ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಪಂಜಾಬ್ ಪ್ರವಾಸಕ್ಕೂ ಮುನ್ನ, ಗೋಡೆಗಳ ಮೇಲೆ ಖಲಿಸ್ತಾನ್ ಪರ ಘೋಷಣೆ

|
Google Oneindia Kannada News

ಜಲಂಧರ್ ಜೂನ್ 15: ಪಂಜಾಬ್‌ನಲ್ಲಿ ಖಾಲಿಸ್ತಾನ್ ಬೆಂಬಲಿಗರಿಂದ ಪ್ರತಿನಿತ್ಯ ನೀಚ ಕೃತ್ಯಗಳು ನಡೆಯುತ್ತಿವೆ. ಕೆಲವೊಮ್ಮೆ ಭಾರತದ ವಿರುದ್ಧ ಘೋಷಣೆಗಳನ್ನು ಎತ್ತಲಾಗುತ್ತದೆ ಮತ್ತು ಕೆಲವೊಮ್ಮೆ ಗೋಡೆಗಳ ಮೇಲೆ ಆಕ್ಷೇಪಾರ್ಹ ಪದಗಳನ್ನು ಬರೆಯಲಾಗುತ್ತದೆ. ಇಂದು ಜಲಂಧರ್‌ನಲ್ಲಿ ದೆಹಲಿ ಸಿಎಂ-ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಸಿಎಂ ಭಗವಂತ್ ಮಾನ್ ಕಾರ್ಯಕ್ರಮಕ್ಕೂ ಮುನ್ನ, ಖಲಿಸ್ತಾನ್ ಬೆಂಬಲಿಗರು ಮತ್ತೆ ಕೃತ್ಯ ಎಸಗಿದ್ದಾರೆ.

ಸಿದ್ದು ಮೂಸೆವಾಲಾ ಹತ್ಯೆ ಹಿಂದೆ ಬಿಷ್ಣೋಯ್ ಮಾಸ್ಟರ್ ಮೈಂಡ್: ಪೊಲೀಸರುಸಿದ್ದು ಮೂಸೆವಾಲಾ ಹತ್ಯೆ ಹಿಂದೆ ಬಿಷ್ಣೋಯ್ ಮಾಸ್ಟರ್ ಮೈಂಡ್: ಪೊಲೀಸರು

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಜಲಂಧರ್‌ನ ಕೊಳದ ಬಳಿ ಇರುವ ದೇವಿಯ ಶಕ್ತಿ ಪೀಠದ (ದೇವಾಲಯ) ಗೋಡೆಗಳ ಮೇಲೆ ಖಲಿಸ್ತಾನ್ ಬೆಂಬಲಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಬರೆಯಲಾಗಿದೆ ಎಂದು ಹೇಳಿದರು. ಇದೀಗ ಜಲಂಧರ್ ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಇದರಿಂದ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಘೋಷಣೆ ಕೂಗಿದವರ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Ahead of Kejriwals Punjab tour, pro-Khalistan slogans written on the walls

ವಿಶೇಷವೆಂದರೆ ಇಂದು ದೆಹಲಿ ಸಿಎಂ ಹಾಗೂ ಆಪ್ ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಸಿಎಂ ಭಗವಂತ್ ಮಾನ್ ಅವರ ಕಾರ್ಯಕ್ರಮ ಜಲಂಧರ್ ನಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ ಖಲಿಸ್ತಾನ್ ಬೆಂಬಲಿಗರು ಕೃತ್ಯ ಎಸಗಿದ್ದಾರೆ. ಆಪರೇಷನ್ ಬ್ಲೂ ಸ್ಟಾರ್‌ನ ವಾರ್ಷಿಕೋತ್ಸವದಂದು ಸಹ ಇಂತಹ ದೇಶ ವಿರೋಧಿ ಘೋಷಣೆಗಳು ಎದ್ದಿದ್ದವು.

Ahead of Kejriwals Punjab tour, pro-Khalistan slogans written on the walls

Recommended Video

Internet Explorer , Type C Charger ಹಾಗು ಮತ್ತಷ್ಟು techಜ್ಞಾನ | *Tech | OneIndia Kannada

ಇದಕ್ಕೂ ಮುನ್ನ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶ ದ್ವಾರದಲ್ಲಿ ಸಾವಿರಾರು ಜನರು ಜಮಾಯಿಸಿದ ವೇಳೆ ಸಮುದಾಯವೊಂದರ ಪರವಾಗಿ ಖಲಿಸ್ತಾನ್ ಪರ ಘೋಷಣೆಗಳನ್ನು ಎತ್ತಲಾಯಿತು ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿ ಜರ್ನೈಲ್ ಭಿಂದ್ರನ್‌ವಾಲೆ ಅವರ ಪೋಸ್ಟರ್-ಬ್ಯಾನರ್‌ಗಳನ್ನು ಸಹ ಹಿಡಿಯಲಾಗಿತ್ತು. ಈ ಜನರು ಗೋಲ್ಡನ್ ಟೆಂಪಲ್ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಅವರನ್ನು ಗೇಟ್ ಬಳಿ ನಿಲ್ಲಿಸಲಾಯಿತು.

English summary
Ahead of Kejriwal's Punjab tour, pro-Khalistan slogans with objectionable words were written on the walls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X