• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ: ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖ್ಬೀರ್‌ ಕಾರಿನ ಮೇಲೆ ಗುಂಡಿನ ದಾಳಿ

|

ಚಂಡೀಗಢ,ಫೆಬ್ರವರಿ 02: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿನ ಮೇಲೆ ಪಂಜಾಬ್‌ನ ಜಲಾಲಾಬಾದ್‌ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಯ ಹಿಂದೆ ಪೊಲೀಸ್ ಬೆಂಬಲಿತ ಕಾಂಗ್ರೆಸ್ ಗೂಂಡಾಗಳ ಕೈವಾಡವಿದ್ದು ಬಾದಲ್ ಹತ್ಯೆಗೆ ಸಂಚು ಹೂಡಿದ್ದಾರೆ ಎಂದು ಎಸ್ಎಡಿ ಆರೋಪಿಸಿದೆ. ಸದ್ಯ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೇಳೆ ಬಾದಲ್ ಅವರನ್ನು ರಕ್ಷಿಸಲು ಮುಂದಾದ ಪಕ್ಷದ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಶಿರೋಮಣಿ ಅಕಾಲಿದಳ ಆರೋಪಿಸಿದೆ.

ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ, ದಾಳಿ ಮಾಡಿದವರು ಕಾಂಗ್ರೆಸ್ ಶಾಸಕದ ಸಹೋದರರು, ಎಂಸಿ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬಂದಿದ್ದ ವೇಳೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ.

ಸುಖ್ಬೀರ್‌ ಸಿಂಗ್‌ರ ಎಸ್‌ಯುವಿ ಕಾರಿನ ಮೇಲೆ ಕಲ್ಲುಗಳಿಂದ ಕೂಡ ದಾಳಿ ನಡೆಸಿದ್ದಾರೆ.ಆ ಸಂದರ್ಭದಲ್ಲಿ ಯಾವ ಭದ್ರತಾ ಸಿಬ್ಬಂದಿಯೂ ಅಲ್ಲಿ ಇರಲಿಲ್ಲ, ನಾಲ್ಕು ಮಂದಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಆ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದ್ದು, ಆದರೆ ಗುಂಡು ಹಾರಿಸಿದ್ದು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.

English summary
Three Akali Dal workers are learnt to have suffered gunshot wounds after allegedly being attacked by Congress workers in Jalalabad on Tuesday, said Youth Akali Dal chief Parambans Singh Romana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X