ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನಿಂದ ಕಳ್ಳ ಸಾಗಣೆ; 2700 ಕೋಟಿಯ 532 ಕೇಜಿ ಹೆರಾಯಿನ್ ವಶ

|
Google Oneindia Kannada News

ಚಂಡೀಗಢ, ಜೂನ್ 30: ಅಟ್ಟಾರಿ ಗಡಿಯ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ನಲ್ಲಿ (ಐಸಿಪಿ) 2700 ಕೋಟಿ ರುಪಾಯಿ ಮೌಲ್ಯದ 532 ಕೇಜಿ ತೂಕದ ಹೆರಾಯಿನ್ ಅನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ವ್ಯಾಪಾರಿಯೊಬ್ಬರು ಖರೀದಿ ಮಾಡಿದ್ದ ಕಲ್ಲು ಉಪ್ಪಿನ ಸರಕು ಸಾಗಣೆ ಮಾಡುವ ಮಧ್ಯೆ ಹೆರಾಯಿನ್ ಇಟ್ಟುಕೊಂಡು, ಪಾಕಿಸ್ತಾನದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು.

ಅಂತರರಾಷ್ಟ್ರೀಯ ಮಾದಕ ವಸ್ತು ಸಾಗಣೆಯ ಪ್ರಮುಖ ಜಾಲವೊಂದನ್ನು ಭೇದಿಸಿದ್ದು 532 ಕೇಜಿ ಹೆರಾಯಿನ್ ಹಾಗೂ 52 ಕೇಜಿ ಶಂಕಿತ ಮಾದಕ ದ್ರವ್ಯಗಳ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದ ಕಸ್ಟಮ್ಸ್ ಇತಿಹಾಸದಲ್ಲೇ ಇದೊಂದು ದಾಖಲೆ ಎಂದು ಕಸ್ಟಮ್ಸ್ ಕಮಿಷನರ್ ದೀಪಕ್ ಕುಮಾರ್ ಗುಪ್ತಾ ಹೇಳಿದ್ದಾರೆ.

ಬ್ಲ್ಯಾಕ್ ಲಿಸ್ಟ್: ಪಾಕಿಸ್ತಾನಕ್ಕೆ ಎಫ್ಎಟಿಎಫ್ ನೀಡಿದ ಅಂತಿಮ ಗಡುವುಬ್ಲ್ಯಾಕ್ ಲಿಸ್ಟ್: ಪಾಕಿಸ್ತಾನಕ್ಕೆ ಎಫ್ಎಟಿಎಫ್ ನೀಡಿದ ಅಂತಿಮ ಗಡುವು

ಆರು ನೂರು ಬ್ಯಾಗ್ ಗಳನ್ನು ಸಂಪೂರ್ಣವಾಗಿ ಪರಿಶೀಲಿಸುವ ವೇಳೆ ಹದಿನೈದು ಬ್ಯಾಗ್ ಗಳಲ್ಲಿ ಮಾದಕ ದ್ರವ್ಯಗಳು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಹದಿನೈದೂ ಬ್ಯಾಗ್ ಗಳನ್ನು ಸಂಪೂರ್ಣ ಪರಿಶೀಲನೆ ನಡೆಸಿದ ಮೇಲೆ 532 ಕೇಜಿ ಹೆರಾಯಿನ್ ಹಾಗೂ 52 ಕೇಜಿ ಶಂಕಿತ ಮಾದಕ ದ್ರವ್ಯಗಳ ಮಿಶ್ರಣ ದೊರೆತಿದೆ.

pakistan smuggling drugs

ಈ ಸರಕನ್ನು ಆಮದು ಮಾಡಿಕೊಳ್ಳುತ್ತಿದ್ದ ಅಮೃತಸರದ ವರ್ತಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಜಮ್ಮು- ಕಾಶ್ಮೀರದ ಹಂದ್ವಾರದಲ್ಲಿನ ತಾರೀಕ್ ಅಹ್ಮದ್ ಲೋನ್ ಈ ಕಳ್ಳ ಸಾಗಣೆಯ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ಇನ್ನು ಕಾನೂನುಬದ್ಧ ರಫ್ತುದಾರ ಗುರುವಿಂದ್ ಸಿಂಗ್ ನನ್ನು ಬಂಧಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಲೋನ್ ಗೆ ಪರವಾನಗಿ ಸಿಕ್ಕಿತ್ತು.

ಮೂಲಗಳ ಪ್ರಕಾರ, ಸ್ಥಳೀಯ ವರ್ತಕ- ಹುಸೇನ್ ಪುರ್ ನ ಸಿಂಗ್ ಅಮೃತ್ ಸರಕ್ಕೆ ಸೇರಿದ ವ್ಯಕ್ತಿ. ಆತ ಪಾಕಿಸ್ತಾನದಲ್ಲಿನ ಗ್ಲೋಬ್ ವಿಷನ್ ಎಂಟರ್ ಪ್ರೈಸಸ್ ನಿಂದ ಉಪ್ಪು ಖರೀದಿಗೆ ಆರ್ಡರ್ ಮಾಡಿದ್ದ. ಅದೇ ಗ್ಲೋಬ್ ವಿಷನ್ ನಿಂದ ಆರುನೂರು ಉಪ್ಪಿನ ಬ್ಯಾಗ್ ಬಂದಿದ್ದವು. ಜೂನ್ ಇಪ್ಪತ್ತಾರರಂದು ಅಟ್ಟಾರಿಗೆ ಬಂದ ಸರಕು ಅಲ್ಲೇ ಇತ್ತು.

ಸ್ಥಳೀಯ ವರ್ತಕ ಶನಿವಾರ ಐಸಿಪಿಗೆ ಬಂದು, ಉಪ್ಪಿನ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾನೆ. ಆಗ ಅಧಿಕಾರಿಗಳಿಗೆ ಅನುಮಾನ ಮೂಡಿ, ಕೆಲವು ಬ್ಯಾಗ್ ಗಳನ್ನು ತೆರೆದಿದ್ದಾರೆ. ಆಗ ಕನಿಷ್ಠ ಒಂದು ಕೇಜಿಯ ಡ್ರಗ್ ಪ್ಯಾಕೆಟ್ ಪ್ರತಿ ಬ್ಯಾಗ್ ನಲ್ಲೂ ಕಂಡು ಬಂದಿದೆ. ಈ ಹಿಂದೆ ಕೂಡ ಇದೇ ತಂತ್ರ ಮಾಡಿ, ಮಾದಕ ದ್ರವ್ಯಗಳನ್ನು ಭಾರತದೊಳಕ್ಕೆ ತಂದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

English summary
532 kg heroin, worth of 2300 crore smuggled from Pakistan seized in Attari border on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X