ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಬಳಿಕ ಹರ್ಯಾಣದಲ್ಲೂ ಮತಾಂತರ ನಿಷೇಧ ಕಾಯ್ದೆಗೆ ಒಪ್ಪಿಗೆ

|
Google Oneindia Kannada News

ಚಂಡೀಗಢ, ಮಾರ್ಚ್ 22; ಹರ್ಯಾಣ ಸರ್ಕಾರ ಪ್ರತಿಪಕ್ಷ ಕಾಂಗ್ರೆಸ್ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಕಾನೂನುಬಾಹಿರ ಮತಾಂತರ ಮಸೂದೆ 2022ಕ್ಕೆ ಅಂಗೀಕಾರ ನೀಡಿದೆ. ಮಾರ್ಚ್ 4ರಂದು ಆರಂಭವಾದ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಮಾಡಲಾಗಿತ್ತು.

ಬಲವಂತ, ಅನಗತ್ಯ ಪ್ರಭಾವ, ಆಮಿಷ, ಯಾವುದೇ ಮೋಸದ ವಿಧಾನದಿಂದ ಅಥವಾ ಮದುವೆಯ ಭರವಸೆ ನೀಡುವ ಮೂಲಕ ನಡೆಸುವ ಧಾರ್ಮಿಕ ಮತಾಂತರಗಳನ್ನು ಅಪರಾಧವೆಂದು ಪರಿಗಣಿಸುವ ಮಸೂದೆ ಇದಾಗಿದೆ.

ಬೆಳಗಾವಿ: ಮತಾಂತರ ಆರೋಪದ ಮೇಲೆ ಕುಟುಂಬದ ಮೇಲೆ ಹಲ್ಲೆಬೆಳಗಾವಿ: ಮತಾಂತರ ಆರೋಪದ ಮೇಲೆ ಕುಟುಂಬದ ಮೇಲೆ ಹಲ್ಲೆ

ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿಯೂ ಈಗಾಗಲೇ ಇದೇ ಮಾದರಿಯ ಮಸೂದೆಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

ಮತಾಂತರ ನಿಷೇಧ ಕಾನೂನು ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್; ಬೊಮ್ಮಾಯಿ ಮತಾಂತರ ನಿಷೇಧ ಕಾನೂನು ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್; ಬೊಮ್ಮಾಯಿ

Anti Conversion Bill Passed In Haryana Assembly

Recommended Video

GOA ಮುಖ್ಯಮಂತ್ರಿ ಆಯ್ಕೆಯಲ್ಲಿ ಕನ್ಫ್ಯೂಸ್ ಆಗಿದ್ದು ಯಾಕೆ? | Oneindia Kannada

ಹರ್ಯಾಣ ಕಾನೂನು ಬಾಹಿರ ಧಾರ್ಮಿಕ ಮತಾಂತರ ಮಸೂದೆ 2022 ಬಲವಂತ, ಅನಗತ್ಯ ಪ್ರಭಾವ, ಆಮಿಷ, ಅಥವಾ ಮದುವೆಯ ಭರವಸೆ ನೀಡುವ ಮೂಲಕ ನಡೆಸುವ ಧಾರ್ಮಿಕ ಮತಾಂತರಗಳನ್ನು ಅಪರಾಧ ಎಂದು ಪರಿಗಣಿಸಿ 1 ರಿಂದ 5 ವರ್ಷದ ತನಕ ಜೈಲು ಶಿಕ್ಷೆ, 1 ಲಕ್ಷಕ್ಕಿಂತ ಕಡಿಮೆ ಇಲ್ಲದಂತ ದಂಡ ವಿಧಿಸುವ ಕಾನೂನು ಒಳಗೊಂಡಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ಮತಾಂತರ ಕಾಯ್ದೆ ರದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ಮತಾಂತರ ಕಾಯ್ದೆ ರದ್ದು

ಒಂದು ವೇಳೆ ಯಾವುದೇ ವ್ಯಕ್ತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತರು, ಮಹಿಳೆಯರನ್ನು ಮತಾಂತರ ಮಾಡಿದರೆ, ಪ್ರಯತ್ನ ನಡೆಸಿದರೆ ನಾಲ್ಕು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ, 3 ಲಕ್ಷ ರೂ. ತನಕ ದಂಡ ವಿಧಿಸುವ ಅಧಿಕಾರವಿದೆ.

ಹರ್ಯಾಣದ ಬಿಜೆಪಿ ಸರ್ಕಾರ ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಗೆ ಒಪ್ಪಿಗೆ ನೀಡಿದೆ. ಪ್ರತಿಪಕ್ಷ ನಾಯಕ ಭೂಪೇಂಧರ್ ಸಿಂಗ್ ಹೂಡಾ ಮಾತನಾಡಿ, "ಈಗಿರುವ ಕಾಯ್ದೆಯಲ್ಲೇ ಬಲವಂತದ ಮತಾಂತರ ತಡೆಯಲು ಅವಕಾಶವಿತ್ತು. ಹೊಸ ಕಾಯ್ದೆಯ ಅಗತ್ಯವಿರಲಿಲ್ಲ" ಎಂದು ಹೇಳಿದರು.

