳನ್ನು ಸಹಿಸಿಕೊಳ್ಳುವುದನ್ನು ಮುಂದುವರಿಸಿದ್ದೆನು," ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.

 Congress is in pathetic Condition in Punjab: Amarinder Reaction To Harish Rawat

ಕ್ಯಾಪ್ಟನ್ ಸಿಂಗ್ ವಿರುದ್ಧ ಹರೀಶ್ ರಾವತ್ ವಾಗ್ಬಾಣ:

ಶುಕ್ರವಾರ ಡೆಹ್ರಾಡೂನ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ವಾಗ್ಬಾಣ ಬಿಟ್ಟಿದ್ದರು. "ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತೇನೆ ಎನ್ನುವ ಅವರು ಬಿಜೆಪಿಯಿಂದ ಬರುವ ಯಾವುದೇ ಆಹ್ವಾನವನ್ನು ತಿರಸ್ಕರಿಸಬೇಕು. ಆದರೆ ಅಮಿತ್ ಶಾ ರೀತಿಯ ಬಿಜೆಪಿ ನಾಯಕರೊಂದಿಗೆ ಹತ್ತಿರವಾಗುತ್ತಿರುವುದು ಸಿಂಗ್ ಅವರ ಜಾತ್ಯಾತೀಯ ನಿಲುವುಗಳನ್ನು ಪ್ರಶ್ನೆ ಮಾಡುವಂತಿದೆ," ಎಂದು ಹೇಳಿದ್ದರು.

"ಕರುಣಾಜನಕ ಸ್ಥಿತಿಯಲ್ಲಿ ಕಾಂಗ್ರೆಸ್":

ತಮ್ಮ ಜಾತ್ಯಾತೀತ ಮತ್ತು ಸಮಗ್ರತೆ ವಿಷಯದಲ್ಲಿ ನಮ್ಮ ವಿರೋಧಿಗಳು ಹಾಗೂ ಕೆಟ್ಟ ಟೀಕಾಕಾರರು ಸಹ ಅನುಮಾನ ವ್ಯಕ್ತಪಡಿಸುವಂತಿಲ್ಲ. ಆದರೆ ಕಾಂಗ್ರೆಸ್ ಹಿರಿಯ ನಾಯಕರು ಎನಿಸಿರುವ ಹರೀಶ್ ರಾವತ್ ರಂತಹ ಅನುಭವಿ ಮುಖಂಡರು ನನ್ನ ಜಾತ್ಯತೀತ ಅರ್ಹತೆಗಳನ್ನು ಪ್ರಶ್ನಿಸುತ್ತಿರುವುದು ನನಗೆ ಇನ್ನು ಆಶ್ಚರ್ಯವಾಗುವುದಿಲ್ಲ. ಇಷ್ಟು ವರ್ಷಗಳ ಕಾಲ ನಾನು ನಿಷ್ಠೆಯಿಂದ ಸೇವೆ ಸಲ್ಲಿಸಿದ ಪಕ್ಷದಲ್ಲಿ ನಾನು ಇನ್ನು ಮುಂದೆ ನಂಬಿಕೆ ಇಡುವುದಿಲ್ಲ ಹಾಗೂ ಗೌರವಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನಾಲ್ಕೈದು ವರ್ಷಗಳ ಗೆಲುವಿನ ಸಂಭ್ರಮದಲ್ಲಿದ್ದ ಪಕ್ಷವು ಈಗ ಇಂತಹ ಟೀಕೆಗಳ ಮೂಲಕ ಪಂಜಾಬ್‌ನಲ್ಲಿ ತನ್ನನ್ನು ಕಳೆದುಕೊಂಡು ಕರುಣಾಜನಕ ಪರಿಸ್ಥಿತಿಯಲ್ಲಿದೆ," ಎಂದು ಹೇಳಿದ್ದಾರೆ.

ನನಗಾದ ಅವಮಾನದ ವಿರುದ್ಧವಾಗಿ ರಾವತ್ ಹೇಳಿಕೆ:

