ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಪೊಲೀಸ್ ಮೇಲೆ ದಾಳಿ ನಡೆಸಿದ 2 ನಿಹಾಂಗ್‌ಗಳ ಹತ್ಯೆ

|
Google Oneindia Kannada News

ಚಂಡೀಘರ್, ಮಾರ್ಚ್ 21: ಪಂಜಾಬ್‌ನ ತರ್ಣ್ ತರಣ್ ಜಿಲ್ಲೆಯಲ್ಲಿ ಭಾನುವಾರ ಪೊಲೀಸರು ಮತ್ತು ನಿಹಾಂಗ್ ಸಿಖ್ಖರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ನಿಹಾಂಗ್ ಸಿಖ್ಖರು ಪೊಲೀಸರ ಮೇಲೆ ಕತ್ತಿಗಳಿಂದ ಹಲ್ಲೆ ನಡೆಸಿದ್ದು, ಇಬ್ಬರು ಅಧಿಕಾರಿಗಳ ಕೈಯನ್ನು ಕತ್ತರಿಸಲಾಗಿದೆ.
ಪೊಲೀಸರ ಮೇಲೆ ದಾಳಿ ನಡೆಸಿದ ಇಬ್ಬರು ನಿಹಾಂಗ್‌ಗಳನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತರ್ಣ್ ತರಣ್ ಜಿಲ್ಲೆಯ ಸುರ್ ಸಿಂಗ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮತ್ತೆ ಕೊರೊನಾ ಸೋಂಕು ಹೆಚ್ಚಳ: ಪಂಜಾಬ್‌ನಲ್ಲಿ ಶಿಕ್ಷಣ ಸಂಸ್ಥೆಗಳು ಬಂದ್ಮತ್ತೆ ಕೊರೊನಾ ಸೋಂಕು ಹೆಚ್ಚಳ: ಪಂಜಾಬ್‌ನಲ್ಲಿ ಶಿಕ್ಷಣ ಸಂಸ್ಥೆಗಳು ಬಂದ್

ಮಹಾರಾಷ್ಟ್ರದ ನಾಂದೇಡ್ ನಲ್ಲಿ ವ್ಯಕ್ತಿಯನ್ನು ಹತ್ಯೆಗೈದ ಇಬ್ಬರು ನಿಹಾಂಗ್‌ಗಳು ಈ ಪ್ರದೇಶಕ್ಕೆ ಬಂದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅದನ್ನು ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇಬ್ಬರು ನಿಹಾಂಗ್‌ಗಳನ್ನು ಈ ಪ್ರದೇಶದಲ್ಲಿ ಕೂಡಿ ಹಾಕಲಾಗಿದೆ ಎಂಬ ಮಾಹಿತಿ ತಿಳಿದು ಅವರನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಪೊಲೀಸರು ತಮ್ಮನ್ನು ಸುತ್ತುವರಿದಿದ್ದಾರೆ ಎಂದು ತಿಳಿದ ನಿಹಾಂಗ್‌ಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

2 Nihangs Attacked On Police With Sword In Punjab, After That Both Shot Dead By Police

ಇಬ್ಬರು ಅಧಿಕಾರಿಗಳಿಗೆ ಗಂಭೀರ ಗಾಯ:
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಎಸ್ಎಚ್ಓ ನರೇಂದ್ರ ಸಿಂಗ್ ಮತ್ತು ಎಸ್ಎಚ್ಓ ಬಲ್ವಿಂದರ್ ಸಿಂಗ್ ಎಂಬ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 2020ರ ಏಪ್ರಿಲ್ ತಿಂಗಳಿನಲ್ಲಿ ಇಂಥದ್ದೇ ಒಂದು ಘಟನೆ ವರದಿಯಾಗಿತ್ತು. ಪಟಿಯಾಲಾದ ತರಕಾರಿ ಮಾರುಕಟ್ಟೆಗೆ ನುಗ್ಗಲು ಯತ್ನಿಸಿದ ನಿಹಾಂಗ್ ಒಬ್ಬರನ್ನು ತಡೆಯಲು ಹೋದ ಪೊಲೀಸ್ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು.

English summary
2 Nihangs Attacked On Police With Sword In Punjab, After That Both Shot Dead By Police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X