ಕಾಂಗ್ರೆಸ್‌ನ ಹಿರಿಯ ನಾಯಕ ಕಿರಣ್ ಚೌಧರಿ ಮಾತನಾಡಿ, "ಇಂದು ಹರ್ಯಾಣ ರಾಜ್ಯದ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವಾಗಿದೆ. ಈ ಮಸೂದೆ ಕೋಮು ಆಧಾರಿತವಾಗಿ ಸಮಾಜವನ್ನು ಒಡೆಯಲಿದೆ. ಮಂದಿನ ದಿನಗಳಲ್ಲಿ ಇದರ ಪರಿಣಾಮ ತಿಳಿಯಲಿದೆ" ಎಂದರು.

ಕಾಂಗ್ರೆಸ್ ನಾಯಕ ರಘುವೀರ್ ಸಿಂಗ್ ಮಾತನಾಡಿ, "ಈ ಮಸೂದೆಯನ್ನು ತುರ್ತಾಗಿ ಅಂಗೀಕರಿಸುವ ಅಗತ್ಯವಿರಲಿಲ್ಲ. ಇದು ಒಡೆದು ಆಳುವ ರಾಜಕೀಯದ ಭಾಗವಾಗಿದೆ. ಅಂತರ ಜಾತಿ ವಿವಾಹವನ್ನು ಸರ್ಕಾರವೇ ಪ್ರೋತ್ಸಾಹಿಸಬೇಕು" ಎಂದು ಹೇಳಿದರು.

ಮಸೂದೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, "ಈ ಮಸೂದೆ ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದಿಲ್ಲ. ಬಲವಂತದ ಮತಾಂತರವನ್ನು ತಡೆಯುವುದು ಮಾತ್ರ ಇದರ ಉದ್ದೇಶವಾಗಿದೆ" ಎಂದು ಸ್ಪಷ್ಟಪಡಿಸಿದರು.

"ಮತಾಂತರದ ಉದ್ದೇಶಕ್ಕಾಗಿಯೇ ಅಂತರಜಾತಿ ವಿವಾಹವಾದರೆ ಕಾನೂನಿನ ಅಡಿ ಶಿಕ್ಷಿಸಲು ಮಸೂದೆ ಅವಕಾಶ ಮಾಡಿಕೊಡುತ್ತದೆ. ಅಂತರಜಾತಿ ವಿವಾಹವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶವನ್ನು ಮಸೂದೆ ಹೊಂದಿಲ್ಲ" ಎಂದರು.

ಕರ್ನಾಟಕ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021 ಅನ್ನು ಮಂಡನೆ ಮಾಡಿ ಒಪ್ಪಿಗೆ ಪಡೆದಿದೆ. ಆದರೆ ವಿಧಾನ ಪರಿಷತ್‌ನಲ್ಲಿ ಇದಕ್ಕೆ ಇನ್ನೂ ಅಂಗೀಕಾರ ಸಿಕ್ಕಿಲ್ಲ. ಕರ್ನಾಟಕದಲ್ಲಿಯೂ ಪ್ರತಿಪಕ್ಷ ಕಾಂಗ್ರೆಸ್ ಈ ಮಸೂದೆ ವಿರೋಧಿಸಿತ್ತು.

ಈ ಕಾಯ್ದೆ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಪ್ರಾಪ್ತರು, ಮಹಿಳೆಯರು, ಬುದ್ಧಿ ಮಾಂಧ್ಯರನ್ನು ಮತಾಂತರ ಮಾಡಿದವರಿಗೆ ಕನಿಷ್ಠ 3 ರಿಂದ 10 ವರ್ಷದ ತನಕ ಜೈಲು ಶಿಕ್ಷೆ, 50 ಸಾವಿರದ ತನಕ ದಂಡ ವಿಧಿಸಲು ಅವಕಾಶವಿದೆ.

ಇತರ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ರಿಂದ 5 ವರ್ಷದ ತನಕ ಜೈಲು ಶಿಕ್ಷೆ, 25 ಸಾವಿರ ರೂ. ತನಕ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಸಾಮೂಹಿಕ ಮತಾಂತರ ಮಾಡಿದರೆ 3 ರಿಂದ 10 ವರ್ಷದ ತನಕ ಜೈಲು, 1 ಲಕ್ಷದ ತನಕ ದಂಡ ವಿಧಿಸಲು ಅವಕಾಶ ಕೊಡಲಾಗಿದೆ.

English summary
After Himachal Pradesh, Uttar Pradesh and Karnataka Haryana assembly passed the Haryana Prevention of Unlawful Conversion of Religion Bill 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X