ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನ: 10 ಶಾಸಕರ ಬಳಿಗೆ ಬಿಜೆಪಿ

|
Google Oneindia Kannada News

ಚಂಡಿಗಢ ಸೆಪ್ಟೆಂಬರ್ 14: ಪಂಜಾಬ್ ಸರಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದ್ದು, ತನ್ನ ಆಮ್ ಆದ್ಮಿ ಪಕ್ಷದ (ಎಎಪಿ) 10 ಶಾಸಕರನ್ನು ಸಂಪರ್ಕಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ಇಂದು ಆರೋಪಿಸಿದ್ದಾರೆ. "ನಮ್ಮ 10 ಶಾಸಕರನ್ನು ಪಂಜಾಬ್‌ನಲ್ಲಿ ಬಿಜೆಪಿ ಸಂಪರ್ಕಿಸಿದೆ; ಅವರು ಶಾಸಕರನ್ನು ಖರೀದಿಸುತ್ತಿದ್ದಾರೆ ಮತ್ತು ಸರ್ಕಾರಗಳನ್ನು ಒಡೆಯುತ್ತಿದ್ದಾರೆ" ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಎಎಪಿ ಇತ್ತೀಚೆಗೆ ಬಿಜೆಪಿಯು ಪಂಜಾಬ್‌ನಲ್ಲಿ ಆಪರೇಷನ್ ಕಮಲ ಮಾಡಲು ಪ್ರಯತ್ನಿಸುತ್ತಿದೆ. ಶಾಸಕರನ್ನು ಪಕ್ಷಾಂತರಕ್ಕೆ ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ದೆಹಲಿಯಲ್ಲಿ ವಿಫಲವಾಗಿರುವ ಬಿಜೆಪಿ ಪಂಜಾಬ್‌ನತ್ತ ತನ್ನ ಗಮನವನ್ನು ಹರಿಸಿದೆ ಎಂದು ಪಕ್ಷ ಹೇಳಿಕೊಂಡಿದೆ. "ಆಪರೇಷನ್ ಕಮಲ" ಎಂಬುದು ವಿರೋಧ ಪಕ್ಷಗಳು ಸರ್ಕಾರವನ್ನು ಉರುಳಿಸಲು ಶಾಸಕರನ್ನು "ಬೇಟೆ ಅಥವಾ ತಮ್ಮತ್ತ ಸೆಳೆಯುವುದು" ಎಂದು ವಿವರಿಸಲು ಬಳಸುವ ಪದವಾಗಿದೆ.

'ಗುಜರಾತಿನಲ್ಲಿ ಕಾಂಗ್ರೆಸ್‌ ಅಂತ್ಯವಾಗಿದೆ' ಎಂದ ಅರವಿಂದ್‌ ಕೇಜ್ರಿವಾಲ್‌'ಗುಜರಾತಿನಲ್ಲಿ ಕಾಂಗ್ರೆಸ್‌ ಅಂತ್ಯವಾಗಿದೆ' ಎಂದ ಅರವಿಂದ್‌ ಕೇಜ್ರಿವಾಲ್‌

ದೊಡ್ಡ ನಾಯಕರನ್ನು ಭೇಟಿ ಮಾಡಲು ಎಎಪಿ ಶಾಸಕರನ್ನು ದೆಹಲಿಗೆ ಬರುವಂತೆ ಕೇಳಲಾಗಿದೆ ಮತ್ತು ಪಕ್ಷವನ್ನು ಬದಲಾಯಿಸಲು ಕೋಟಿಗಳ ಆಫರ್ ಮಾಡಲಾಗಿದೆ ಎಂದು ಪಂಜಾಬ್ ಸಚಿವ ಹರ್ಪಾಲ್ ಚೀಮಾ ಆರೋಪಿಸಿದ್ದಾರೆ.

