ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಆನೆ ದಿನ: ದೈತ್ಯ, ಸಂವೇದನಾಶೀಲ ಪ್ರಾಣಿ ಬಗ್ಗೆ ತಿಳಿಯಿರಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಇಂದು ವಿಶ್ವ ಆನೆ ದಿನ. ಭೂಮಿ ಮೇಲಿನ ದೊಡ್ಡ ಪ್ರಾಣಿ, ಸೂಕ್ಷ ಸಂವೇದನಾಶೀಲ, ಅಗಾಧ ನೆನಪಿನ ಶಕ್ತಿ ಇರುವ ಆನೆ ಮಾನವರಂತೆ ಸಂಘಜೀವಿ, ಮಾತೃ ಪ್ರಧಾನ ವ್ಯವಸ್ಥೆ ಹೊಂದಿದ ಗೆಳೆತನ ಬಿಂಬಿಸುವ ಭೂಮಿ ಮೇಲಿನ ದೊಡ್ಡ ಸಸ್ತನಿ. ಆನೆಗಳ ಸಂತತಿ ಕರ್ನಾಟಕದಲ್ಲೂ ಹೆಚ್ಚಿನ‌ದಾಗಿದ್ದು, ಚಾಮರಾಜನಗರ ಕಾಡುಗಳಲ್ಲಿ ಏನಿಲ್ಲವೆಂದರೂ ಎರಡು ಸಾವಿರಕ್ಕೂ ಅಧಿಕ ಗಜಗಳಿವೆ ಎಂಬ ಅಂದಾಜಿದೆ.

ಆನೆಗಳ‌‌ ಹಿಂಡು ಹಾಗೂ ಆನೆಗಳು ಹಾಕುವ ಲದ್ದಿ ಆಧಾರದ ಮೇಲೆ, ಕೆರೆಗಳ ಸಮೀಪ ನೀರು ಕುಡಿಯುವಾಗ ಕಾಣುವ ಆನೆಗಳ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ‌‌. ಪ್ರತಿ 4 ವರ್ಷಗಳಿಗೊಮ್ಮೆ ಆನೆಗಳ ಗಣತಿ ಕಾರ್ಯ ನಡೆಯುತ್ತದೆ.‌

ಮೈಸೂರು ದಸರಾ ಸಂಭ್ರಮ: ತೂಕ ಪರೀಕ್ಷೆಯಲ್ಲಿ ಯಾವ ಆನೆ ಬಲಶಾಲಿ?ಮೈಸೂರು ದಸರಾ ಸಂಭ್ರಮ: ತೂಕ ಪರೀಕ್ಷೆಯಲ್ಲಿ ಯಾವ ಆನೆ ಬಲಶಾಲಿ?

ಆನೆಗಳು ದೈತ್ಯ ಜೀವಿಗಳಾಗಿದ್ದು ಕೇವಲ 4 ತಾಸು ಮಾತ್ರ ಮಲಗಲಿದ್ದು ಇನ್ನು ಉಳಿದ 20 ತಾಸು ತಿನ್ನುವುದರಲ್ಲಿ, ಆಹಾರ ಹುಡುಕುವುದರಲ್ಲಿ ಮಗ್ನವಾಗಿರುತ್ತದೆ.‌ ಆನೆ ಒಂದು ಅರಣ್ಯ ಪ್ರದೇಶದಲ್ಲಿ ಇದೆ ಎಂದರೇ ಅದಕ್ಕೆ ಬೇಕಾದ ಸಮೃದ್ಧ ಆಹಾರ, ಸಾಕಾಗುವಷ್ಟು ನೀರು ಸಿಗುವುದರ ಮಟ್ಟಿಗೆ ಚೆನ್ನಾಗಿದೆ ಎಂದು ಅರ್ಥ. ಇದರೊಟ್ಟಿಗೆ, ಬೀಜ ಪ್ರಸಾರದ ಕಾರ್ಯದಲ್ಲೂ ಪರಿಸರಕ್ಕೆ ಆನೆ ಬಹುಮುಖ್ಯ ಪ್ರಾಣಿಯಾಗಿದೆ.‌

