ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಳಂದೂರು; ಹಲ್ಲಿಯ ಹೊಸ ಪ್ರಬೇಧ ಪತ್ತೆ, ಹಲ್ಲಿಗೆ ಉಮಾಶಂಕರ್‌ ಹೆಸರು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್, 15: ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಹಲ್ಲಿ ಪ್ರಬೇಧವನ್ನು ಪತ್ತೆ ಹಚ್ಚಲಾಗಿದೆ.

ಅಶೋಕ ಟ್ರಸ್ಟ್ ಫಾರ್ ರಿಸರ್ಚ್‌ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್ (ಏಟ್ರೀ ) ಸಂಶೋಧಕ ಡಾ.ಅರವಿಂದ್ ಎನ್.ಎ. ಹಾಗೂ ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣ್‌ ಅವರು ಹಲ್ಲಿಯ ಹೊಸ ಪ್ರಬೇಧವನ್ನು ಪತ್ತೆ ಮಾಡಿದ್ದು, ಅಧ್ಯಯನ ನಡೆಸಿದ್ದಾರೆ. ಅದನ್ನು 'ಕುಬ್ಜ ಹಲ್ಲಿ' ಎಂದು ಗುರುತಿಸಿದ್ದಾರೆ. ಹಲ್ಲಿಯು 2.57 ಸೆಂ.ಮೀಟರ್‌ನಷ್ಟು ಉದ್ದವಿದೆ. ಗಂಡು ಹಲ್ಲಿಯ ದೇಹ ಕಂದು ಬಣ್ಣ ಹಾಗೂ ಬಾಲ ಕಪ್ಪಾಗಿದೆ. ಹೆಣ್ಣು ಹಲ್ಲಿಯ ಪೂರ್ತಿ ದೇಹ ಕಂದು ಬಣ್ಣದಿಂದ ಕೂಡಿದೆ. 2021ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಳಿಗಿರಿ ರಂಗನಬೆಟ್ಟ, ಕೆ.ಗುಡಿ ವ್ಯಾಪ್ತಿಯಲ್ಲಿ ಹಲ್ಲಿಯ ಬಗ್ಗೆ ಇವರಿಬ್ಬರೂ ಮಾಹಿತಿಯನ್ನು ಕಲೆಹಾಕಿದ್ದರು.

43 ಜೀವಂತ ಹಲ್ಲಿ, 9 ಹಾವುಗಳನ್ನು ಪ್ಯಾಂಟ್‌ನಲ್ಲಿ ಅಡಗಿಸಿಟ್ಟ ಭೂಪ43 ಜೀವಂತ ಹಲ್ಲಿ, 9 ಹಾವುಗಳನ್ನು ಪ್ಯಾಂಟ್‌ನಲ್ಲಿ ಅಡಗಿಸಿಟ್ಟ ಭೂಪ

ಹೊಸ ಹಲ್ಲಿಯ ಪ್ರಬೇಧದ ದೇಹ ರಚನೆ

ಹಲ್ಲಿಯ ದೇಹ ರಚನೆ ಹಾಗೂ ಡಿಎನ್ಎ ಪರೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ, ಇದು ಹಲ್ಲಿಯ ಪ್ರತ್ಯೇಕ ಪ್ರಭೇದ ಎಂಬುದನ್ನು ನಿರೂಪಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಂಶೋಧಕ ಡಾ.ಅರವಿಂದ್, ಬಿಳಿಗಿರಿರಂಗನಬೆಟ್ಟದ ಕಾಫಿ ತೋಟಗಳಲ್ಲಿ ಕಂಡು ಬರುವ ಹಕ್ಕಿಗಳು, ಸರಿಸೃಪಗಳ ಬಗ್ಗೆ ಮಾಹಿತಿ ಕಲೆ ಹಾಕುವುದಕ್ಕಾಗಿ ಇಲ್ಲಿಗೆ ಬಂದಿದ್ದೆವು. ಇಲ್ಲಿನ ಏಟ್ರೀ ಕಚೇರಿಯಲ್ಲಿ ರಾತ್ರಿ ಚರ್ಚೆ ಮಾಡುತ್ತಿರುವಾಗ, ಹಲ್ಲಿ ಕಂಡು ಬಂದಿದೆ. ಒದು ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದರಿಂದ ಗಮನ ಸೆಳೆಯಿತು. ಇಲ್ಲಿಯೂ ಇಂತಹ ಹಲ್ಲಿಯನ್ನು ನೋಡಿರಲಿಲ್ಲ. ಹಾಗಾಗಿ ಇದು ಹೊಸ ಪ್ರಭೇದವಿರಬಹುದು ಎಂಬ ಅನುಮಾನ ಬಂದಿತ್ತು. ತಕ್ಷಣವೇ ಅರಣ್ಯದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಬೇಕು ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದೆವು. ಇಲಾಖೆಯ ಸಹಕಾರದಿಂದ ಅಧ್ಯಯನ ಮಾಡಲು ಸಾಧ್ಯ ಆಯಿತು ಎಂದಿದ್ದಾರೆ.

