ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವಂತ್ ಮಾನ್ ಸಂಪುಟದ 11 ಸಚಿವರಲ್ಲಿ 7 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು

|
Google Oneindia Kannada News

ಚಂಡಿಗಢ ಮಾರ್ಚ್ 21: ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಸಂಪುಟದ ಏಳು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸೋಮವಾರ ತಿಳಿಸಿದೆ. ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ 11 ಸದಸ್ಯರ ಪೈಕಿ ಮುಖ್ಯಮಂತ್ರಿ ಸೇರಿದಂತೆ ಏಳು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದು, ಈ ಪೈಕಿ ನಾಲ್ವರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಅಲ್ಲದೆ, 11 ಸಚಿವರಲ್ಲಿ ಒಂಬತ್ತು ಮಂದಿ ಕೋಟ್ಯಾಧಿಪತಿಗಳಾಗಿದ್ದು, ಅವರ ಆಸ್ತಿ ಸರಾಸರಿ 2.87 ಕೋಟಿ ರೂಪಾಯಿ ಇದೆ. ಚುನಾವಣೆಯಲ್ಲಿ ಗೆದ್ದಿರುವ ಬ್ರಾಮ್ ಶಂಕರ್ ಅವರು ಅತಿ ಹೆಚ್ಚು ಘೋಷಿತ ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ. ಬ್ರಾಮ್ ಶಂಕರ್ ಅವರು ಬರೋಬ್ಬರಿ 8.56 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಭೋವಾ (ಎಸ್‌ಸಿ) ಕ್ಷೇತ್ರದಿಂದ ಲಾಲ್ ಚಂದ್ ಅವರು 6.19 ಲಕ್ಷ ಮೌಲ್ಯದ ಘೋಷಿತ ಆಸ್ತಿಯನ್ನು ಹೊಂದಿದ್ದಾರೆ.

ಬ್ರಾಮ್ ಶಂಕರ್ ಅತಿ ಹೆಚ್ಚು ಹೊಣೆಗಾರಿಕೆಯನ್ನು ಹೊಂದಿರುವ ಸಚಿವರಾಗಿದ್ದಾರೆ. ಅವರು 1.08 ಕೋಟಿ ರೂಪಾಯಿ ಆಸ್ತಿ ಹೊಂದಿದ ಐವರು ಸಚಿವರು (ಶೇ 45) ತಮ್ಮ ಶೈಕ್ಷಣಿಕ ಅರ್ಹತೆಯನ್ನು 10 ಮತ್ತು 12 ನೇ ತರಗತಿಯ ನಡುವೆ ಇದೆ ಎಂದು ಘೋಷಿಸಿದ್ದಾರೆ. ಉಳಿದವರು ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದುಕೊಂಡಿದ್ದಾರೆ ಎಂದು ಎಡಿಆರ್ ಹೇಳಿದೆ.

7 Out of 11 Ministers Face Criminal Cases in Bhagwant Mann’s Cabinet

ಆರು ಸಚಿವರು (ಶೇ 55) ತಮ್ಮ ವಯಸ್ಸು 31 ರಿಂದ 50 ವರ್ಷ ಎಂದು ಘೋಷಿಸಿದ್ದಾರೆ ಮತ್ತು ಐವರು (ಶೇ 45) 51 ಮತ್ತು 60 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಎಡಿಆರ್ ತಿಳಿಸಿದೆ.

ಮಾರ್ಚ್ 10 ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ್ದರು. ಹತ್ತು ಎಎಪಿ ಶಾಸಕರು ಶನಿವಾರ ಪಂಜಾಬ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರೆಂದರೆ ಹರ್ಪಾಲ್ ಸಿಂಗ್ ಚೀಮಾ, ಹರ್ಭಜನ್ ಸಿಂಗ್, ಡಾ ವಿಜಯ್ ಸಿಂಗ್ಲಾ, ಲಾಲ್ ಚಂದ್, ಗುರ್ಮೀತ್ ಸಿಂಗ್ ಮೀತ್ ಹೇಯರ್, ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಾಮ್ ಶಂಕರ್ ಜಿಂಪಾ, ಹರ್ಜೋತ್ ಸಿಂಗ್ ಬೈನ್ಸ್ ಮತ್ತು ಡಾ ಬಲ್ಜಿತ್ ಕೌರ್.