ಎಎಪಿ ಶಾಸಕರಿಗೆ ಬಿಜೆಪಿಯಿಂದ 'ದಿಲ್ಲಿಗೆ ಬನ್ನಿ' ಕರೆ

ಎಎಪಿ ಶಾಸಕರಿಗೆ ಬಿಜೆಪಿಯಿಂದ 'ದಿಲ್ಲಿಗೆ ಬನ್ನಿ' ಕರೆ

"ದಿಲ್ಲಿಗೆ ಬನ್ನಿ, ಬಿಜೆಪಿಯ ದೊಡ್ಡ ನಾಯಕರನ್ನು ಭೇಟಿಯಾಗುವಂತೆ ಮಾಡುತ್ತೇನೆ" ಎಂದು ಪಕ್ಷದ ಶಾಸಕರೊಬ್ಬರು ಸ್ವೀಕರಿಸಿದ ಕರೆಗಳಲ್ಲಿ ಒಂದನ್ನು ಉಲ್ಲೇಖಿಸಿ ಚೀಮಾ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ನಾಯಕರ ಮೇಲೆ ಬಿಜೆಪಿಯು ಕೇಂದ್ರ ಸರ್ಕಾರದ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಂಡಿದೆ. ಜೊತೆಗೆ ರಾಷ್ಟ್ರೀಯ ಪಕ್ಷಕ್ಕೆ ಕಾಲಿಡಲು ತನ್ನ ದೆಹಲಿಯ ಕೆಲವು ಶಾಸಕರಿಗೆ "ತಲಾ 25 ಕೋಟಿ" ನೀಡುತ್ತಿದೆ ಎಂದು ಆರೋಪಿಸಲಾಗಿದೆ.

"ಬಿಜೆಪಿಯು ಎಎಪಿ ಪಕ್ಷ ಬದಲಿಸಲು ಪ್ರತಿ ಶಾಸಕರಿಗೆ ₹ 25 ಕೋಟಿ ನೀಡುತ್ತಿದೆ. ಕರ್ನಾಟಕದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿರಬಹುದು. ಆದರೆ ದೆಹಲಿ ಶಾಸಕರು ದೃಢವಾಗಿ ಉಳಿದು ಬಿಜೆಪಿ ಕಾರ್ಯಾಚರಣೆಯನ್ನು ವಿಫಲಗೊಳಿಸಿದ್ದಾರೆ" ಎಂದು ಚೀಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗುಜರಾತ್ ಬಂದರಿನಿಂದಲೇ ಡ್ರಗ್ಸ್ ಬರುತ್ತಿದೆ, ತನಿಖೆ ಮಾಡಿ: ಅರವಿಂದ್ ಕೇಜ್ರಿವಾಲ್ಗುಜರಾತ್ ಬಂದರಿನಿಂದಲೇ ಡ್ರಗ್ಸ್ ಬರುತ್ತಿದೆ, ತನಿಖೆ ಮಾಡಿ: ಅರವಿಂದ್ ಕೇಜ್ರಿವಾಲ್

ಆಪ್ ಶಾಸಕರಿಗೆ ಬಿಗ್ ಆಫರ್ ಕೊಟ್ಟ ಬಿಜೆಪಿ

ಆಪ್ ಶಾಸಕರಿಗೆ ಬಿಗ್ ಆಫರ್ ಕೊಟ್ಟ ಬಿಜೆಪಿ

"ಪಂಜಾಬ್‌ನಲ್ಲಿ ಸರ್ಕಾರ ಬದಲಾವಣೆಯಾದರೆ, ನಿಮಗೆ (ಶಾಸಕರು) ದೊಡ್ಡ ಬಡ್ತಿಗಳು, ಹುದ್ದೆಗಳನ್ನು ನೀಡಲಾಗುವುದು ಎಂದು ಬಿಜೆಪಿ ಆಫರ್ ಕೊಟ್ಟಿದೆ'' ಎಂದು ಚೀಮಾ ಹೇಳಿದರು. ಭಗವಂತ್ ಮಾನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಶಾಸಕರಿಗೆ ಹಲವಾರು ಕರೆಗಳು ಬಂದಿವೆ ಎಂದು ಪುನರುಚ್ಚರಿಸಿದರು.

ಪಂಜಾಬ್‌ನಲ್ಲಿ ಎಎಪಿ ವಿಭಜನೆ

ಪಂಜಾಬ್‌ನಲ್ಲಿ ಎಎಪಿ ವಿಭಜನೆ

ಆದರೆ ಬಿಜೆಪಿ ಆರೋಪವನ್ನು ತಳ್ಳಿಹಾಕಿದೆ. ಪಂಜಾಬ್ ಸಚಿವ ಹರ್ಪಾಲ್ ಚೀಮಾ ಅವರು ಬಿಜೆಪಿ ವಿರುದ್ಧ ರಾಜ್ಯ ಸರ್ಕಾರವನ್ನು ಪತನಗೊಳಿಸಿರುವ ಆಧಾರರಹಿತ ಆರೋಪ ಮಾಡಿದ್ದಾರೆ. ಇದು ಪಂಜಾಬ್‌ನಲ್ಲಿ ಎಎಪಿ ದೊಡ್ಡ ವಿಭಜನೆಗೆ ಕಾರಣವಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಕೇಜ್ರಿವಾಲ್ ಅವರ ಹಸ್ತಕ್ಷೇಪದಿಂದ ಪಕ್ಷವು ಛಿದ್ರವಾಗುವ ಹಂತದಲ್ಲಿದೆ ಎಂದು ಬಿಜೆಪಿಯ ಸುಭಾಷ್ ಶರ್ಮಾ ಹೇಳಿದ್ದಾರೆ.

