• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹರಿಯಾಣದ ಖಾಸಗಿ ಕಂಪನಿಗಳಲ್ಲಿ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗ

|
Google Oneindia Kannada News

ಚಂಡೀಘರ್, ನವೆಂಬರ್,06: ಹರಿಯಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಹೊಸ ಮಸೂದೆಯೊಂದನ್ನು ಅಂಗೀಕರಿಸಲಾಗಿದೆ. ರಾಜ್ಯದಲ್ಲಿರುವ ಖಾಸಗಿ ಕಂಪನಿಗಳಲ್ಲೂ ಕೂಡಾ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗವನ್ನು ಮೀಸಲು ಇರಿಸುವುದು ಕಡ್ಡಾಯವಾಗಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರವು ಇಂಥದೊಂದು ಮಹತ್ವದ ಮಸೂದೆಯನ್ನು ಶುಕ್ರವಾರ ರಾಜ್ಯ ವಿಧಾನಸಭಾ ಕಲಾಪದಲ್ಲಿ ಅಂಗೀಕರಿಸಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಬೆನ್ನಲ್ಲೇ ಕಾರ್ಮಿಕರ ವಲಸೆಯನ್ನು ನಿಯಂತ್ರಿಸಲು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಬಿಹಾರಕ್ಕೆ ಘೋಷಿಸಿದ 1.25 ಲಕ್ಷ ಕೋಟಿ ಅನುದಾನ ಎಲ್ಲಿ: ತೇಜಸ್ವಿ ಯಾದವ್ಬಿಹಾರಕ್ಕೆ ಘೋಷಿಸಿದ 1.25 ಲಕ್ಷ ಕೋಟಿ ಅನುದಾನ ಎಲ್ಲಿ: ತೇಜಸ್ವಿ ಯಾದವ್


ಉದ್ಯಮಗಳ ಬಂಡವಾಳ ಹೂಡಿಕೆಗೆ ಹಿನ್ನಡೆ:
ಹರಿಯಾಣ ಸರ್ಕಾರವು ಈ ಕರಡು ಪ್ರಸ್ತಾವನೆ ಬಗ್ಗೆ ಪ್ರಕಟಿಸಿದ ಸಂದರ್ಭದಲ್ಲಿ ಸಿಐಐ ಮತ್ತು ಮಾರುತಿ ಕಂಪನಿಯ ಇಬ್ಬರು ಪ್ರತಿನಿಧಿಗಳು ಭಾಗವಹಿಸಿದ್ದರು. ಅಂದು ಸರ್ಕಾರದ ಪ್ರಸ್ತಾವನೆ ಉದ್ಯಮಗಳ ಹಿತದೃಷ್ಟಿಗೆ ವಿರುದ್ಧವಾಗಿದೆ. ಹರಿಯಾಣ ಸರ್ಕಾರವು ಈ ಕಾಯ್ದೆಯಿಂದಾಗಿ ಉದ್ಯಮಗಳು ಮತ್ತು ಬಂಡವಾಳ ಹೂಡಿಕೆಯನ್ನು ಕಳೆದುಕೊಳ್ಳಬಹುದು. ಇದರ ಹೊರತಾನಿ ನಾವು ಈ ಮೊದಲಿನ ನಿಲುವಿಗೆ ಬದ್ಧರಾಗಿರುತ್ತೇವೆ. ಇಲ್ಲದಿದ್ದರೆ ಉದ್ಯಮಗಳ ಸ್ಪರ್ಧಾತ್ಮಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್ ಸಿ ಭಾರ್ಗವ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸರ್ಕಾರದ ಕಾಯ್ದೆಯಲ್ಲಿ ಇರುವುದೇನು:
ಹರಿಯಾಣ ಸರ್ಕಾರವು ಜಾರಿಗೊಳಿಸಿರುವ ರಾಜ್ಯ ಉದ್ಯೋಗ ಮಸೂದೆ 2020ರಲ್ಲಿ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪೈಕಿ ಪ್ರತಿ ಉದ್ಯೋಗದಾತ ಸಂಸ್ಥೆಗಳು ಶೇಕಡಾ 75ರಷ್ಟು ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು. ಅಂತಹ ಹುದ್ದೆಗಳಿಗೆ ಸಂಬಂಧಿಸಿದಂತೆ ಒಟ್ಟು ಮಾಸಿಕ ವೇತನವು 50000 ರೂ. ಮೀರದಂತಿರಬೇಕು. ರಾಜ್ಯದ ಯಾವುದೇ ಜಿಲ್ಲೆಗಳಿಂದ ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಒಟ್ಟು ಸ್ಥಳೀಯ ಉದ್ಯೋಗಿಗಳ ಸಂಖ್ಯೆಯ ಶೇ.10ಕ್ಕಿಂತ ಹೆಚ್ಚು ಉದ್ಯೋಗಿಗಳು ಒಂದು ಜಿಲ್ಲೆಗೆ ಸೇರಿದವರು ಆಗಿರಬಾರದು.
ಪ್ರತಿಯೊಬ್ಬ ಉದ್ಯೋಗದಾತ ಸಂಸ್ಥೆಗಳು ಮತ್ತು ಉದ್ಯೋಗ ಬಯಸುವ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ ಪೋರ್ಟಲ್ ನಲ್ಲಿ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕು. ಹೀಗೆ ನೊಂದಾಯಿಸಿಕೊಂಡ ಕಂಪನಿಗಳು ಮತ್ತು ಅಭ್ಯರ್ಥಿಗಳು ಮಾತ್ರ ಉದ್ಯೋಗ ಪಡೆದುಕೊಳ್ಳುವುದಕ್ಕೆ ಹಾಗೂ ನೀಡುವುದಕ್ಕೆ ಅರ್ಹರಾಗಿರುತ್ತಾರೆ.

