ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಪ್ರಬಲ ನಾಯಕರನ್ನು ಪರಾಭವಗೊಳಿಸಿದ ದೈತ್ಯ ಸಂಹಾರಿಗಳು ಇವರೇ ನೋಡಿ

|
Google Oneindia Kannada News

ಚಂಡೀಗಢ, ಮಾರ್ಚ್ 11: ಆರಂಭದಲ್ಲಿ 2017 ರಲ್ಲಿ ಪಂಜಾಬ್ ಗೆಲ್ಲಲು ತುದಿಗಾಲಿನಲ್ಲಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಕೊನೆಗೂ 2022ರಲ್ಲಿ ಸಫಲವಾಗಿದೆ. 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಪಡೆಯುವ ಮೂಲಕ ತನ್ನ ಪಕ್ಷದ ಗೆಲುವಿನ ಕ್ಷೇತ್ರವನ್ನು 20ರಿಂದ 92ಕ್ಕೆ ವಿಸ್ತಾರ ಮಾಡಿದೆ.

ಈ ನಡುವೆ ಪಂಜಾಬ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳು ಮತ್ತು ಅದರ ಪ್ರತಿಸ್ಪರ್ಧಿಗಳ ಸ್ಟಾರ್ ಅಭ್ಯರ್ಥಿಗಳನ್ನು ಚುನಾವಣಾ ಕಣದಲ್ಲಿ ಉರುಳಿಸಿದ ಹಲವಾರು ದೈತ್ಯ ಸಂಹಾರಿಗಳು ಇದ್ದಾರೆ. ಅದರಲ್ಲೂ ಜೀವನ್ ಜ್ಯೋತ್ ಕೌರ್‌ ಎಂಬ ಮಹಿಳಾ ಅಭ್ಯರ್ಥಿ ಸಖತ್‌ ಫೇಮಸ್‌ ಆಗುತ್ತಿದ್ದಾರೆ.

ವಿಧಾನಸಭೆ ಚುನಾವಣೆ: ಹೀನಾಯವಾಗಿ ಸೋತ ಪ್ರಮುಖ ನಾಯಕರ ಪಟ್ಟಿವಿಧಾನಸಭೆ ಚುನಾವಣೆ: ಹೀನಾಯವಾಗಿ ಸೋತ ಪ್ರಮುಖ ನಾಯಕರ ಪಟ್ಟಿ

ಅಮೃತಸರ (ಪೂರ್ವ) ಕ್ಷೇತ್ರದಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಹಿರಿಯ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದ್ದ ಸಂದರ್ಭದಲ್ಲಿ ಎಎಪಿ ಅಭ್ಯರ್ಥಿ ಜೀವನ್ ಜ್ಯೋತ್ ಕೌರ್‌ ಈ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದರು.

Assembly Elections 2022: Giant-Killers Steal the Show in Punjab

ಸಿಧು, ಮಜಿಥಿಯಾರನ್ನು ಸೋಲಿಸಿದ ದೈತ್ಯ ಸಂಹಾರಿ

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಹಿರಿಯ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾರನ್ನು ಸೋಲಿಸಿದ ಎಎಪಿ ಅಭ್ಯರ್ಥಿ ಜೀವನ್ ಜ್ಯೋತ್ ಕೌರ್‌ ಈಗ ಭಾರೀ ಸುದ್ದಿಯಾಗಿದ್ದಾರೆ. ಇಬ್ಬರು ಪ್ರಬಲ ನಾಯಕರನ್ನು ಕೂಡಾ ಸೋಲಿಸುವ ಮೂಲಕ ದೈತ್ಯ ಸಂಹಾರಿ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಜೀವನ್ ಜ್ಯೋತ್ ಕೌರ್‌ 39,679 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಸಿಧು ಹಾಗೂ ಮಜಿಥಿಯಾರನ್ನು ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.

ಪ್ರಚಂಡ ಗೆಲುವು ಪಡೆದ ಸೆಲೆಬ್ರೆಟಿ ಅನ್ಮೋಲ್ ಗಗನ್ ಮಾನ್ ಯಾರು? ಪ್ರಚಂಡ ಗೆಲುವು ಪಡೆದ ಸೆಲೆಬ್ರೆಟಿ ಅನ್ಮೋಲ್ ಗಗನ್ ಮಾನ್ ಯಾರು?

