• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್‌ನಲ್ಲಿ ಕಳ್ಳಭಟ್ಟಿ ಸೇವಿಸಿ 38 ಜನರು ಸಾವು, ತನಿಖೆಗೆ ಆದೇಶ

|

ಚಂಡೀಗಢ, ಜುಲೈ 31: ಪಂಜಾಬ್‌ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ 38 ಜನರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಪ್ರಕರಣವನ್ನು ಪಂಜಾಬ್ ಸಿಎಂ ಕ್ಯಾ.ಅಮರಿಂದರ್ ಸಿಂಗ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಪಂಜಾಬ್‌ನ ಜಲಂಧರ್ ವಿಭಾಗ ವ್ಯಾಪ್ತಿಯ ಅಮೃತ್ ಸರ್, ಗುರುದಾಸ್ ಪುರ್ ಹಾಗೂ ಟಾರನ್ ಟಾರಾನ್ ಜಿಲ್ಲಾ ವ್ಯಾಕ್ತಿಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಒಟ್ಟು 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಆಂಧ್ರಪ್ರದೇಶ; ಸ್ಯಾನಿಟೈಸರ್ ಕುಡಿದು 9 ಜನರು ಸಾವು

ಜುಲೈ 29 ರಂದು ಐದು ಜನ ಮೃತಪಟ್ಟಿದ್ದರು ಹಾಗು ಜುಲೈ 30 ರಂದು 16 ರಂದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಈ ಪ್ರಕರಣ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಖುದ್ದು ಸಿಎಂ ಅಮರಿಂದರ್ ಸಿಂಗ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಜಲಂಧರ್ ವಿಭಾಗ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಿಲ್ಲದೆ ಅನೇಕ ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಜಸ್ವಿಂದರ್ ಸಿಂಗ್, ಕಾಶ್ಮೀರ ಸಿಂಗ್, ಕಿರ್ಪಾಲ್ ಸಿಂಗ್ ಮತ್ತು ಜಸ್ವಂತ್ ಸಿಂಗ್ ಎಂಬ ನಾಲ್ವರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಸಿಎಂ ಅಧಿಕೃತಗೊಳಿಸಿದ್ದಾರೆ.

English summary
21 dead in Punjab after drinking spurious liquor. cm captain amarinder singh orders magisterial probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X