ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಣಮುಖರಾದ 10 ಕೊರೊನಾ ರೋಗಿಗಳಿಗೆ ಮತ್ತೆ ಪಾಸಿಟಿವ್

|
Google Oneindia Kannada News

ಚಂಡೀಗಢ, ಜುಲೈ 15: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಡೇರಾ ಬಾಸ್ಸಿ ಪಟ್ಟಣದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ ಹತ್ತು ಜನ ರೋಗಿಗಳಿಗೆ ಮತ್ತೆ ಪಾಸಿಟಿವ್ ಬಂದಿದೆ. ಇವರೆಲ್ಲರೂ ಡಿಸ್ಚಾರ್ಜ್ ಆಗುವ ಸಮಯದಲ್ಲಿ ನೆಗಿಟಿವ್ ಫಲಿತಾಂಶ ಹೊಂದಿದ್ದರು. ಆದರೆ, ಹತ್ತು ದಿನದ ಬಳಿಕ ಮತ್ತೆ ಪಾಸಿಟಿವ್ ಆಗಿದೆ.

ಈ ಎಲ್ಲ ರೋಗಿಗಳನ್ನು ಕಳೆದ ತಿಂಗಳು ಕೊವಿಡ್ ಪಾಸಿಟಿವ್ ಆಗಿದ್ದರಿಂದ ಬನೂರ್‌ನ ಜಿಯಾನ್ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಪೂರ್ಣವಾಗಿ ಚೇತರಿಸಿಕೊಂಡು ಅಂತಿಮ ಪರೀಕ್ಷೆಯಲ್ಲಿ ನೆಗಿಟಿವ್ ಬಂದ ಕಾರಣವೇ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ, ಮತ್ತೆ ಅವರಲ್ಲಿ ಸೋಂಕು ಪತ್ತೆಯಾಗಿರುವುದು ಸಹಜವಾಗಿ ಆತಂಕ ಹಾಗೂ ಅನುಮಾನ ಮೂಡಿಸಿದೆ.

ದೇಶದಲ್ಲಿ 29,429 ಹೊಸ ಕೇಸ್ ಪತ್ತೆ, ಟಾಪ್ 5 ರಾಜ್ಯಗಳು ಯಾವುದು?ದೇಶದಲ್ಲಿ 29,429 ಹೊಸ ಕೇಸ್ ಪತ್ತೆ, ಟಾಪ್ 5 ರಾಜ್ಯಗಳು ಯಾವುದು?

ಈ ಬಗ್ಗೆ ಮೊಹಾಲಿ ಮೂಲದ ಸಿವಿಲ್ ಸರ್ಜನ್ ಡಾ.ಮಂಜಿತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, 'ರೋಗಿಗಳು ಒಮ್ಮೆ ಚೇತರಿಸಿಕೊಂಡ ನಂತರ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮತ್ತೆ ಪರೀಕ್ಷೆಗೆ ಒಳಪಡಿಸಲಾಗುವುದಿಲ್ಲ. ಈ ರೋಗಿಗಳಿಗೆ ಏಳು ದಿನಗಳ ಕಟ್ಟುನಿಟ್ಟಾದ ಮನೆ ಪ್ರತ್ಯೇಕತೆಗೆ ಸಲಹೆ ನೀಡಲಾಗಿದೆ' ಎಂದು ಸ್ಪಷ್ಟಪಡಿಸಿದರು.

10 Covid19 patients positive after his recovery in pujnab

'ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ, ಚೇತರಿಕೆ ಕಂಡ ರೋಗಿ ಮನೆಗೆ ಹೋದ್ಮೇಲೆ ಒಂದು ವಾರಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಮತ್ತೆ ಪಾಸಿಟಿವ್ ಕಂಡುಬಂದರೂ ಚಿಂತಿಸುವ ಅಗತ್ಯವಿಲ್ಲ' ಎಂದು ಸರ್ಜನ್ ಹೇಳಿದ್ದಾರೆ.

ಒಮ್ಮೆ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಮತ್ತೆ ಪಾಸಿಟಿವ್ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೇರಳ, ಅರುಣಾಚಲ ಪ್ರದೇಶದಲ್ಲೂ ಇಂತಹ ಘಟನೆಗಳು ನಡೆದಿದೆ.

English summary
10 Recovered covid19 patients from punjab tested positive again. they tested positive 10 days after they were discharged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X