ಹಾಸ್ಯಾಸ್ಪದ ಶಾಸನ ಎಂದ ಶಾಸಕ ರಾಮ್ ಕುಮಾರ್ ಗೌತಮ್:
ಹರಿಯಾಣ ಸರ್ಕಾರವು ಜಾರಿಗೊಳಿಸಿದ ರಾಜ್ಯ ಉದ್ಯೋಗ ಮಸೂಗೆಯನ್ನು ನರ್ನಾಂಡ್ ವಿಧಾನಸಭಾ ಕ್ಷೇತ್ರದ ಜೆಜೆಪಿ ಶಾಸಕ ರಾಮ್ ಕುಮಾರ್ ಗೌತಮ್ ವಿರೋಧಿಸಿದ್ದಾರೆ. ಸರ್ಕಾರದ ಮಸೂದೆ "ಹಾಸ್ಯಾಸ್ಪದ ಶಾಸನ" ಮತ್ತು "100 ಪ್ರತಿಶತ ತಪ್ಪು" ಎಂದು ಹೇಳಿದ್ದಾರೆ. "ನೀವು ಯಾವುದೇ ಕಾನೂನುಗಳನ್ನು ಜಾರಿಗೊಳಿಸಬಹುದು. ಆದರೆ ರೈತರು ಬೆಳೆದ ಬೆಳೆಗಳನ್ನು ಕೊಯ್ಲು ಮಾಡಲು, ಇಂದಿಗೂ ನಾವು ಬಿಹಾರ ಮತ್ತು ಇತರ ರಾಜ್ಯದ ಜನರನ್ನು ಅವಲಂಬಿಸಿದ್ದೇವೆ. ಇಂಥ ಕಾನೂನು ಜಾರಿಗೊಳಿಸುವ ಅಗತ್ಯವಾದರೂ ಏನಿದೆ. ಇಡೀ ದೇಶವೇ ನಮ್ಮದು. ಯಾವುದೇ ಸಹೋದರ ಬೇರೆ ರಾಜ್ಯದಿಂದ ಕೆಲಸ ಅರಸಿ ಬಂದರೆ, ನೀವು ಅವನನ್ನು ಹೇಗೆ ತಡೆಯುತ್ತೀರಿ. ನಮ್ಮ ಮಕ್ಕಳು ಬೇರೆ ರಾಜ್ಯಕ್ಕೆ ಹೋದಾಗ ಅವರಿಗೂ ಅಲ್ಲಿ ಇಂಥ ಪರಿಸ್ಥಿತಿ ಎದುರಾದರೆ ಏನು ಮಾಡುತ್ತೀರಿ. ಆ ಸಂದರ್ಭದಲ್ಲಿ ನಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ? ನಾನು ಇದನ್ನು ಒಪ್ಪುವುದಿಲ್ಲ "ಎಂದು ಗೌತಮ್ ವಿರೋಧಿಸಿದ್ದಾರೆ.

