ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ಹರಿಯಾಣದ ಜಾಜ್ಜರ್‌ನಲ್ಲಿ ಕಡಿಮೆ ತೀವ್ರತೆಯಲ್ಲಿ ಭೂಕಂಪ

|
Google Oneindia Kannada News

ಚಂಡೀಗಢ, ಮೇ 18: ಬುಧವಾರ ಮುಂಜಾನೆ ಹರಿಯಾಣದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.6ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಇಂದು ಬೆಳಗ್ಗೆ 6:08 ಕ್ಕೆ ಭೂಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಜಾಜ್ಜರ್‌ನಿಂದ ನೈಋತ್ಯಕ್ಕೆ 42 ಕಿ.ಮೀ. ದೂರದಲ್ಲಿ ಸಂಭವಿಸಿದೆ.

"ಹರಿಯಾಣದ 42 ಕಿಮೀ ದೂರದ ಜಾಜ್ಜರ್‌ ಪ್ರದೇಶದಲ್ಲಿ ಇಂದು (18-05-2022) ಬೆಳಗ್ಗೆ 6 ಗಂಟೆಗೆ 2.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಇದರ ಅಕ್ಷಾಂಶ: 28.30 & ರೇಖಾಂಶ 76.40 ಹಾಗೂ ಆಳ 15 ಕಿಮೀ ಆಗಿದೆ" ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಈ ವಾರದ ಆರಂಭದಲ್ಲಿ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮೇಘಾಲಯ ಮತ್ತು ಅಸ್ಸಾಂನಲ್ಲಿ ತಲಾ 3.9 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದವು.

2.6 magnitude earthquake in Jhajjar , Haryana

ಭಾನುವಾರ ರಾತ್ರಿ 9.47ಕ್ಕೆ ದಾಖಲಾದ ಮೊದಲ ಭೂಕಂಪದ ಕೇಂದ್ರಬಿಂದುವು ಮೇಘಾಲಯದ ನೊಂಗ್‌ಪೋಹ್ ಪ್ರದೇಶದಲ್ಲಿ 12 ಕಿ.ಮೀ ಆಳದಲ್ಲಿದೆ, ಎರಡನೆಯದು ಅಸ್ಸಾಂನ ನಾಗಾನ್‌ನಲ್ಲಿ 55 ಕಿ.ಮೀ ಆಳದಲ್ಲಿದೆ. ವರದಿಗಳ ಪ್ರಕಾರ, ಸೋಮವಾರ ಮಧ್ಯಾಹ್ನ 3.22 ಕ್ಕೆ ರಾಜ್ಯವನ್ನು ಎರಡನೇ ಭೂಕಂಪದ ನಂತರ ಮಧ್ಯ ಮತ್ತು ಉತ್ತರ ಅಸ್ಸಾಂನ ಕೆಲವು ಭಾಗಗಳಲ್ಲಿ ಕಂಪನಗಳು ಕಂಡುಬಂದಿವೆ.

Recommended Video

Umran Malik ಟೀಮ್ ಇಂಡಿಯಾ ಸೇರಲಿ ಎಂದ ಅಭಿಮಾನಿಗಳು | Oneindia Kannada

ಎರಡೂ ಭೂಕಂಪದಲ್ಲಿ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A magnitude 2.6 earthquake shook Jhajjar in Haryana early Wednesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X