ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜರಿ ನಂತರ ಕ್ಯಾಪ್ಟನ್ ಸಿಂಗ್ ಮುಂದಿದೆ ಭರ್ಜರಿ ಆಫರ್

|
Google Oneindia Kannada News

ಚಂಡೀಗಢ, ಜುಲೈ 1: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಸೋಲು ಕಂಡಿದ್ದಾರೆ. ತನ್ನದೇ ಆದ ಪಕ್ಷವನ್ನು ಕಟ್ಟಿ ಪಟಿಯಾಲದಲ್ಲಿ ಸ್ಪರ್ಧೆಗೆ ಇಳಿದಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಲುಂಡಿದ್ದರು.

89 ವರ್ಷ ವಯಸ್ಸಿನ ಮಾಜಿ ಮುಖ್ಯಮಂತ್ರಿ ಸದ್ಯ ಲಂಡನ್ನಿನಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸರ್ಜರಿಗೊಳಪಡುತ್ತಿದ್ದಾರೆ. ಇದಾದ ಬಳಿಕ ರಾಜ್ಯಕ್ಕೆ ಮರಳಲಿದ್ದು, ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ವಿರೋಧ ಪಕ್ಷದ ನಾಯಕರ ಮೇಲೆ ಇಡಿ ಪ್ರಹಾರ: ಪ್ರಮುಖರ ಪಟ್ಟಿವಿರೋಧ ಪಕ್ಷದ ನಾಯಕರ ಮೇಲೆ ಇಡಿ ಪ್ರಹಾರ: ಪ್ರಮುಖರ ಪಟ್ಟಿ

ಭಾನುವಾರದಂದು ಸರ್ಜರಿಗೊಳಪಡುತ್ತಿದ್ದು, ನಂತರ ತಮ್ಮ ಪಕ್ಷದೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ನಿಂದ ಹೊರ ಬಂದು ತನ್ನದೇ ಆದ ಪಂಜಾಜ್ ಲೋಕ ಕಾಂಗ್ರೆಸ್‌ ಪಕ್ಷವನ್ನು ಸ್ಥಾಪನೆ ಮಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿದಿದ್ದರು. ಆದರೆ ಈಗ ಸೋಲು ಕಂಡಿದ್ದಾರೆ.

Amarinder Singh To Join BJP, Merge Punjab Lok Congress party with BJP

ಬಿಜೆಪಿ 65 ಸ್ಥಾನಗಳಲ್ಲಿ, ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮತ್ತು ಎಸ್‌ಎಡಿ-ಸಂಯುಕ್ತ್ 15 ಸ್ಥಾನಗಳಲ್ಲಿ ಚುನಾವಣೆ ಎದುರಿಸಿತ್ತು. ಈ ಹಿಂದೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಆಗಿದ್ದರು.

ವಿಶೇಷವೆಂದರೆ ಅಮರೀಂದರ್ ಸಿಂಗ್ ಪತ್ನಿ ಪ್ರಣೀರ್ ಕೌರ್ ಪಟಿಯಾಲಾ ಸಂಸದೆಯಾಗಿದ್ದಾರೆ. ಮಾಜಿ ಕೇಂದ್ರ ಸಚಿವೆಯಾಗಿರುವ ಪ್ರಣೀತ್ ಅವರು ಪತಿ ಬಳಿ ಒಂದೇ ಬೇಡಿಕೆ ಇಟ್ಟಿದ್ದಾರೆ. ಪುತ್ರಿ ಜೈ ಇಂದರ್ ಕೌರ್ ಅವರಿಗೆ ಮುಂಬರುವ ಲೋಕಸಭೆಯಲ್ಲಿ ಟಿಕೆಟ್ ಸಿಕ್ಕರೆ ಸಾಕು ಎಂದಿದ್ದಾರೆ.

ಪಕ್ಷ ವಿಲೀನ
ಐದು ದಶಕಗಳ ರಾಜಕೀಯ ಅನುಭವವಿರುವ ಕ್ಯಾ. ಅಮರೀಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆದ ಬಳಿಕ ಪಂಜಾಬ್ ಲೋಕ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿದರು. ಪಂಜಾಬ್ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪಂಜಾಬ್ ಲೋಕ್ ಕಾಂಗ್ರೆಸ್ ಚಟುವಟಿಕೆಗಳು ತಣ್ಣಗಾಗಿತ್ತು. ಈಗ ಭಾರತೀಯ ಜನತಾ ಪಕ್ಷದ ಜೊತೆಗೆ ಪಕ್ಷ ವಿಲೀನಗೊಳಿಸಿ ತಮ್ಮ ಹೊಸ ಪಕ್ಷವನ್ನು ಸಕ್ರಿಯವಾಗಿಡಲು ಕ್ಯಾಪ್ಟನ್ ಮುಂದಾಗಿದ್ದಾರೆ. ಪ್ರಮುಖವಾಗಿ, ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ ಕೂಡ ಮೇ ತಿಂಗಳಲ್ಲಿ ಬಿಜೆಪಿಗೆ ಸೇರಲು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The 89-year-old former Chief Minister Amarinder Singhis in London for a back surgery. He is likely to merge his Punjab Lok Congress party with the BJP after his return next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X