ವಿಪಕ್ಷ ಮುಖಂಡ ಭೂಪೇಂದ್ರ ಸಿಂಗ್ ಹೂಡಾ ಆಕ್ಷೇಪ:
ಹರಿಯಾಣ ಸರ್ಕಾರವು ಜಾರಿಗೊಳಿಸಿದ ಹೊಸ ಕಾಯ್ದೆಯನ್ನು ವಿರೋಧ ಪಕ್ಷದ ಮುಖಂಡ ಭೂಪೇಂದ್ರ ಸಿಂಗ್ ಹೂಡಾ ವಿರೋಧಿಸಿದ್ದಾರೆ. "ನಮ್ಮ ಅಧಿಕಾರಾವಧಿಯಲ್ಲಿ ಈಗಾಗಲೇ ಇದೇ ರೀತಿ ಷರತ್ತು ಜಾರಿಗೊಳಿಸಲಾಗಿದೆ. ಉದ್ಯಮವು ಹರಿಯಾಣದ ಜನರಿಗೆ ಉದ್ಯೋಗ ನೀಡುವುದಾಗಿ ಅಫಿಡವಿಟ್ ನೀಡದ ಹೊರತು ಯಾವುದೇ ಉದ್ಯಮಕ್ಕೆ ಎಚ್‌ಎಸ್‌ಐಐಡಿಸಿ ಅನುಮತಿ ನೀಡುವುದಿಲ್ಲ. ನಾವು ಆ ಷರತ್ತನ್ನು ಎಚ್‌ಎಸ್‌ಐಐಡಿಸಿಯಿಂದ ತೆಗೆದುಹಾಕದ ಹೊರತು ಮತ್ತೊಂದು ಮಸೂದೆ ಹೇಗೆ ಜಾರಿಗೊಳಿಸುತ್ತೀರಿ. ಸರ್ಕಾರ ಹೀಗೆ ಮಾಡುವುದಕ್ಕೆ ಎಲ್ಲಿ ಅವಕಾಶವಿದೆ. ಈ ಶೇಕಡಾ 10 ರ ನಿರ್ಬಂಧವನ್ನು ನಾನು ಬಲವಾಗಿ ಆಕ್ಷೇಪಿಸುತ್ತೇನೆ ಎಂದು ಹೂಡಾ ಕಿಡಿ ಕಾರಿದ್ದಾರೆ. ಸರ್ಕಾರವು ಒಟ್ಟಾರೆ ಶೇಕಡಾ 75 ರಷ್ಟು ಮೀಸಲಾತಿಗೊಳಿಸಬೇಕು ಮತ್ತು ಪ್ರತಿ ಜಿಲ್ಲೆಗೆ ಶೇ.10 ಶೇಕಡಾ ಮಿತಿಯನ್ನು ತೆಗೆದುಹಾಕಬೇಕು "ಎಂದು ಹೂಡಾ ಆಗ್ರಹಿಸಿದ್ದಾರೆ.

