ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಆನೆ ಗಣತಿಗೆ ಸ್ವಯಂಸೇವಕರ ಸಾಥ್

ನಾಲ್ಕು ದಿನಗಳ ಕಾಲ ನಡೆಯುವ ಗಣತಿ ಕಾರ್ಯಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಾಯಿತು. ಏಕಕಾಲಕ್ಕೆ ಆಯಾ ಬ್ಲಾಕ್‍ಗಳಿಂದ ಹೊರಟ ಸ್ವಯಂ ಸೇವಕರು ಕಾಡಿನೊಳಗೆ ಅರಣ್ಯ ಸಿಬ್ಬಂದಿಗಳ ಸಹಕಾರದಲ್ಲಿ ಗಣತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ಮೇ 17: ಬಂಡೀಪುರ ಅಭಯಾರಣ್ಯದಲ್ಲಿ 2017-18ನೇ ಸಾಲಿನ ಆನೆಗಣತಿಯು ಪ್ರಾರಂಭವಾಗಿದ್ದು, ಸ್ವಯಂಸೇವಕರು ಉತ್ಸಾಹದಿಂದ ತಮ್ಮನ್ನು ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾಲ್ಕು ದಿನಗಳ ಕಾಲ ನಡೆಯುವ ಗಣತಿ ಕಾರ್ಯಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಾಯಿತು. ಏಕಕಾಲಕ್ಕೆ ಆಯಾ ಬ್ಲಾಕ್‍ಗಳಿಂದ ಹೊರಟ ಸ್ವಯಂ ಸೇವಕರು ಕಾಡಿನೊಳಗೆ ಅರಣ್ಯ ಸಿಬ್ಬಂದಿಗಳ ಸಹಕಾರದಲ್ಲಿ ಗಣತಿ ಕಾರ್ಯದಲ್ಲಿ ನಿರತರಾಗಿದ್ದಾರೆ.[ಬತ್ತಿದ ಬಂಡೀಪುರದ ಮೂಲೆಹೊಳೆ: ಜನ-ಜಾನುವಾರು ಪರದಾಟ]

 Volunteers joined Elephant Census in Bandipur

ಬಂಡೀಪುರ ಹುಲಿಯೋಜನೆಯ 12 ವಲಯಗಳಲ್ಲೂ ಬೆಳಿಗ್ಗೆ 7ರಿಂದಲೇ ಅರಣ್ಯಕ್ಕೆ ತೆರಳಿ ಗಣತಿಯನ್ನು ಆರಂಭಿಸಲಾಗಿದ್ದು, ಮುಂಜಾನೆ ಸಮಯದಲ್ಲಿ ಆನೆಗಳು ಸಿಗುವ ಗಸ್ತು ರಸ್ತೆಗಳಲ್ಲಿ ಮತ್ತು ಆನೆಪಥಗಳಲ್ಲಿ ಗಣತಿ ಕಾರ್ಯವನ್ನು ಚುರುಕಾಗಿ ನಡೆಸಲಾಯಿತು. ಸುಮಾರು 4 ರಿಂದ 6 ಕಿಲೋಮೀಟರ್‍ಗೆ ಒಂದು ಬ್ಲಾಕ್ ಎಂದು ಗುರುತಿಸಿಕೊಂಡು ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ಗಣತಿ ಕಾರ್ಯ ನಡೆಸಲಾಗುತ್ತಿದೆ.

 Volunteers joined Elephant Census in Bandipur

ಒಂದು ಬ್ಲಾಕ್‍ಗೆ ಒಬ್ಬ ಸ್ವಯಂಸೇವಕರು, ಜಿಪಿಎಸ್, ನಕ್ಷೆ, ಅಳತೆ ಪಟ್ಟಿ ಮೂವರು ಅರಣ್ಯ ಸಿಬ್ಬಂದಿ ಬಂದೂಕಿನೊಂದಿಗೆ ತೆರಳುತ್ತಿದ್ದಾರೆ. ಗಣತಿದಾರರಿಗೆ ಅರಣ್ಯ ಇಲಾಖೆಯು ಬೆಳಿಗ್ಗೆ ತಿಂಡಿ ಮತ್ತು ಊಟ ಹಾಗೂ ನೀರಿನ ವ್ಯವಸ್ಥೆ ಮಾಡಿದೆ. ಬಹುತೇಕ ವಿದ್ಯಾವಂತರೇ ಅದರಲ್ಲೂ ಹುದ್ದೆಯಲ್ಲಿರುವವರೇ ಹೆಚ್ಚಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

 Volunteers joined Elephant Census in Bandipur

ಓಂಕಾರ ಅರಣ್ಯದ ಮುಂಟಿನೆತ್ತಿ ರಸ್ತೆ ಹಾಗೂ ಸೌತ್‍ಕೆರೆ ಬಳಿ ಸ್ವಯಂ ಸೇವಕರು ಆನೆ ಗಣತಿಯಲ್ಲಿ ತೊಡಗಿರುವುದನ್ನು ಎಸಿಎಫ್ ಪೂವಯ್ಯ ಪರಿಶೀಲಿಸಿ ಗಣತಿ ಕಾರ್ಯ ವೇಳೆಯಲ್ಲಿ ಎಚ್ಚರ ವಹಿಸುವಂತೆ ಕಿವಿ ಮಾತು ಹೇಳಿದ್ದಾರೆ.

English summary
Elephant census started here in Bandipur National Park, Chamarajanagar today morning. Volunteers joined census and helped forest officials to count the elephants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X