ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಹುಡುಗಿ 16 ವರ್ಷಕ್ಕೆ ವಿವಾಹವಾಗಬಹುದು: ಹೈಕೋರ್ಟ್‌

|
Google Oneindia Kannada News

ಚಂಡೀಗಢ್‌, ಜೂ. 20: 16 ಮತ್ತು 21 ವರ್ಷ ವಯಸ್ಸಿನ ಮುಸ್ಲಿಂ ದಂಪತಿಗಳಿಗೆ ಅವರ ಕುಟುಂಬ ಸದಸ್ಯರಿಂದ ರಕ್ಷಣೆ ನೀಡುವ ಸಂಬಂಧ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸೋಮವಾರ ತೀರ್ಪು ನೀಡಿದ್ದು, 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಅರ್ಹಳು ಎಂದು ತೀರ್ಪು ನೀಡಿದೆ.

ತಮಗೆ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಪಠಾಣ್‌ಕೋಟ್ ಮೂಲದ ಮುಸ್ಲಿಂ ದಂಪತಿಯ ಮನವಿಯ ಮೇರೆಗೆ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ ಸದ್ಯ ಈ ಆದೇಶ ನೀಡಿದೆ.

ಚನ್ನಪಟ್ಟಣ; ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿ ರಕ್ಷಣೆಚನ್ನಪಟ್ಟಣ; ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿ ರಕ್ಷಣೆ

ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ, ಅವರು ಭಾರತದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದಂತೆ ಅವರ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಇಸ್ಲಾಮಿಕ್ ಶರಿಯಾ ನಿಯಮವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬೇಡಿ, ಮುಸ್ಲಿಂ ಹುಡುಗಿಯ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲಾಗುತ್ತದೆ ಎಂದು ಹೇಳಿದರು.

A Muslim Girl Can Get Married at 16 Years Punjab Highcourt

ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರ ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಅರ್ಜಿದಾರರ ಸಂಖ್ಯೆ. 2 (ಹುಡುಗಿ) 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಒಪ್ಪಲು ಸಮರ್ಥರಾಗಿದ್ದಾರೆ. ಅರ್ಜಿದಾರ ನಂ.1 (ಹುಡುಗ) ವಯಸ್ಸು 21 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಹೇಳಲಾಗಿದೆ. ಹೀಗಾಗಿ, ಅರ್ಜಿದಾರರಿಬ್ಬರೂ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯ ವಯಸ್ಸಿನವರಾಗಿದ್ದಾರೆ ಎಂದು ಅವರು ಹೇಳಿದರು.

ಯುವತಿಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ಕೇಂದ್ರ ಸಂಪುಟ ಸಮ್ಮತಿಯುವತಿಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ಕೇಂದ್ರ ಸಂಪುಟ ಸಮ್ಮತಿ

ಅರ್ಜಿದಾರರ ಆತಂಕವನ್ನು ನಿವಾರಿಸುವ ಅವಶ್ಯಕತೆಯಿದೆ ಎಂಬ ನಾವು ಸುಮ್ಮನೇ ಇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದಂಪತಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‌ಎಸ್‌ಪಿ ಪಠಾಣ್‌ಕೋಟ್‌ಗೆ ನಿರ್ದೇಶನ ನೀಡಿದೆ.

A Muslim Girl Can Get Married at 16 Years Punjab Highcourt

ಅರ್ಜಿದಾರರ ಪ್ರಕಾರ, ಅವರ ವಿವಾಹವನ್ನು ಜೂನ್ 8, 2022 ರಂದು ಮುಸ್ಲಿಂ ವಿಧಿಗಳ ಪ್ರಕಾರ ನೆರವೇರಿಸಲಾಯಿತು. ಆದರೆ, ಅವರ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬದ ಅನುಮತಿಯಿಲ್ಲದೆ ಮದುವೆಯಾಗಿದ್ದಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದರು.

ಅರ್ಜಿದಾರ ದಂಪತಿ ಮುಸ್ಲಿಂ ಕಾನೂನಿನಲ್ಲಿ, ಪ್ರೌಢಾವಸ್ಥೆ ಮತ್ತು ಸಮುದಾಯದ ಮನ್ನಣೆ ಒಂದೇ ಆಗಿರುತ್ತದೆ. ಒಬ್ಬ ವ್ಯಕ್ತಿಯು 15 ವರ್ಷ ವಯಸ್ಸಿನಲ್ಲಿ ಮನ್ನಣೆ ಪಡೆಯುತ್ತಾನೆ ಎಂಬ ಊಹೆ ಇದೆ ಎಂದು ವಾದಿಸಿದ್ದರು.

English summary
The Punjab and Haryana High Court ruled that Muslim couples between the ages of 16 and 21 are protected by their family members and that a Muslim girl over the age of 16 is entitled to a marriage contract with a man of her choice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X