ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹರ್ಯಾಣದಲ್ಲಿ ಗೋಪಾಲ್ ಕಂಡ ಬೆಂಬಲ ಪಡೆಯುತ್ತಿಲ್ಲ: ರವಿಶಂಕರ್ ಪ್ರಸಾದ್

|
Google Oneindia Kannada News

ಚಂಡೀಗಢ, ಅಕ್ಟೋಬರ್ 26: ಬಿಜೆಪಿಯು ಹರ್ಯಾಣದಲ್ಲಿ ಪಕ್ಷೇತರ ಶಾಸಕ ಗೋಪಾಲ್ ಕಂಡ ಅವರ ಬೆಂಬಲವನ್ನು ಪಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಗೋಪಾಲ್ ಕಂಡ ಅವರು ಕೊಲೆ ಹಾಗೂ ಅತ್ಯಾಚಾರ ಆರೋಪಿಯಾಗಿದ್ದಾರೆ. ಅವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಅವರ ಬೆಂಬಲ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿಗೆ ಆತ್ಮಹತ್ಯೆ ಪ್ರಕರಣ ಆರೋಪಿ ಗೋಪಾಲನ ಬೆಂಬಲಹರ್ಯಾಣದಲ್ಲಿ ಬಿಜೆಪಿಗೆ ಆತ್ಮಹತ್ಯೆ ಪ್ರಕರಣ ಆರೋಪಿ ಗೋಪಾಲನ ಬೆಂಬಲ

ಬಿಜೆಪಿ ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ಬಹುಮತ ಸಾಬೀತಿಗೆ ಇನ್ನೂ ಆರು ಸ್ಥಾನಗಳ ಅವಶ್ಯಕತೆ ಇದೆ. ಹೀಗಾಗಿ ಪಕ್ಷೇತರ ಮತ್ತು ಇತರೆ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು, ಸರ್ಕಾರ ರಚನೆಗೆ ಕಸರತ್ತು ನಡೆಸಿದೆ.

BJP Will Not Take Gopal Kandas Support

ಕೊಲೆ ಮತ್ತು ಅತ್ಯಾಚಾರ ಆರೋಪಿಯಾಗಿರುವ ಗೋಪಾಲ್ ಕಂಡ ಅವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ಇದೀಗ ಬಿಜೆಪಿ ಗೋಪಾಲ್ ಅವರ ಬೆಂಬಲ ಪಡೆಯಲು ಮುಂದಾಗಿದೆ ಎಂದು ಹೇಳಲಾಗಿತ್ತು. ಆದರೂ ಯಾವುದೇ ಕಾರಣಕ್ಕೂ ಅವರ ಬೆಂಬಲ ಪಡೆಯುವುದಿಲ್ಲ ಎಂದು ನಿಷ್ಠೂರವಾಗಿಯೇ ಬಿಜೆಪಿ ಹೇಳಿದೆ.

ಆದರೆ ಶುಕ್ರವಾರ ಕಂಡ ಅವರು ತಮ್ಮ ಬೆಂಬಲ ಬಿಜೆಪಿ ಪಕ್ಷಕ್ಕಿದೆ ಎಂದು ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಮಾತನಾಡಿ, ಬಿಜೆಪಿಗೆ ಎರಡು ನಾಲಿಕೆ ಇದೆ ಪದೇ ಪದೇ ಹೇಳಿಕೆ ಬದಲಾಯಿಸುತ್ತದೆ ಎಂದು ಟೀಕಿಸಿದ್ದರು.

ಹರ್ಯಾಣದಲ್ಲಿ ಬಿಜೆಪಿಗೆ ಆತ್ಮಹತ್ಯೆ ಪ್ರಕರಣ ಆರೋಪಿ ಗೋಪಾಲನ ಬೆಂಬಲಹರ್ಯಾಣದಲ್ಲಿ ಬಿಜೆಪಿಗೆ ಆತ್ಮಹತ್ಯೆ ಪ್ರಕರಣ ಆರೋಪಿ ಗೋಪಾಲನ ಬೆಂಬಲ

ಮೋದಿ ಸರ್ಕಾರದಲ್ಲಿ ಗೋಪಾಲ್ ಸಚಿವರಾಗಿದ್ದರು ಆದರೆ ಗೋಪಾಲ್ ಅವರ ಮೇಲೆ ದೂರುಗಳು ಕೇಳಿಬಂದಾಗ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದರು.

ಚುನಾವಣೆಯಲ್ಲಿ ಗೆದ್ದ ತಕ್ಷಣ ಗೋಪಾಲ್ ಕಂಡ ನಿರ್ದೋಷಿಯಲ್ಲ. ಚುನಾವಣೆಯಲ್ಲಿ ಗೆಲ್ಲಲು ಹಲವು ಅಂಶಗಳು ಇರುತ್ತವೆ. ಬಿಜೆಪಿ ತನ್ನ ಸಿದ್ಧಾಂತವನ್ನು ಮರೆಯಬಾರದು ಎಂದು ಮನವಿ ಮಾಡಿ ಉಮಾಭಾರತಿ ಟ್ವೀಟ್ ಮಾಡಿದ್ದರು..

English summary
The BJP will not take the support of Gopal Kanda, a controversial politician who faces two abetment-to-suicide cases, for forming the government in Haryana, Union minister Ravi Shankar Prasad said here on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X