ಇನ್ನು ಜೀವನ್ ಜ್ಯೋತ್ ಕೌರ್‌ ಮಾತ್ರ ಪ್ರಚಂಡ ನಾಯಕರನ್ನು ಕೊಂದ ಏಕೈಕ 'ಡೇವಿಡ್' ಆಗಿರಲಿಲ್ಲ. ಕನಿಷ್ಠ ಒಂದು ಡಜನ್ ಕಾಂಗ್ರೆಸ್ ಮತ್ತು ಅಕಾಲಿ ದಿಗ್ಗಜರು ಎಎಪಿ ಅಭ್ಯರ್ಥಿಗಳ ಕೈಯಲ್ಲಿ ಸೋಲನ್ನು ಎದುರಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಅಲ್ಲದೆ ಮೂವರು ಮಾಜಿ ಮುಖ್ಯಮಂತ್ರಿಗಳು ಚುನಾವಣಾ ಕದನದಲ್ಲಿ ಸೋಲನ್ನು ಕಂಡವರು ಆಗಿದ್ದಾರೆ. ಪ್ರಕಾಶ್ ಸಿಂಗ್ ಬಾದಲ್, ಅಮರಿಂದರ್ ಸಿಂಗ್ ಮತ್ತು ರಾಜಿಂದರ್ ಕೌರ್ ಭಟ್ಟಾಲ್ ಕೂಡಾ ಎಎಪಿ ನಾಯಕರಿಂದ ಪರಾಭವಗೊಂಡ ಪ್ರಚಂಡ ನಾಯಕರು ಆಗಿದ್ದಾರೆ.

ಚರಣ್‌ಜೀ‌ತ್‌ ಸಿಂಗ್‌ ಚನ್ನಿ ಪರಾಭವ

ಎಎಪಿಯ ಲಾಭ್ ಸಿಂಗ್ ಉಗೋಕೆ ಅವರು ಬದೌರ್ ಕ್ಷೇತ್ರದಿಂದ ಚನ್ನಿ ಅವರನ್ನು 37,558 ಮತಗಳ ಅಂತರದಿಂದ ಸೋಲಿಸಿದರೆ, ಚಮ್ಕೌರ್ ಸಾಹಿಬ್‌ನಲ್ಲಿ 7,942 ಮತಗಳ ಅಂತರದಿಂದ ಎಎಪಿ ಅಭ್ಯರ್ಥಿ ಸೋಲಿಸಿದ್ದಾರೆ. "ಚರಣ್‌ಜೀತ್‌ ಸಿಂಗ್‌ ಚನ್ನಿ ಅವರನ್ನು ಯಾರು ಸೋಲಿಸಿದ್ದು ಎಂದು ನಿಮಗೆ ತಿಳಿದಿದೆಯಾ? ಎಎಪಿ ಅಭ್ಯರ್ಥಿ ಲಾಭ್ ಸಿಂಗ್ ಉಗೋಕೆ ಚರಣ್‌ಜೀತ್‌ ಸಿಂಗ್ ಚನ್ನಿಯನ್ನು ಸೋಲಿಸಿದ್ದಾರೆ. ಅವರು ಮೊಬೈಲ್‌ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು," ಎಂದು ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಎಸ್‌ಎಡಿ ಪ್ರಮುಖ ನಾಯಕ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಮುಕ್ತಸರ್ ಜಿಲ್ಲೆಯ ತಮ್ಮ ಸಾಂಪ್ರದಾಯಿಕ ಲಂಬಿ ಸ್ಥಾನದಲ್ಲಿ ಸೋಲು ಕಂಡಿದ್ದಾರೆ. ಎಎಪಿಯ ಗುರ್ಮೀತ್ ಸಿಂಗ್ ಖುದಿಯಾನ್ ಅವರು ಮುಕ್ತಸರ್ ಜಿಲ್ಲೆಯ ಲಂಬಿ ಕ್ಷೇತ್ರದಿಂದ 94 ವರ್ಷ ವಯಸ್ಸಿನ ಹಿರಿಯ ಅಭ್ಯರ್ಥಿ ಪ್ರಕಾಶ್ ಸಿಂಗ್ ಬಾದಲ್‌ರನ್ನು ಸೋಲಿಸಿದ್ದಾರೆ. 94ರ ಹರೆಯದ ಬಾದಲ್ ಅವರು ಕಣದಲ್ಲಿದ್ದ ಅತ್ಯಂತ ಹಿರಿಯ ಅಭ್ಯರ್ಥಿಯನ್ನು ಗುರ್ಮೀತ್ ಸಿಂಗ್ ಖುದಿಯಾನ್ 11,396 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಎಎಪಿ ಅಭ್ಯರ್ಥಿ ಜಗದೀಪ್ ಕಾಂಬೋಜ್ ಅವರು ಎಸ್‌ಎಡಿ ಪಕ್ಷದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರನ್ನು ಫಾಜಿಲ್ಕಾ ಜಿಲ್ಲೆಯ ಜಲಾಲಾಬಾದ್ ಕ್ಷೇತ್ರದಲ್ಲಿ 30,930 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎಎಪಿ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ಅವರು ಪಟಿಯಾಲದಿಂದ (ನಗರ) ಮಾಜಿ ಮುಖ್ಯಮಂತ್ರಿ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ಅವರನ್ನು 19,873 ಮತಗಳ ಅಂತರದಿಂದ ಸೋಲಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Assembly Elections 2022: Giant-killers steal the show in Punjab. ವಿಧಾನಸಭೆ ಚುನಾವಣೆ 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X