ಸಿಎಂ ಮನೋಹರ್ ಲಾಲ್ ಖಟ್ಟರ್ ಸ್ಪಷ್ಟನೆ:
ಹರಿಯಾಣದಿಂದ ಹೊರ ಹೋಗುವುದಕ್ಕೆ ಮಾರುತು ಕಂಪನಿಯು ಮೊದಲೇ ತೀರ್ಮಾನಿಸಿತ್ತು. ರಾಜ್ಯದ ಉದ್ಯೋಗಿಗಳು ನಮ್ಮ ಕಂಪನಿಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಅವರು ಮೊದಲೇ ಹೇಳಿದ್ದರು. ಅದಾಗ್ಯೂ ಮಾರುತು ಕಂಪನಿ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಯಾವುದೇ ಸಂದರ್ಭದಲ್ಲಿ ಸರ್ಕಾರವು ಕಂಪನಿಯ ನೆರವಿಗೆ ನಿಲ್ಲುತ್ತದೆ ಎಂದು ನಾನು ಭರವಸೆಯನ್ನೂ ಕೊಟ್ಟಿದ್ದೆನು ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಇತ್ತೀಚಿಗೆ ಹೋಂಡಾ ಕಂಪನಿ ಕೂಡಾ ಇದೇ ವಿಚಾರಕ್ಕೆ ಸರ್ಕಾರದ ಎದುರಿಗೆ ಬಂದಿತ್ತು. ಪ್ರತಿ ಜಿಲ್ಲೆಯಿಂದ ಕನಿಷ್ಠ 10 ಶೇಕಡಾ ನೇಮಕ ಮಾಡಿಕೊಳ್ಳಬೇಕೇ ಬೇಡವೇ ಎನ್ನುವುದನ್ನು ಉದ್ಯಮಗಳ ವಿವೇಚನೆಗೆ ಬಿಡಲಾಗಿದೆ. ಆದರೆ ಒಟ್ಟು ಶೇ.75ರಷ್ಟು ಉದ್ಯಮಿಗಳು ರಾಜ್ಯದೊಳಗಿನವರೇ ಆಗಿರಬೇಕು ಎಂದು ಹೇಳಿದ್ದಾರೆ. ಏಕೆಂದರೆ ಗುರಗಾಂವ್ ಮತ್ತು ಫರಿದಾಬಾದ್ ‌ನಲ್ಲಿರುವ ಉದ್ಯಮಗಳು ಮತ್ತು ಕಾರ್ಮಿಕರ ದಾಖಲೆಗಳನ್ನುನ ಒಮ್ಮೆ ನೋಡಿದರೆ ಅಲ್ಲಿರುವ ಬಹುಪಾಲು ಕಾರ್ಮಿಕರು ಹೊರರಾಜ್ಯದವರೇ ಆಗಿದ್ದಾರೆ ಎಂದು ಖಟ್ಟರ್ ತಿಳಿಸಿದ್ದಾರೆ.

ಉದ್ಯಮಗಳಿಂದ ರಾಜ್ಯಕ್ಕೆ ಎರಡು ಲಾಭ:
ಸಾಮಾನ್ಯವಾಗಿ ಉದ್ಯಮಗಳಿಂದ ರಾಜ್ಯಕ್ಕೆ ಬಂಡವಾಳದ ಜೊತೆಗೆ ತೆರಿಗೆ ಮತ್ತು ಉದ್ಯೋಗ ಎಂಬ ಎರಡು ಲಾಭಗಳು ಆಗುತ್ತವೆ. ಆದರೆ ಇತ್ತೀಚಿಗೆ ಜಿಎಸ್ ಟಿ ಜಾರಿಗೊಳಿಸಿದಾಗಿನಿಂದ ತೆರಿಗೆ ಸಂಗ್ರಹ ಪ್ರಮಾಣ ಮೊದಲಿಗಿಂತ ತೀರಾ ಕಡಿಮೆಯಾಗಿದೆ. ಇಂದು, ಜಿಎಸ್ಟಿ ಕಾರಣ, ಮೌಲ್ಯವರ್ಧಿತ ತೆರಿಗೆ ಹೊರತುಪಡಿಸಿ ನಮಗೆ ಯಾವುದೇ ಆದಾಯ ಸಿಗುವುದಿಲ್ಲ. ಇದೀಗ ಉಳಿದಿರುವುದು ಉದ್ಯೋಗ ಮಾತ್ರ. ಉದ್ಯಮಗಳಿಂದ ನಮ್ಮ ರಾಜ್ಯದ ಜನರಿಗೆ ಉದ್ಯೋಗವಾದರೂ ಸಿಗಬೇಕಿದೆ. ರಾಜ್ಯದ 22 ಜಿಲ್ಲೆಗಳ ಪೈಕಿ ಒಂದು ಜಿಲ್ಲೆಯಲ್ಲಿ 10 ಜನರಿಗೆ ಉದ್ಯೋಗ ಸಿಕ್ಕಲ್ಲಿ, 22 ಜಿಲ್ಲೆಗಳಿಂದ 220 ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಿದಂತೆ ಆಗುತ್ತದೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

English summary
75% Pvt Sector Jobs for Locals: Haryana Govt Passes New Bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X