 ಎರಡು ವರ್ಷ ಗರ್ಭ ಧರಿಸುವ ಆನೆ

ಎರಡು ವರ್ಷ ಗರ್ಭ ಧರಿಸುವ ಆನೆ

ಇತರೆ ಸಸ್ತನಿಗಳಿಗೆ ಹೋಲಿಸಿದರೆ ಆನೆಗಳಲ್ಲಿ ಗರ್ಭಾವಸ್ಥೆಯು ದೀರ್ಘವಾಗಿರುತ್ತದೆ. ಆನೆಗಳು 22 ತಿಂಗಳು ಅಥವಾ ಎರಡು ವರ್ಷಗಳ ಕಾಲ ಗರ್ಭ ಧರಿಸಲಿದ್ದು ಎರಡು ವರ್ಷ ಹಾಲು ಕುಡಿಸಲಿದೆ.‌ ಒಮ್ಮೆಗೆ ಒಂದು ಮರಿ ಹಾಕಲಿದ್ದು, ಅವಳಿ ಮರಕ್ಕೆ ಜನ್ಮ ಕೊಡುವುದು ತೀರಾ ಅಪರೂಪ. ಇತ್ತೀಚೆಗೆ ಬಂಡೀಪುರ ಅವಳಿ ಮರಿಗೆ ಜನ್ಮ ನೀಡಿದ್ದ ಘಟನೆಗೆ ಸಾಕ್ಷಿಯಾಗಿದೆ. ಹುಟ್ಟಿದ ಮರಿ ಆನೆಯ ತೂಕ 120 ಕೆಜಿ ಮತ್ತು ಭುಜದ ಎತ್ತರ 1 ಮೀಟರ್ ಇರುತ್ತದೆ. ಆನೆ ಹೆರಿಗೆಯಾದ ಹದಿನೈದರಿಂದ ಮೂವತ್ತು ನಿಮಿಷಗಳ ನಂತರ, ಮರಿ ಆನೆ ತನ್ನ ಪಾದಗಳ ಮೇಲೆ ಎದ್ದು ತನ್ನ ತಾಯಿಯನ್ನು ಹಿಂಬಾಲಿಸುತ್ತದೆ. ಮುಂದಿನ 4-5 ವರ್ಷಗಳ ಕಾಲ ಮರಿ ತನ್ನ ತಾಯಿಯೊಂದಿಗೆ ಇರುತ್ತದೆ.

 ಎರಡು ಪ್ರಭೇದ

ಎರಡು ಪ್ರಭೇದ

ಆನೆಗಳಲ್ಲಿ ಆಫ್ರಿಕಾದ ಆನೆಗಳು ಮತ್ತೊಂದು ಏಷ್ಯಾದ ಆನೆಗಳು ಎಂದು ಎರಡು ಪ್ರಭೇದಗಳಿವೆ. ಆಫ್ರಿಕಾದ ಆನೆಗಳ ಜೀವಿತಾವಧಿ 60-70 ವರ್ಷ, ಏಷ್ಯಾ ಆನೆಗಳ ಜೀವಿತಾವಧಿ 45-55 ವರ್ಷಗಳಿರುತ್ತದೆ. ಆಫ್ರಿಕಾದ ಆನೆಗಳು ಸುಮಾರು 9 ಸಾವಿರ ಕೆಜಿ ತನಕವೂ ದೇಹದ ತೂಕ ಹೊಂದಿರಲಿದ್ದು, ಏಷ್ಯಾದ ಆನೆಗಳ ಸರಾಸರಿ ತೂಕ 5500 ಕೆಜಿ ಇರುತ್ತವೆ.