ಎಎಪಿ ಸರ್ಕಾರ ಕೆಳಗಿಳಿಸುವ ಯತ್ನ

ಎಎಪಿ ಸರ್ಕಾರ ಕೆಳಗಿಳಿಸುವ ಯತ್ನ

ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸ್ಥಾಪನೆಯಾಗಿ ಕೇವಲ 10 ವರ್ಷ ಆಗಿದೆ ಅಷ್ಟೇ.. ದಿಲ್ಲಿಯಲ್ಲಿ ಸತತ ಎರಡು ಬಾರಿ ಅಧಿಕಾರ ಹಿಡಿದ ಬಳಿಕ ಈಗ ಪಂಜಾಬ್‌ನಲ್ಲೂ ಆಮ್‌ ಆದ್ಮಿ ಪಕ್ಷದ ಬಾವುಟ ಹಾರಾಡುತ್ತಿದೆ. ಪಂಜಾಬ್‌ನಲ್ಲಿ ಸಾಂಪ್ರದಾಯಿಕವಾಗಿ ಇದುವರೆಗೂ ಶಿರೋಮಣಿ ಅಖಾಲಿದಳ ಹಾಗೂ ಕಾಂಗ್ರೆಸ್‌ ನಡುವೆಯೇ ಅಧಿಕಾರ ಹಂಚಿಕೆಯಾಗುತ್ತಿತ್ತು. ಆದರೆ, ಈ ಎರಡು ಪಕ್ಷಗಳ ಅಧಿಕಾರ ಅವಧಿಯಲ್ಲಿ ಪಂಜಾಬ್‌ನ ಅಭಿವೃದ್ಧಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಆಗಿಲ್ಲ ಎಂಬುದು ಜನರ ಅಭಿಪ್ರಾಯವಾಗಿತ್ತು. ಆದ್ದರಿಂದ ಈ ಬಾರಿ ಜನ ಬದಲಾವಣೆ ಬಯಸಿದ್ದರು. ಇದನ್ನು ಉತ್ತಮವಾಗಿ ಗ್ರಹಿಸಿದ ಎಎಪಿ ನಾಯಕರು ಚುನಾವಣಾ ಪ್ರಚಾರದಲ್ಲಿ ಬದಲಾವಣೆಯ ಮಂತ್ರವನ್ನು ಪಠಿಸಿದರು.

ಮೊದಲೇ ಎರಡು ಪಕ್ಷಗಳ ಆಡಳಿತದಿಂದ ಬೇಸತ್ತಿದ್ದ ಜನರಿಗೆ ಈ ಬಾರಿ ನಾವು ಮೂರ್ಖರಾಗುವುದು ಬೇಡ. ಭಗವಂತ್‌ ಮಾನ್‌ ಮತ್ತು ಕೇಜ್ರಿವಾಲ್‌ಗೆ ಒಂದು ಅವಕಾಶ ನೀಡಿ ಎಂಬ ಘೋಷಣೆ ಎಎಪಿಗೆ ಸಂಜೀವಿನಿಯಾಗಿದೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಭರ್ಜರಿ ಗೆಲವು ಸಾಧಿಸುವ ಮೂಲಕ ಭಗವಂತ್‌ ಮಾನ್‌ ಅವರನ್ನು ಪಂಜಾಬ್ ಸಿಎಂ ಮಾಡಲಾಯಿತು. ಆದರೆ ಸರ್ಕಾರವನ್ನು ಬೀಳಿಸಲು ಬಿಜೆಪಿ ಒಳಸಂಚು ರೂಪಿಸುತ್ತಿದೆ ಎನ್ನುವುದು ಎಎಪಿಯ ಬಲವಾದ ಆರೋಪಗಳಾಗಿವೆ.

English summary
Arvind Kejriwal today alleged that the BJP has contacted 10 MLAs of his Aam Aadmi Party (AAP) to topple the Punjab government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X