ಎರಡನೇ ಅವಧಿಗೆ ಮರು ಆಯ್ಕೆಯಾದ ದಿರ್ಬಾದ ಶಾಸಕ ಹರ್ಪಾಲ್ ಚೀಮಾ ವೃತ್ತಿಯಲ್ಲಿ ವಕೀಲರಾಗಿದ್ದಾರೆ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿಕಟವರ್ತಿಯಾಗಿದ್ದಾರೆ. ಇನ್ನೂ ಸಚಿವರಾದ ಡಾ ಬಲ್ಜಿತ್ ಕೌರ್ ಅವರು ವೃತ್ತಿಯಲ್ಲಿ ವೈದ್ಯೆ. ಕೌರ್ ಮಾಜಿ ಎಎಪಿ ಸಂಸದ ಪ್ರೊ ಸಾಧು ಸಿಂಗ್ ಅವರ ಪುತ್ರಿ. ಅವರು ರಾಜಕೀಯ ಪ್ರವೇಶಕ್ಕಾಗಿ ತಮ್ಮ ಸರ್ಕಾರಿ ಸೇವೆಯನ್ನು ತೊರೆದರು. ವೃತ್ತಿಯಲ್ಲಿ ದಂತವೈದ್ಯರಾಗಿರುವ ಡಾ ವಿಜಯ್ ಸಿಂಗ್ಲಾ ಅವರು ಮಾನ್ಸಾ ಪ್ರತಿನಿಧಿಸುತ್ತಿದ್ದು ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ಈ ಚುನಾವಣೆಯಲ್ಲಿ ಸಿಂಗ್ಲಾ ಅವರು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಸೋಲಿಸಿದರು. ಆಸಕ್ತಿಕರ ಸಂಗತಿಯೆಂದರೆ ಗಾಯಕ ಸಿಧು, ಸಿಂಗ್ಲಾ ಅವರಲ್ಲಿಯೇ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.

ಇನ್ನೂ ಮಝಾ ಪ್ರದೇಶದ ಜಂಡಿಯಾಲಾದಿಂದ ಶಾಸಕರಾಗಿರುವ ಹರ್ಭಜನ್ ಸಿಂಗ್ ಅವರು ಸ್ವಯಂ ನಿವೃತ್ತಿ ಪಡೆಯುವ ಮೊದಲು ಪಂಜಾಬ್ ಸರ್ಕಾರದಲ್ಲಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಯಾಗಿದ್ದರು. ಅವರು 2017 ರ ಚುನಾವಣೆಯಲ್ಲಿ ಎಎಪಿ ಟಿಕೆಟ್‌ನಲ್ಲಿ ವಿಫಲರಾಗಿದ್ದರು, ಆದರೆ ಈ ಬಾರಿ ಅವರು ಉತ್ತಮ ಅಂತರದಿಂದ ಗೆದ್ದಿದ್ದಾರೆ.

ಹರ್ಜೋತ್ ಸಿಂಗ್ ಬೈನ್ಸ್ ಅವರು ಬೈನ್ಸ್ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಾಗಿದ್ದಾರೆ. ಗುರ್ಮೀತ್ ಸಿಂಗ್ ಮೀತ್ ಹೇಯರ್ ಅವರು ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಇನ್ನೂ ಅನುಭವಿ ಕಮ್ಯುನಿಸ್ಟ್ ಲಾಲ್ ಚಂದ್ ಕತರುಚಕ್ ಸಿಪಿಎಂನಲ್ಲಿ ತಮ್ಮ ಜೀವನದುದ್ದಕ್ಕೂ ಸಕ್ರಿಯರಾಗಿದ್ದರು. ನಂತರ, ಸುಮಾರು ಎರಡು ದಶಕಗಳ ಹಿಂದೆ ಮಂಗತ್ ರಾಮ್ ಪಸ್ಲಾ ಸಿಪಿಎಂನಿಂದ ಬೇರ್ಪಟ್ಟಾಗ ಮತ್ತು ತನ್ನದೇ ಆದ ಪಂಜಾಬ್ ಮೂಲದ ಪಕ್ಷವಾದ ಲಾಲ್ ಚಂದ್ ಸೇರ್ಪಡೆಯಾದ ಪಸ್ಲಾವನ್ನು ಸ್ಥಾಪಿಸಿದರು. ಜೊತೆಗೆ ನೂತನ ಸಚಿವಾರಗಿ ಪ್ರಮಾಣವಚನ ಸ್ವೀಕರಿಸಿದ ಲಾಲ್ಜಿತ್ ಸಿಂಗ್ ಭುಲ್ಲರ್ ಒಬ್ಬ ಕೃಷಿಕ ಮತ್ತು ವೃತ್ತಿಯಲ್ಲಿ ಕಮಿಷನ್ ಏಜೆಂಟ್ ಆಗಿದ್ದಾರೆ.

ಮಾಜಿ ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ ಅವರನ್ನು ಸೋಲಿಸುವ ಮೂಲಕ ಬ್ರಹಮ್ ಶಂಕರ್ ಜಿಂಪಾ ಹೋಶಿಯಾರ್‌ಪುರದಿಂದ ಶಾಸಕರಾದರು. ಇವರು ವಿದ್ಯಾರ್ಹತೆಯಲ್ಲಿ 12ನೇ ತೇರ್ಗಡೆಯಾಗಿದ್ದಾರೆ. ಜೊತೆಗೆ ಅಜ್ನಾಲಾದಿಂದ ಶಾಸಕರಾದ ಕುಲದೀಪ್ ಸಿಂಗ್ ಧಲಿವಾಲ್ ಅವರು ವೃತ್ತಿಯಲ್ಲಿ ರೈತ. ಮೆಟ್ರಿಕ್ಯುಲೇಟೆಡ್ ವಿದ್ಯಾರ್ಹತೆ ಪಡೆದಿದ್ದಾರೆ.

English summary
The newly-sworn Punjab Chief Minister Bhagwant Mann and 7 ministers in his cabinet have criminal cases filed against them, poll rights group Association for Democratic Reforms said on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X