• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2022ರ ಪಂಜಾಬ್ ಚುನಾವಣೆ, ಬಿಎಸ್‌ಪಿಯೊಂದಿಗೆ ಮೈತ್ರಿ: ಅಕಾಲಿದಳ

|
Google Oneindia Kannada News

ಚಂಡೀಗಢ, ಜೂನ್ 12: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಶಿರೋಮಣಿ ಅಕಾಲಿದಳ ಘೋಷಿಸಿದೆ.

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ಜಾರಿಗೆ ತಂದ ನಂತರ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿದ್ದ ಶಿರೋಮಣಿ ಅಕಾಲಿ ದಳ ಮುಂಬರುವ (2022) ವಿಧಾನಸಭಾ ಚುನಾವಣೆಯಲ್ಲಿ ಬಹುಜನ್ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುವುದಾಗಿ ಹೇಳಿದೆ.

ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಪಕ್ಷ 117 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ ಕ್ಷೇತ್ರಗಳಲ್ಲಿ ಅಕಾಲಿ ದಳ ಸ್ಪರ್ಧಿಸಲಿದೆ.

ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷ ಜಲಂಧರ್‌ನ ಕರ್ತಾರ್ಪುರ ಸಾಹೀಬ್, ಜಲಂಧರ್ ಪಶ್ಚಿಮ, ಜಲಂಧರ್ ಉತ್ತರ, ಫಾಗ್ವಾರಾ, ಹೋಶಿಯಾರ್ಪುರ್ ಅರ್ಬನ್, ದಾಸುಯಾ, ರುಪ್‌ನಗರ ಜಿಲ್ಲೆಯ ಚಮಕೌರ್ ಸಾಹಿಬ್, ಬಸ್ಸಿ ಪಥಾನಾ, ಪಠಾಣ್‌ಕೋಟ್‌ನ ಸುಜನ್‌ಪುರ, ಮೊಹಾಲಿ, ಅಮೃತಸರ ಉತ್ತರ ಮತ್ತು ಅಮೃತಸರ ಕೇಂದ್ರದಲ್ಲಿ ಸ್ಪರ್ಧಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಬಿಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪಂಜಾಬ್ ರಾಜ್ಯದ ರಾಜಕೀಯದಲ್ಲಿ ಹೊಸ ದಿನಗಳು ಆರಂಭವಾಗಿವೆ ಎಂದು ಹೇಳಿದ್ದಾರೆ.

ಸತೀಶ್ ಚಂದ್ರ ಮಿಶ್ರಾ ಅವರು ಮಾತನಾಡಿ, 'ಇಂದು ಐತಿಹಾಸಿಕ ದಿನವಾಗಿದೆ. ಪಂಜಾಬ್ ರಾಜ್ಯ ರಾಜಕೀಯ ದೊಡ್ಡ ತಿರುವೊಂದನ್ನು ಪಡೆದುಕೊಂಡಿದೆ' ಎಂದು ಹೇಳಿದ್ದಾರೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ ಇತರ ಪಕ್ಷದ ಜತೆ ತಮ್ಮ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದೆ ಎಂದು ಸುಖ್ ಬೀರ್ ಸಿಂಗ್ ಬಾದಲ್ ಅವರು ಈ ಹಿಂದೆ ಘೋಷಿಸಿದ್ದರು.

2022ರ ಪಂಜಾಬ್ ವಿಧಾನಸಬಾ ಚುನಾವಣೆಯಲ್ಲಿ ಎಸ್‌ಎಡಿ ಹಾಗೂ ಬಿಎಸ್'ಪಿ ಪಕ್ಷ ಮೈತ್ರಿ ಮಾಡಿಕೊಳ್ಳುತ್ತಿದ್ದು, ಒಟ್ಟಿಗೆ ಕಣಕ್ಕಿಳಿಯಲಿದೆ ಎಂದು ತಿಳಿಸಿದ್ದಾರೆ.
1996ರ ಲೋಕಸಭಾ ಚುನಾವಣೆಯ 27 ವರ್ಷಗಳ ನಂತರ ಅಕಾಲಿ ದಳ ಮತ್ತು ಬಿಎಸ್‌ಪಿ ಮತ್ತೆ ಕೈಜೋಡಿಸಿದೆ.

1996ರಲ್ಲಿ ಅಕಾಲಿದಳ, ಬಿಎಸ್ಪಿ ಮೈತ್ರಿ ಪಂಜಾಬ್ ನ 13 ಸ್ಥಾನಗಳಲ್ಲಿ 11 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಮಾಯಾವತಿ ನೇತೃತ್ವದ ಬಿಎಸ್ಪಿ ಸ್ಪರ್ಧಿಸಿದ್ದ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಅಕಾಲಿ ದಳ 10ರಲ್ಲಿ ಎಂಟು ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು ಎಂದು ವರದಿ ತಿಳಿಸಿದೆ.

English summary
The Shiromani Akali Dal (SAD) on Saturday announced its decision to form an alliance with the Mayawati-led Bahujan Samaj Party (BSP) for the Punjab assembly elections to be held next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X