• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್ ಚುನಾವಣೆ: ಆರ್‌ಡಿಎಕ್ಸ್‌, ಗ್ರೆನೇಡ್‌ಗಳು ಪತ್ತೆ

|
Google Oneindia Kannada News

ಚಂಡೀಗಢ, ಜನವರಿ 22: ಪಂಜಾಬ್‌ನಲ್ಲಿ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಭದ್ರತೆ ಹೆಚ್ಚಾಗಿದೆ.

ಇದರ ಬೆನ್ನಲ್ಲೇ ರಾಜ್ಯದ ಗುರುದಾಸ್‌ಪುರ ಜಿಲ್ಲೆಯಲ್ಲಿ ಪೊಲೀಸರು ಶುಕ್ರವಾರ ದೀನಾನಗರ ವಿಧಾನಸಭಾ ಕ್ಷೇತ್ರದಿಂದ ಸುಮಾರು 2 ಕೆಜಿ ಆರ್‌ಡಿಎಕ್ಸ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ZEE News Opinion Poll: ಪಂಜಾಬ್‌ನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎನ್ನುತ್ತಿರುವ ಸಮೀಕ್ಷೆZEE News Opinion Poll: ಪಂಜಾಬ್‌ನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎನ್ನುತ್ತಿರುವ ಸಮೀಕ್ಷೆ

ಪಂಜಾಬ್‌ನ ಹಲವೆಡೆ ಸ್ಫೋಟಕ ವಸ್ತುಗಳು ಇತ್ತೀಚೆಗೆ ಪತ್ತೆಯಾಗುತ್ತಿವೆ. ಪರಿಣಾಮ ಭದ್ರತಾ ಏಜೆನ್ಸಿಗಳು ರಾಜ್ಯದ ಭದ್ರತೆಗೆ ಸಂಬಂಧಿಸಿದಂತೆ ನಿರಂತರವಾಗಿ ಹೆಚ್ಚು ಜಾಗರೂಕರಾಗಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಲೋಪವಾಗಿರುವ ವಿಚಾರವೂ ಚರ್ಚೆಗೆ ಗ್ರಾಸವಾಗಿತ್ತು.

ಕಳೆದ ವಾರ ಅಮೃತಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಅಟ್ಟಾರಿಯ ಧನೋವಾ ಕಾಲಾ ಗ್ರಾಮದ ಅಂತಾರಾಷ್ಟ್ರೀಯ ಗಡಿ ಬಳಿ 5 ಕೆಜಿ ಆರ್‌ಡಿಎಕ್ಸ್ ಅನ್ನು ವಶಪಡಿಸಿಕೊಂಡಿತ್ತು. ಆರ್‌ಡಿಎಕ್ಸ್ ಹೊರತಾಗಿ ವಿಶೇಷ ಕಾರ್ಯಪಡೆಯು ಆರು ಎಕೆ-47 ರೈಫಲ್ ಸುತ್ತುಗಳು, ಎರಡು ಗ್ರೆನೇಡ್‌ಗಳು, ಮೂರು ಯುಬಿಜಿಎಲ್‌ಗಳು, ಏಳು ಡಿಟೋನೇಟರ್‌ಗಳು, ಮೂರು ಫ್ಯೂಸ್‌ಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ.

ತಿಂಗಳ ಆರಂಭದಲ್ಲಿ ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ನಿಲ್ಲಿಸಿದ್ದ ಸ್ಥಳದಿಂದ ಸುಮಾರು 50 ಕಿಮೀ ದೂರದಲ್ಲಿರುವ ಮೋಗಾ ಜಿಲ್ಲೆಯಿಂದ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೊಗಾ ಪೊಲೀಸರು 2 ಗ್ರೆನೇಡ್‌ಗಳು, 2 ಪಿಸ್ತೂಲ್‌ಗಳು, 1 ಮ್ಯಾಗಜೀನ್ ಮತ್ತು 18 ಲೈವ್ ಕಾರ್ಟ್ರಿಡ್ಜ್‌ಗಳು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಯಾವುದೋ ಧಾರ್ಮಿಕ ಸ್ಥಳವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದರು ಎಂದು ಶಂಕಿಸಲಾಗಿದೆ. ಪೊಲೀಸರು ಹಲವು ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಭದ್ರತೆಯ ವಿಷಯದಲ್ಲಿ ಪಂಜಾಬ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಸೂಕ್ಷ್ಮ ರಾಜ್ಯವಾಗಿದೆ. ಪಂಜಾಬ್ ಪೊಲೀಸರು ಮೊನ್ನೆಯಷ್ಟೇ ಅಂದರೆ ಸೋಮವಾರ ರಾಜ್ಯದ ಫಜಿಲ್ಕಾ ಜಿಲ್ಲೆಯ ಗಡಿ ಗ್ರಾಮದಿಂದ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಂಡಿದ್ದರು. ಈ ಗ್ರಾಮವು ಭಾರತ-ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಲ್ಲಿದೆ. ಇದೀಗ ದೀನಾನಗರ ವಿಧಾನಸಭಾ ಕ್ಷೇತ್ರದಿಂದ ಸುಮಾರು 2 ಕೆಜಿ ಆರ್‌ಡಿಎಕ್ಸ್ ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದೇ ನಗರದಲ್ಲಿ ಹಿಂದಿನ ದಿನವೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

117 ಸದಸ್ಯ ಬದಲ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20ರಂದು ಚುನಾವಣೆ ನಡೆಯಲಿದೆ, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ಮುಂಬರುವ ಪಂಜಾಬ್ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಸಮೀಕ್ಷೆ ಹೇಳುತ್ತಿದೆ.

ಆದಾಗ್ಯೂ, ಪಂಜಾಬ್ ವಿಧಾನಸಭೆಯ ಹಾಲಿ ಪ್ರತಿಪಕ್ಷ ಎಎಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದು ಸಮೀಕ್ಷೆಯ ಲೆಕ್ಕಾಚಾರವಾಗಿದೆ.

ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಆಡಳಿತಾರೂಢ ಕಾಂಗ್ರೆಸ್77 ಸ್ಥಾನದಿಂದ 35-38ಕ್ಕೆ ಕುಸಿಯಲಿದೆ, ಶಿರೋಮಣಿ ಅಕಾಲಿದಳ ಮೈತ್ರಿಯು 15-32-35 ಸೀಟುಗಳನ್ನು ಗೆಲ್ಲಬಹುದು, ಹಾಲಿ ಪ್ರತಿಪಕ್ಷ ಎಎಪಿಯ ಸ್ಥಾನಗಳು 20ರಿಂದ 36-39ಕ್ಕೆ ಏರಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

English summary
Thwarting a possible terrorist attack ahead of Republic Day, Punjab Police on Friday have seized RDX, a grenade launcher, two compatible grenades, nine electrical detonators and two sets of timer devices for IEDs from Gurdaspur. The police have also arrested one person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X