ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಪರೀಕ್ಷೆ ಬರೆಯದಿದ್ದರೂ ನೀವೆಲ್ಲ ಪಾಸ್

|
Google Oneindia Kannada News

ರಾಯಪುರ್, ಏಪ್ರಿಲ್.01: ಭಾರತದಲ್ಲಿ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಏಪ್ರಿಲ್.14ರವರೆಗೂ ದೇಶದಲ್ಲಿ ಎಲ್ಲವೂ ಸ್ತಬ್ಧ. ಶಾಲಾ-ಕಾಲೇಜುಗಳಿಗೂ ಈಗಾಗಲೇ ರಜೆ ಘೋಷಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಛತ್ತೀಸ್ ಗಢ ಸರ್ಕಾರ ಸಿಹಿಸುದ್ದಿ ನೀಡಿದೆ.

ಛತ್ತೀಸ್ ಗಢದಲ್ಲಿ 1 ರಿಂದ 9 ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿದ್ದರೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ತೇರ್ಗಡೆಯಾಗಿ ಹೋಗಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅಂದರೆ ಪರೀಕ್ಷೆ ಬರೆಯದಿದ್ದರೂ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಸೂಚಿಸಲಾಗಿದೆ.

ಕೊರೊನಾ ವೈರಸ್ ಭೀತಿ: ಮುಂದಕ್ಕೆ ಹೋದ NEET ಪರೀಕ್ಷೆ ಕೊರೊನಾ ವೈರಸ್ ಭೀತಿ: ಮುಂದಕ್ಕೆ ಹೋದ NEET ಪರೀಕ್ಷೆ

ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಈ ಕುರಿತು ಶೈಕ್ಷಣಿಕ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಭಾರತ ಲಾಕ್ ಡೌನ್ ಹಿನ್ನೆಲೆ ಕಳೆದ ಮಾರ್ಚ್.19ರಿಂದಲೇ ರಾಜ್ಯದಲ್ಲಿನ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಪರೀಕ್ಷೆಗಳನ್ನೆಲ್ಲ ಮುಂದೂಡಿಕೆ ಮಾಡಲಾಗಿತ್ತು.

Chattisgarh Government Order To Pass Students Without Examination

ಮಾರ್ಚ್.20ರಿಂದ ಛತ್ತೀಸ್ ಗಢ ಲಾಕ್ ಡೌನ್:

ಛತ್ತೀಸ್ ಗಢದಲ್ಲಿ ಮಾರ್ಚ್.20ರಿಂದಲೇ ಲಾಕ್ ಡೌನ್ ಮಾಡಲಾಗಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಮಾರ್ಚ್.24ರಿಂದ ಏಪ್ರಿಲ್.14ರವರೆಗೂ 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದರು. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ 1 ರಿಂದ 9 ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತರಗತಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.

English summary
Good News For 1-9 And 1st PUC Students. Chattisgarh Government Order To Pass Students Without Examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X