ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಪೊಲೀಸ್‌ ಗುಪ್ತಚರ ಕೇಂದ್ರದಲ್ಲಿ ಸ್ಫೋಟ; ಚುರುಕಿನ ತನಿಖೆ

|
Google Oneindia Kannada News

ಮೊಹಾಲಿ, ಮೇ 10: ಮೊಹಾಲಿಯ ಸೆಕ್ಟರ್ 77ರಲ್ಲಿರುವ ಪಂಜಾಬ್‌ನ ಅತ್ಯಂತ ಸುರಕ್ಷಿತ ಗುಪ್ತಚರ ಕೇಂದ್ರದ ಪ್ರಧಾನ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸೋಮವಾರ ರಾತ್ರಿ ನಡೆದಿದೆ ಎನ್ನಲಾದ ಸ್ಫೋಟದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕೆಲವರು ಕಚೇರಿಗೆ ವಸ್ತುವನ್ನು ಎಸೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಐಎಎನ್ಎಸ್ ವರದಿ ಮಾಡಿದೆ. ಇಂಟಲಿಜೆನ್ಸ್ ಬ್ಯೂರೋ ಕಚೇರಿಯ ಸಮೀಪದ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಹಿಮಾಚಲದಲ್ಲಿ ಖಾಲಿಸ್ತಾನೀ ಬಾವುಟ: ಎಸ್‌ಎಫ್‌ಜೆ ಮುಖಂಡನ ವಿರುದ್ಧ ಕೇಸ್ ದಾಖಲು; ಎಸ್‌ಐಟಿ ತನಿಖೆ ಹಿಮಾಚಲದಲ್ಲಿ ಖಾಲಿಸ್ತಾನೀ ಬಾವುಟ: ಎಸ್‌ಎಫ್‌ಜೆ ಮುಖಂಡನ ವಿರುದ್ಧ ಕೇಸ್ ದಾಖಲು; ಎಸ್‌ಐಟಿ ತನಿಖೆ

ಸ್ಫೋಟಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಂಡಿದ್ದಾರೆ.

Blast at Punjab Police Intelligence Headquarters in Mohali

ಮೊಹಾಲಿ ಸ್ಫೋಟದ ಘಟನೆ: ಎಸ್‌ಎಎಸ್‌ನಗರದ ಸೆಕ್ಟರ್ 77ರಲ್ಲಿರುವ ಪಂಜಾಬ್‌ ಪೊಲೀಸ್‌ ಗುಪ್ತಚರ ಕೇಂದ್ರದಲ್ಲಿ ಸೋಮವಾರ 7:45ರ ಸುಮಾರಿಗೆ ಸಣ್ಣ ಸ್ಫೋಟ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡಗಳನ್ನು ಕರೆಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೊಹಾಲಿ ಪೊಲೀಸರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

Blast at Punjab Police Intelligence Headquarters in Mohali

ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಗುಪ್ತಚರ ಪ್ರಧಾನ ಕಛೇರಿಯಲ್ಲಿ ರಸ್ತೆಯಿಂದ ರಾಕೆಟ್ ಚಾಲಿತ ಗ್ರೆನೇಡ್ ಅಥವಾ ಆರ್‌ಪಿಜಿಯನ್ನು ಹಾರಿಸಲಾಗಿದ್ದು, ಗಾಜುಗಳನ್ನು ಒಡೆದು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಇದನ್ನು ಆರ್‌ಪಿಜಿ ಮಾದರಿಯ ದಾಳಿ ಎಂದು ಕರೆದಿದ್ದು, ಸ್ಫೋಟ ಚಿಕ್ಕದಾಗಿದೆ ಎಂದು ಹೇಳಿದ್ದಾರೆ.

English summary
Blast at Punjab police intelligence headquarters in Mohali. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X