ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ದಾಖಲೆ ತಿದ್ದಿ ಅಪ್ರಾಪ್ತೆಗೆ ಮದುವೆ

|
Google Oneindia Kannada News

ಚಾಮರಾಜನಗರ, ಜೂನ್ 28: ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ತಿದ್ದಿ, ಅಪ್ರಾಪ್ತೆಗೆ ಮದುವೆ ಮಾಡಿದ್ದು, ಆ ಬಾಲಕಿಯನ್ನು ಪೊಲೀಸರು ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ರಕ್ಷಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಪೋಷಕರು, ಬಾಲಕಿಯ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ತಿದ್ದಿ, 18 ವರ್ಷ ವಯಸ್ಸಾಗಿದೆ ಎಂದು ತೋರಿಸಿ ಮದುವೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಬಾಲಕಿ ವಿವಾಹ ಚಾಮರಾಜನಗರ ಜಿಲ್ಲೆಯಲ್ಲಿ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಬಾಲಕಿ ವಿವಾಹ

ಚಾಮರಾಜನಗರದ 16 ವರ್ಷ ಮೂರು ತಿಂಗಳ ಬಾಲಕಿಯೊಬ್ಬಳಿಗೆ ಮಹೇಶ್‌ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ನಗರದ ಕಲ್ಯಾಣ ಮಂಟಪದಲ್ಲಿ ಗುರುವಾರ ಮದುವೆ ಸಮಾರಂಭ ನಡೆದಿತ್ತು. ಬೆಳಿಗ್ಗೆ 10.30ರ ಸುಮಾರಿಗೆ ಮಕ್ಕಳ ಸಹಾಯವಾಣಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ, ಮದುವೆ ನಡೆಯುತ್ತಿರುವ ಬಗ್ಗೆ ಮಾಹಿತಿ‌ ನೀಡಿದ್ದರು. ತಕ್ಷಣ ಸಹಾಯವಾಣಿ ಸಿಬ್ಬಂದಿ ಪೊಲೀಸರು ಹಾಗೂ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯ ನೆರವಿನೊಂದಿಗೆ ಕಲ್ಯಾಣ ಮಂಟಪಕ್ಕೆ ತೆರಳಿದರು. ಆ ವೇಳೆಗಾಗಲೇ ಮಹೇಶ್‌ ಬಾಲಕಿಗೆ ತಾಳಿ ಕಟ್ಟಿಯಾಗಿತ್ತು. ಆರತಕ್ಷತೆಗೆ ಸಿದ್ಧತೆ ನಡೆಯುತ್ತಿತ್ತು. ಸಮಾರಂಭಕ್ಕೆ ಬಂದಿದ್ದವರು ಊಟವನ್ನೂ ಮುಗಿಸಿದ್ದರು.

women and child empowerment officers rescued girl from child marriage

ಬಾಲಕಿಯ ರಕ್ಷಣೆಗೆ ಹೋದ ಅಧಿಕಾರಿಗಳೊಂದಿಗೆ ವರ ಹಾಗೂ ಬಾಲಕಿ ಕಡೆಯವರು ವಾಗ್ವಾದ ನಡೆಸಿದರು. ಸ್ಥಳಕ್ಕೆ ತೆರಳಿದ್ದ ಮಾಧ್ಯಮದವರ ಮೇಲೂ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆಗೂ ಯತ್ನಿಸಿದರು.

ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ನಾವೆಷ್ಟು ಸಮರ್ಥರು! ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ನಾವೆಷ್ಟು ಸಮರ್ಥರು!

ಸ್ಥಳಕ್ಕೆ ಬಂದ ಡಿವೈಎಸ್ ‌ಪಿ ಸಿ.ಟಿ.ಜಯಕುಮಾರ್, ರಾಮಸಮುದ್ರ ಸಬ್ಇನ್ ‌ಸ್ಪೆಕ್ಟರ್ ಪುಟ್ಟಸ್ವಾಮಿ ಹಾಗೂ ಇತರ ಪೊಲೀಸ್‌ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲ ಮಂದಿರಕ್ಕೆ ಕರೆದೊಯ್ದಿದ್ದು, ಆಕೆ ಅಲ್ಲಿಯೇ ಆಶ್ರಯ ಪಡೆದಿದ್ದಾಳೆ.

English summary
Chamarajanagar women and child empowerment officers rescued girl from child marriage. A girls parents changed her date of birth in SSLC marks card and forced her to marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X