ಸಿಎಲ್‌ಪಿ ಸಭೆಯನ್ನು ತೊರೆಯಲು ಕೆಲವೇ ಗಂಟೆಗಳ ಮೊದಲು ರಾಜೀನಾಮೆ ನೀಡುವಂತೆ ಹೇಳಿದ ಅವಮಾನಕರ ವಿಧಾನವು ಸಾರ್ವಜನಿಕವಾಗಿ ಗೊತ್ತಿರುವ ವಿಷಯವಾಗಿದೆ ಎಂದು ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದರು. "ನನ್ನ ಮೇಲಿನ ಅವಮಾನವನ್ನು ಜಗತ್ತು ಕಂಡಿದೆ, ಆದರೆ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಇದಕ್ಕೆ ವಿರುದ್ಧವಾಗಿ ಹೇಳಿಕೊಳ್ಳುತ್ತಿದ್ದಾರೆ. ಇದು ಅವಮಾನವಲ್ಲದಿದ್ದರೆ ಏನು?, ಅವರು ತನ್ನ ಬೂಟುಗಳಲ್ಲಿ ತಾನೇ ಹಾಕಿಕೊಳ್ಳಬೇಕು, ತದನಂತರದಲ್ಲಿ ಅವರಿಗೆ ಇಡೀ ಸನ್ನಿವೇಶವು ಎಷ್ಟು ಅವಮಾನಕರವಾಗಿತ್ತು ಎಂದು ಅರಿತುಕೊಳ್ಳುತ್ತಾರೆ," ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.

ಸೆಪ್ಟೆಂಬರ್ ಆರಂಭದಲ್ಲಿ ಹರೀಶ್ ರಾವತ್ ಮಾತು ಹೇಗಿತ್ತು?:

ಮುಂದಿನ 2022ರ ಪಂಜಾಬ್ ವಿಧಾನಸಭೆ ಚುನಾವಣೆಯು ಕ್ಯಾಪ್ಟನ್ ಅಮರೀಂದರ್ ಸಿಂಗ್ ನಾಯಕತ್ವದಲ್ಲಿ ನಡೆಯುತ್ತದೆ. ಅವರನ್ನು ಬದಲಿಸುವ ಯಾವುದೇ ಉದ್ದೇಶ ಹೈಕಮಾಂಡ್ ನಾಯಕರಲ್ಲಿ ಇಲ್ಲ ಎಂದು ಇದೇ ಹರೀಶ್ ರಾವತ್ ಸೆಪ್ಟೆಂಬರ್ 1ರಂದು ಸ್ಪಷ್ಟವಾಗಿ ಹೇಳಿದ್ದರು. "ಹಾಗಾದರೆ, ಪಕ್ಷದ ನಾಯಕತ್ವವು ನನ್ನ ಬಗ್ಗೆ ಅತೃಪ್ತಿ ಹೊಂದಿದೆಯೆಂದು ಅವರು ಈಗ ಹೇಗೆ ಹೇಳಿಕೊಳ್ಳುತ್ತಿದ್ದಾರೆ. ಹಾಗಿದ್ದಲ್ಲಿ ಅವರು ಯಾಕೆ ಉದ್ದೇಶಪೂರ್ವಕವಾಗಿ ನನ್ನನ್ನು ಇಷ್ಟು ಸಮಯ ಕತ್ತಲೆಯಲ್ಲಿ ಇರಿಸಿದರು?," ಎಂದು ಸಿಂಗ್ ಪ್ರಶ್ನಿಸಿದ್ದಾರೆ.

"ಅಲ್ಲದೇ ಪಕ್ಷವು ತಮ್ಮನ್ನು ಅವಮಾನಿಸಲು ಉದ್ದೇಶಿಸದಿದ್ದರೆ, ನವಜೋತ್ ಸಿಂಗ್ ಸಿಧುಗೆ ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ಬಹಿರಂಗವಾಗಿ ಟೀಕಿಸಲು ಮತ್ತು ದಾಳಿ ಮಾಡಲು ಏಕೆ ಅನುಮತಿ ನೀಡಲಾಯಿತು. "ನಾನು ಅಧಿಕಾರದಲ್ಲಿದ್ದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪಕ್ಷಕ್ಕೆ ನೀಡಿದ ನಿರಂತರ ಚುನಾವಣಾ ಗೆಲುವಿನ ಅಭಿಯಾನದ ಬಗ್ಗೆ ಏಕೆ ಅರಿವು ಮೂಡಿಸುವ ಕೆಲಸ ಮಾಡಲಿಲ್ಲ. ಪಕ್ಷವನ್ನು ಸುಲಿಗೆ ಮಾಡಲು ಮತ್ತು ಷರತ್ತುಗಳನ್ನು ವಿಧಿಸಲು ಮುಂದುವರಿಯಲು ಕಾಂಗ್ರೆಸ್ ಈಗಲೂ ಸಿಧುಗೆ ಏಕೆ ಅವಕಾಶ ನೀಡುತ್ತಿದೆ," ಎಂದು ಸಿಂಗ್ ಕೇಳಿದ್ದಾರೆ.

English summary
'Congress is in pathetic Condition in Punjab': Ex-Chief Minister Amarinder Reaction To Harish Rawat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X