Yalanduru; new species of lizard discovered, lizard was named Umashankar

ಇದುವರೆಗೂ ಗುರುತಿಸಲಾದ ಹಲ್ಲಿ ಪ್ರಬೇಧಗಳು

ಇದುವರೆಗೆ 70ರಿಂದ 80ರಷ್ಟು ಹಲ್ಲಿ ಪ್ರಬೇಧಗಳನ್ನು ಗುರುತಿಸಲಾಗಿದೆ. ಪತ್ತೆ ಆಗಿರುವ ಹಲ್ಲಿಯ ದೇಹರಚನೆ ಹಾಗೂ ಡಿಎನ್ಎ ಪರೀಕ್ಷೆಯ ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ್ದೇವೆ. ಈವರೆಗೆ ಪತ್ತೆ ಆಗಿರುವ ಹಲ್ಲಿಯ ಪ್ರಭೇದಗಳಿಗಿಂತ ಭಿನ್ನವಾಗಿರುವುದು ದೃಢಪಟ್ಟಿದೆ ಎಂದರು. ರಾತ್ರಿ ಸಮಯದಲ್ಲಿ ಕಾಣುವ ಈ ಹಲ್ಲಿಗಳು ಕಲ್ಲು, ಬಂಡೆಗಳ ಸಂದಿಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮೂರ್ನಾಲ್ಕು ಹೆಣ್ಣು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡುತ್ತವೆ. ಹೊಸ ಹಲ್ಲಿ ಪ್ರಬೇಧಕ್ಕೆ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಏಟ್ರೀ ಸಂಸ್ಥಾಪಕರಲ್ಲಿ ಒಬ್ಬರಾದ ಡಾ.ಉಮಾಶಂಕರ್ ಅವರ ಹೆಸರನ್ನು ಸೇರಿಸಲಾಗಿದೆ. ಉಮಾಶಂಕರ್ ಕುಬ್ಜ ಹಲ್ಲಿ ಎಂದು ಹೆಸರಿಡಲಾಗಿದೆ.

Yalanduru; new species of lizard discovered, lizard was named Umashankar

ಡಾ.ಉಮಾಶಂಕರ್ ಅವರು ಸಸ್ಯ ಹಾಗೂ ಜೀವ ಸಂಕುಲಗಳ ಉಗಮದ ಬಗ್ಗೆ ಸಾಕಷ್ಟು ಅಧ್ಯಯನವನ್ನು ನಡೆಸಿದ್ದಾರೆ. ಪರಿಸರ ಹಾಗೂ ಜೀವ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಗೌರವ ಸಲ್ಲಿಸುವ ಉದ್ದೇಶದಿಂದ ಅವರ ಹೆಸರನ್ನೇ ಈ ಹಲ್ಲಿ ಪ್ರಬೇಧಕ್ಕೆ ಇಡಲಾಗಿದೆ ಎಂದು ಡಾ.ಅರವಿಂದ್‌ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಅನುಮತಿ ಪಡೆದು ಉಮಾಶಂಕರ್ ಮತ್ತು ಸೂರ್ಯನಾರಾಯಣನ್ ಸಂಶೋಧನೆ ಕೈಗೊಂಡು ದೇಹರಚನೆ ಸೇರಿದಂತೆ ಎಲ್ಲಾ ಪರೀಕ್ಷೆ ನಡೆಸಿದ್ದಾರೆ. ಹೊಸ ಹಲ್ಲಿ ಪ್ರಬೇಧ ಎಂಬುದನ್ನು ಸಾಬೀತುಪಡಿಸಿದ್ದಾರೆ.

English summary
new species of lizard discovered in Biligiriranganathaswamy tiger reserve in Yalandur taluk, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X