ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದ ಕಾಡಾನೆಗೆ ಸಫಾರಿ ವಾಹನವೇ ಟಾರ್ಗೆಟ್, ಯಾಕಿರಬಹುದು?

|
Google Oneindia Kannada News

ಚಾಮರಾಜನಗರ, ಅಕ್ಟೋಬರ್.03: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರ ವಾಹನಗಳತ್ತ ಕಾಡಾನೆಗಳು ದಾಳಿ ನಡೆಸಲು ಯತ್ನಿಸುತ್ತಿರುವ ಘಟನೆ ಮೇಲಿಂದ ಮೇಲೆ ನಡೆಯುತ್ತಿದ್ದು, ಪ್ರವಾಸಿಗರಲ್ಲಿ ಭಯವನ್ನುಂಟು ಮಾಡಿದೆ.

ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಕಾಡಾನೆಯೊಂದು ಸಫಾರಿಗೆ ತೆರಳಿದ ಪ್ರವಾಸಿಗರ ವಾಹನದ ಮೇಲೆ ದಾಳಿ ಮಾಡುವ ಸಲುವಾಗಿ ಬರುತ್ತಿದ್ದು, ಅನುಭವಿ ಮತ್ತು ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ನಡೆದಿಲ್ಲ.

ಬಂಡೀಪುರದಲ್ಲಿ ಸಫಾರಿ ವಾಹನದ ಮೇಲೆ ಕಾಡಾನೆ ದಾಳಿಬಂಡೀಪುರದಲ್ಲಿ ಸಫಾರಿ ವಾಹನದ ಮೇಲೆ ಕಾಡಾನೆ ದಾಳಿ

ಆದರೆ ಮುಂದೆ ಇದೇ ರೀತಿಯ ಘಟನೆ ನಡೆದು ಪ್ರಾಣಕ್ಕೆ ಹಾನಿಯಾದರೆ ಹೊಣೆಯಾರು? ಎಂಬ ಭಯವೂ ಇದೀಗ ಸಫಾರಿಗೆ ತೆರಳುವ ಪ್ರವಾಸಿಗರನ್ನು ಕಾಡತೊಡಗಿದೆ. ಅಷ್ಟೇ ಅಲ್ಲ ಆ ಕಾಡಾನೆ ಏಕೆ ಸಫಾರಿ ವಾಹನವನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಕಳೆದ ಸೆಪ್ಟೆಂಬರ್ 9 ರಂದು ಸಂಜೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರು ಕಾಡಾನೆಯ ಹಿಂಡನ್ನು ಕಂಡು ಹಿರಿ ಹಿರಿ ಹಿಗ್ಗಿ ಮೊಬೈಲ್‌ನಲ್ಲಿ ವೀಡಿಯೋ, ಫೋಟೋ ತೆಗೆದುಕೊಳ್ಳುವ ಆತುರದಲ್ಲಿದ್ದರು.

ಈ ವೇಳೆ ಕಾಡಾನೆಯೊಂದು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದಿತು. ಈ ವೇಳೆ ಚಾಲಕ ವಾಹನವನ್ನು ವೇಗವಾಗಿ ಚಾಲಿಸಿದ್ದರಿಂದ ಕಾಡಾನೆ ದಾಳಿಯಿಂದ ಆಗಬಹುದಾದ ಅನಾಹುತದಿಂದ ಪಾರಾಗಿದ್ದರು.

ಚಾಮರಾಜನಗರ ಗಡಿ ಭಾಗದಲ್ಲಿ ಆತಂಕ ಸೃಷ್ಟಿಸಿದ ಹುಲಿಚಾಮರಾಜನಗರ ಗಡಿ ಭಾಗದಲ್ಲಿ ಆತಂಕ ಸೃಷ್ಟಿಸಿದ ಹುಲಿ

ಈ ಘಟನೆಯ ಬಳಿಕವಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣದಿಂದಾಗಿ ಇದೀಗ ಮತ್ತೊಮ್ಮೆ ಇಂತಹದ್ದೇ ಘಟನೆ ಮರುಕಳಿಸಿದೆ. ಮುಂದೆ ಓದಿ...

 ತಪ್ಪಿಸಿಕೊಂಡು ಬಂದ ಪ್ರವಾಸಿಗರು

ತಪ್ಪಿಸಿಕೊಂಡು ಬಂದ ಪ್ರವಾಸಿಗರು

ಸೆ.30ರ ಭಾನುವಾರ ಮತ್ತೆ ಕಾಡಾನೆ ಸಫಾರಿಗೆ ತೆರಳಿಗೆ ವಾಹನಕ್ಕೆ ಅಡ್ಡಬಂದಿದೆ. ವಾಹನದಲ್ಲಿ ಕುಳಿತು ಕಿರುಚುತ್ತಾ ಚಿತ್ರ ಸೆರೆಹಿಡಿಯುತ್ತಿದ್ದವರಿಗೆ ಕಾಡಾನೆ ಒಮ್ಮೆಗೆ ಶಾಕ್ ನೀಡಿದೆ. ಈ ವೇಳೆಯೂ ಚಾಲಕ ಸಮಯಪ್ರಜ್ಞೆ ಮೆರೆದು ಕಾಡಾನೆಯಿಂದ ತಪ್ಪಿಸಿಕೊಂಡು ಬಂದಿದ್ದಾರೆ.

ಆದರೆ ಪ್ರತಿ ಸಾರಿಯೂ ಇದೇ ರೀತಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.

 ಎಲ್ಲಾ ಪ್ರಾಣಿಗಳ ದರ್ಶನ

ಎಲ್ಲಾ ಪ್ರಾಣಿಗಳ ದರ್ಶನ

ಕಳೆದ ಬಾರಿಯ ಹಿಂಗಾರು ಮತ್ತು ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಅರಣ್ಯ ಹಸಿರಿನಿಂದ ನಳನಳಿಸುತ್ತಿದೆ. ಜತೆಗೆ ಅರಣ್ಯದೊಳಗೆ ಇರುವ ಕೆರೆಗಳು ಭರ್ತಿಯಾಗಿ ಹಸಿರು ಮೇವುಗಳು ವನ್ಯ ಪ್ರಾಣಿಗಳಿಗೆ ಯಥೇಚ್ಛವಾಗಿ ದೊರೆಯುತ್ತಿದೆ. ಹೀಗಾಗಿ ಕಾಡಾನೆ ಸೇರಿದಂತೆ ಎಲ್ಲ ಪ್ರಾಣಿಗಳು ಅಡ್ಡಾಡುತ್ತಿದ್ದು ಖುಷಿಯಾಗಿವೆ.

ಜತೆಗೆ ಮೊದಲೆಲ್ಲ ಸಫಾರಿಗೆ ತೆರಳುವವರಿಗೆ ಜಿಂಕೆಗಳು ಹೊರತುಪಡಿಸಿ ಹೆಚ್ಚಿನ ಪ್ರಾಣಿಗಳು ಕಾಣಲು ಸಿಗುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ ಎಲ್ಲ ರೀತಿಯ ಪ್ರಾಣಿಗಳು ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ.

ಬಿಳಿಗಿರಿರಂಗನಬೆಟ್ಟ ರಸ್ತೆ ಅವಘಡಗಳಿಗೆ ಕಾರಣ ಗೊತ್ತಾ?ಬಿಳಿಗಿರಿರಂಗನಬೆಟ್ಟ ರಸ್ತೆ ಅವಘಡಗಳಿಗೆ ಕಾರಣ ಗೊತ್ತಾ?

 ಪ್ರಾಣಿಗಳು ದಾಳಿ ಮಾಡಲು ಪ್ರೇರಣೆ

ಪ್ರಾಣಿಗಳು ದಾಳಿ ಮಾಡಲು ಪ್ರೇರಣೆ

ಹೀಗಾಗಿ ವೀಕೆಂಡ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಜತೆಗೆ ಸಫಾರಿಗೆ ತೆರಳುವ ಪ್ರವಾಸಿಗರು ಕೂಡ ಶಾಂತ ರೀತಿಯಲ್ಲಿ ವರ್ತಿಸದೆ ಕೂಗುವುದು, ಕಿರುಚುವುದು ಹೀಗೆ ಮಾಡುವುದರಿಂದ ವನ್ಯ ಪ್ರಾಣಿಗಳು ರೊಚ್ಚಿಗೇಳುತ್ತಿವೆ. ಪ್ರವಾಸಿಗರ ವರ್ತನೆಯು ಕೂಡ ಪ್ರಾಣಿಗಳು ದಾಳಿ ಮಾಡಲು ಪ್ರೇರೇಪಿಸುವಂತಿದೆ.

 ಕ್ರಮ ಕೈಗೊಳ್ಳಬೇಕಿದೆ

ಕ್ರಮ ಕೈಗೊಳ್ಳಬೇಕಿದೆ

ಇನ್ನು ಬಂಡೀಪುರ ಅಭ್ಯಯಾರಣ್ಯದೊಳಗಿನ ಸಫಾರಿ ಮಾರ್ಗದಲ್ಲಿ ಸಂಚಾರ ಮಾಡುವ ಜಿಪಿ ತೆರೆದ ವಾಹನವಾಗಿದ್ದು, ಇದರಲ್ಲಿ ಕುಳಿತು ಸಫಾರಿ ಮಾಡುವ ಪ್ರವಾಸಿಗರಿಗೆ ಪ್ರಾಣಿಗಳನ್ನು ಹತ್ತಿರದಲ್ಲಿ ನೋಡುವ ಕಾತುರವಿರುತ್ತದೆ.

ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಮುಂದೆ ಮತ್ತೆ ಇಂತಹ ಘಟನೆಗಳು ಮರುಕಳಿಸದಿರಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

ಕಂದಾ...ಎದ್ದೇಳಮ್ಮಾ, ತಾಯಿ ಆನೆಯ ನೋವಿಗೆ ಜನರ ಕಂಬನಿಕಂದಾ...ಎದ್ದೇಳಮ್ಮಾ, ತಾಯಿ ಆನೆಯ ನೋವಿಗೆ ಜನರ ಕಂಬನಿ

English summary
Wild elephants are trying to attack the tourist vehicles going to safari. This incident is happening in Bandipur National Park and tiger reserves. Read this article for information on why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X