 ವಿಶೇಷ ನೆನಪಿನ ಶಕ್ತಿ

ವಿಶೇಷ ನೆನಪಿನ ಶಕ್ತಿ

ಆನೆಯ ವಿಶಿಷ್ಟವಾದ ಅಂಗ ಅದರ ಸೊಂಡಿಲು‌. ಇದು 120-140 ಕೆಜಿ ತೂಗಲಿದ್ದು, 250 ಕೆಜಿವರೆಗೂ ಭಾರ ಎತ್ತುವ ಶಕ್ತಿ ಈ ಸೊಂಡಿಲಿಗಿದೆ. ಅದೇ ರೀತಿ ಒಂದೇ ಒಂದು ಹುಲ್ಲಿನ ಎಸಳನ್ನು ತೆಗೆದುಕೊಳ್ಳಬಲ್ಲುದು. ಆನೆ ಹೊಂದಿರುವ ದೊಡ್ಡ ದೊಡ್ಡ ಕಿವಿಗಳ ಮೂಲಕ ತನ್ನ ದೇಹದ ಉಷ್ಣತೆ ಹೆಚ್ಚಾಗದಂತೆ ಕಾಪಾಡಿಕೊಳ್ಳುತ್ತದೆ ಎಂಬುದು ಅಚ್ಚರಿಯಾದರೂ ಸತ್ಯ. ಆನೆ ಗಂಟೆಗೆ 40 ಕಿ.ಮೀ. ವೇಗದಲ್ಲಿ ಓಡಬಲ್ಲದು. ಮತ್ತೊಂದು ಆನೆಯ ಘೀಳಿನ ಶಬ್ದವನ್ನು ಇನ್ನೊಂದು ಆನೆ 10 ಕಿ.ಮೀ. ದೂರದಲ್ಲಿದ್ದರೂ ಗ್ರಹಿಸಬಲ್ಲದು.

ಆನೆಗೆ ಆಗಾಧವಾದ ನೆನಪಿನ ಶಕ್ತಿಯಿದ್ದು, ತಾಯಿಯಾನೆ ಮರಿಗೆ ವರ್ಗಾಯಿಸುತ್ತದೆ‌. ಯಾವ ಕಾಲದಲ್ಲಿ ಎಲ್ಲಿ ನೀರು ಸಿಗಲಿದೆ, ಆಹಾರ ಎಲ್ಲಿ ಸಿಗಲಿದೆ ಎಂಬುದು ಇಂದಿನ ಜಿಪಿಎಸ್​​ಗಿಂತಲೂ ಪರಿಣಾಮಕಾರಿಯಾಗಿದೆ.

 ಪ್ರೌಢಾವಸ್ಥೆಗೆ ಬಂದ ಕೂಡಲೇ ಗಂಡಾನೆ ಗುಂಪಿನಿಂದ ಹೊರಕ್ಕೆ

ಪ್ರೌಢಾವಸ್ಥೆಗೆ ಬಂದ ಕೂಡಲೇ ಗಂಡಾನೆ ಗುಂಪಿನಿಂದ ಹೊರಕ್ಕೆ

ಆನೆ ಹಿಂಡಿನ ನೇತೃತ್ವ ವಹಿಸುವುದು ತಂಡದ ವಯಸ್ಸಾದ ಹೆಣ್ಣಾನೆಯಾಗಿರಲಿದೆ. ಆನೆಯ ಗರ್ಭಾವಧಿ 20-24 ತಿಂಗಳಾಗಿದ್ದು, ಎರಡು ವರ್ಷ ಹಾಲು ಕುಡಿಸುತ್ತವೆ. ಮರಿ 5 ವರ್ಷ ಆಗುವ ತನಕವೂ ಪಾಲನೆ ಮಾಡುತ್ತವೆ. ಗಂಡಾನೆ ಪ್ರೌಢಾವಸ್ಥೆಗೆ ಬಂದ ಕೂಡಲೇ ಗುಂಪಿನಿಂದ ಹೊರ ಹಾಕುವ ಪದ್ಧತಿ ಆನೆ ಗುಂಪಿನಲ್ಲಿದೆ. ಗಂಡಾನೆ ಬೇರೆ ಆನೆಗಳೊಂದಿಗೆ ಸಂಪರ್ಕಕ್ಕೆ ಬಂದು ವಂಶ ಬೆಳೆಸಲ್ಲೆನ್ನುವ ಉದ್ದೇಶ ಇದರದ್ದು. ಒಂದು ವೇಳೆ ತನ್ನ ಸಂಬಂಧಿ ಆನೆಗಳು ಎದುರಾದರೆ ಉಭಯ ಕುಶಲೋಪರಿ ವಿಚಾರಿಸುವ ವಿಚಾರದಲ್ಲಿ ಮಾನವನನ್ನು ಹೋಲುತ್ತವೆ.

ಆನೆಗಳ ಬಗ್ಗೆ ಮತ್ತಷ್ಟು ಆಸಕ್ತಕರ ವಿಷಯಗಳು

ಆನೆಗಳ ಬಗ್ಗೆ ಮತ್ತಷ್ಟು ಆಸಕ್ತಕರ ವಿಷಯಗಳು

ಆನೆ ದಿನಕ್ಕೆ 3-4 ತಾಸಷ್ಟೇ ನಿದ್ರಿಸಲಿದ್ದು, ಉಳಿದ ವೇಳೆ ತಿನ್ನುತ್ತಾ ಇಲ್ಲಾ ಆಹಾರ ಹುಡುಕುತ್ತಾ ಇರುತ್ತದೆ‌. ನಿಂತು ಮತ್ತು ಮಲಗಿ ಆನೆ ನಿದ್ರಿಸುವುದು‌ ಮತ್ತೊಂದು ವೈಶಿಷ್ಟ್ಯ.

