• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ; ಸಫಾರಿ ಜೀಪ್ ಬೆನ್ನಟ್ಟಿದ ಕಾಡಾನೆಗಳು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಮಾರ್ಚ್ 15; ಸಫಾರಿಗೆ ಹೋದ ಪ್ರವಾಸಿಗರಿಗೆ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಆಸೆ ಇರುತ್ತದೆ. ಆದರೆ, ಇದೇ ಆಸೆ ಹಲವು ಬಾರಿ ಜೀವಕ್ಕೆ ಅಪಾಯ ತರುವ ಸಾಧ್ಯತೆಯೂ ಇದೆ.

ಕಾಡಾನೆಗಳು ಸಫಾರಿಗೆ ಹೋದ ಜೀಪ್‌ ಅನ್ನು ಮುಂದೆ ಮತ್ತು ಹಿಂಬದಿಯಿಂದ ಅಟ್ಟಾಡಿಸಿರುವ ಘಟನೆಯು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ‌. ಗುಡಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ.

ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ

ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ಸಮಯದಲ್ಲಿ ಮುಂದಿನಿಂದಲೂ ಮತ್ತೊಂದು ಸಲಗ ಅಡ್ಡಹಾಕಿದ್ದು, ಪ್ರವಾಸಿಗರು ಬೆಚ್ಚಿ ಬೀದಿದ್ದಾರೆ.

 ವಿರೋಧದ ಹಿನ್ನೆಲೆ ಉದ್ದೇಶಿತ ಬಂಡಿಪುರ ಪ್ರವಾಸೋದ್ಯಮ ಸಫಾರಿ ಸ್ಥಗಿತ ವಿರೋಧದ ