ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ: ಪ್ರವಾಸಿಗರಿಗೆ ಪೋಟೊ ಹುಚ್ಚು, ಕಾಡುಪ್ರಾಣಿಗಳಿಗೆ ಪೆಚ್ಚು

|
Google Oneindia Kannada News

ಚಾಮರಾಜನಗರ, ಮೇ 31: ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ ಜೊತೆಗೆ ಪೋಟೊ ತೆಗೆಯುವ ಹುಚ್ಚು, ಸಾಹಸಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದ್ದರಿಂದ ರಸ್ತೆಬದಿಯಲ್ಲಿರುವ ಪ್ರಾಣಿಗಳಿಗೆ ಕಿರಿಕಿರಿಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ಪ್ರವಾಸಿಗರು ಹೆದ್ದಾರಿ ಬದಿಯಲ್ಲಿ ಸಿಗುವ ಕಾಡು ಪ್ರಾಣಿಗಳನ್ನು ಪೋಟೊ ತೆಗೆಯುವ ಭರದಲ್ಲಿ ಕೀಟಲೆ ಮಾಡುತ್ತಿದ್ದಾರೆ.

ಬಿಳಿಗಿರಿರಂಗನಬೆಟ್ಟದ ಹುಲಿಗಳ ಅಡ್ಡಾದಲ್ಲಿ ಕರಿಚಿರತೆಯ ಓಡಾಟ!ಬಿಳಿಗಿರಿರಂಗನಬೆಟ್ಟದ ಹುಲಿಗಳ ಅಡ್ಡಾದಲ್ಲಿ ಕರಿಚಿರತೆಯ ಓಡಾಟ!

ಗುಂಡ್ಲುಪೇಟೆ ತಾಲೋಕು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಪ್ರತಿದಿನ ಸಾವಿರಾರು ವಾಹನಗಳು ಹೆದ್ದಾರಿಯಲ್ಲಿ ಸಂಚರಿಸುತ್ತಿವೆ.

Wild Animals Troubled at Bandipur Forest Area As Tourists Interested on Clicking Photos

ಕಾರಿನಲ್ಲಿ ಸಂಚಾರ ಮಾಡುವ ಪ್ರವಾಸಿಗರು ಆನೆಗಳನ್ನು ಕಂಡು ಹತ್ತಿರಕ್ಕೆ ಪೋಟೋ ತೆಗೆದರೆ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಆನೆಯ ಮರಿಗಳು ಇದ್ದರೆ ಮರಿಗಳ ರಕ್ಷಣೆಗೆ ಆನೆಗಳು ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗುತ್ತವೆ. ಸಂಚಾರ ಮಾಡುವವರು ಪ್ರಾಣಿಗಳನ್ನು ಕಂಡರೆ ನಿಲ್ಲಿಸಬಾರದು. ನಿಲ್ಲಿಸಿದರೆ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುತ್ತಿದೆ. ಆದರೂ ಪ್ರವಾಸಿಗರು ಲೆಕ್ಕಕ್ಕೆ ತೆಗೆದುಕೊಳ್ಳದೇ ಇಂತಹ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಕೊಳ್ಳೇಗಾಲ; ಪವಾಡ ಸೃಷ್ಟಿಯ ಸೀಗಮಾರಮ್ಮನ ನರಬಲಿ ಹಬ್ಬಕೊಳ್ಳೇಗಾಲ; ಪವಾಡ ಸೃಷ್ಟಿಯ ಸೀಗಮಾರಮ್ಮನ ನರಬಲಿ ಹಬ್ಬ

ರಸ್ತೆಯಲ್ಲಿಯೇ ನಿಂತು ಫೋಟೊ ತೆಗೆಯುವುದು

ಕಾಡಿನಲ್ಲಿ ಹಾದು ಹೋಗಿರುವ ರಸ್ತೆಯುದ್ದಕ್ಕೂ ಕಾಡಿನ ಮಧ್ಯೆ ವಾಹನಗಳನ್ನು ನಿಲ್ಲಿಸಬಾರದು, ಪ್ರಾಣಿಗಳಿಗೆ ತಿಂಡಿ ನೀಡಬಾರದು, ಪ್ರಾಣಿಗಳ ಪೋಟೋ ತೆಗೆಯಬಾರದು, ಪ್ಲಾಸ್ಟಿಕ್ ಬಳಸಬಾರದು ಎಂಬ ನಾಮಫಲಕಗಳು ಇದ್ದರೂ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಕೆಲವರು ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ. ರಸ್ತೆಯ ಬದಿಯಲ್ಲಿ ಮೇಯುವ ಆನೆ, ಜಿಂಕೆ, ಕಡವೆ, ಕಾಡಮ್ಮೆಗಳು ಕಂಡರೆ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಪೋಟೊ ತೆಗೆಯುವುದು, ಜಿಂಕೆ ಮತ್ತು ಕಡವೆ, ಕೋತಿಗಳಿಗೆ ತಿಂಡಿ ನೀಡುವುದನ್ನು ಮಾಡುತ್ತಿರುವುದರಿಂದ ಉಳಿದ ಸವಾರರಿಗೆ ತೊಂದರೆಯಾಗುತ್ತಿದೆ.

Wild Animals Troubled at Bandipur Forest Area As Tourists Interested on Clicking Photos

ಸಿಬ್ಬಂದಿ ಗಸ್ತು ಹೆಚ್ಚಿಸಬೇಕು

ಸರಿಯಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರೇಟೋಲಿಗ್ ಮಾಡದೆ ಇರುವುದೇ ಇದಕ್ಕೆ ಎಲ್ಲಾ ಕಾರಣ ಎನ್ನಲಾಗುತ್ತಿದೆ. ಪ್ರವಾಸಿಗರು ತಿಂಡಿಗಳನ್ನು ನೀಡಿ ಅಭ್ಯಾಸ ಮಾಡಿರುವುದರಿಂದ ಕೋತಿ, ಜಿಂಕೆಗಳು ಪ್ರವಾಸಿಗರ ವಾಹನಗಳ ಕಾಯುತ್ತಿರುವೆ. ವಾಹನ ಒಳಗೆ ಇರುವ ಕವರ್ ಗಳು ಕೋತಿಗಳು ಎತ್ತಿಕೊಂಡು ಹೋಗತ್ತವೆ. ಪ್ರವಾಸಿಗರು ಸೇವಾ ಮನೋಭಾವದ ದೃಷ್ಟಿಯಿಂದ ಪ್ರಾಣಿಗಳಿಗೆ ತಿಂಡಿ ನೀಡುತ್ತಾರೆ. ಆದರೆ, ಪ್ರಾಣಿಗಳಿಗೆ ತಿಂಡಿ ನೀಡುತ್ತಾರೆ. ಆದರೆ ಪ್ರಾಣಿಗಳು ಈ ತಿಂಡಿಗಳಿಗೆ ಸೆಳೆತಗೊಂಡು ತಮ್ಮ ಸಹಜ ಕ್ರಿಯೆಗಳನ್ನು ಮರೆಯುತ್ತದೆ. ರಾಷ್ಟೀಯ ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸವಾರರ ಮೇಲೆ ಗಮನ ನೀಡಬೇಕು. ಸಿಬ್ಬಂದಿ ಗಸ್ತು ಹೆಚ್ಚಿಸಬೇಕು. ಈ ರೀತಿಯಲ್ಲಿ ಮಾಡುವುದರಿಂದ ಕಾಡಿನ ಸುರಕ್ಷತಾ ಜೊತೆಗೆ ನಿಯಮಗಳು ಉಲ್ಲಂಘನೆ ಮಾಡುವುದು ತಪ್ಪುತ್ತದೆ ಎನ್ನಬಹುದು.

(ಒನ್ಇಂಡಿಯಾ ಸುದ್ದಿ)

English summary
Tourists travelling to and from Bandipur forest are increasing showing interest to click the photos of wild animals on the road side. This is the invasion of private space of the animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X