ಆನೆ ದಿನಕ್ಕೆ ಏನಿಲ್ಲವೆಂದರೂ 270-300 ಕೆಜಿ ಮೇವು ತಿನ್ನುತ್ತವೆ. 75-150 ಲೀಟರ್​​ ನೀರು ಕುಡಿಯುತ್ತದೆ.

ಮರಿ ಆನೆಗಳು ಪ್ರತಿದಿನ ಎರಡು ವರ್ಷದ ತನಕ 10-12 ಲೀಟರ್​​ ತಾಯಿ ಎದೆಹಾಲನ್ನು ಕುಡಿಯುತ್ತವೆ‌.

ಆನೆ ಬಗೆಗಿನ ಅಧ್ಯಯನ ನಡೆಸಿರುವ ಜಾಯ್ಸ್ ಪೂಲೆ ಪ್ರಕಾರ ಆನೆಯು 70 ರೀತಿಯ ಶಬ್ದ ಮಾಡಲಿದ್ದು, 160 ರೀತಿಯ ಚಿಹ್ನೆಗಳ ಮೂಲಕ ಸಂವಹನ ನಡೆಸುತ್ತವೆ.

ತಮ್ಮ ಗುಂಪಿನಲ್ಲಿ ಯಾವುದಾದರೂ ಒಂದು ಆನೆ ಸತ್ತರೆ ಸೊಂಡಿಲ ಮೂಲಕ ಅವುಗಳನ್ನು ಸ್ಪರ್ಶಿಸಿ ಶ್ರದ್ಧಾಂಜಲಿ ಕೋರುವುದು ಆನೆಯ ಒಂದು ವಿಶಿಷ್ಟ ವರ್ತನೆ.

ಗಣತಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಾಡಲಿದ್ದು, ಆನೆಯ ಲದ್ದಿ, ಆನೆಯ ಗುಂಪುಗಳ ಆಧಾರದ ಮೇಲೆ ಆನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ.

ಆನೆ ಬಗೆಗೆ ಪುರಾಣಗಳಲ್ಲೂ ಉಲ್ಲೇಖ. ಗಜಮುಖನಾಗಿರುವ ಗಣಪತಿ ಹಿಂದೂ ಧರ್ಮದ ಆರಾಧ್ಯ ದೈವ.

ಯುದ್ಧಗಳಿಗೆ ಬಳಕೆ, ಭಾರದ ವಸ್ತುಗಳ ರವಾನೆಗೂ ಆನೆಯ ಸಹಾಯ, ದೇಗುಲ, ವಿಶ್ವವಿಖ್ಯಾತ ದಸರಾದಲ್ಲಿ ಆನೆ ಅವಶ್ಯ.

ಮಾನವ ಮತ್ತು ಆನೆ ಸಂಘರ್ಷ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆಗಾಗ್ಗೆ ಅಕ್ರಮ ವಿದ್ಯುತ್ ಸಂಪರ್ಕದಿಂದ ದೈತ್ಯ ಜೀವಿಗಳು ಬಲಿಯಾಗುತ್ತಿದೆ.

ಕಬ್ಬು ಆನೆಗೆ ಇಷ್ಟದ ತಿನಿಸಾಗಿದ್ದು ಚಾಮರಾಜನಗರ ಗಡಿಭಾಗದಲ್ಲಿ ನಿತ್ಯ ಕಬ್ಬಿನ ಲಾರಿ ತಡೆದು ಕಬ್ಬು ಕೀಳುವುದು ಹೆಚ್ಚಾಗಿದೆ. ಅವು ಕೂಡ, ವಾಹನಗಳ ಭರಾಟೆಗೆ ಒಗ್ಗಿಕೊಳ್ಳುತ್ತಿದೆ.

English summary
August 12, World elephant day, inaugural world elephant day was launched on August 12, 2012 to bring attention to the dire plight of Asian and African elephants. Here some interesting Facts on Largest animal in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X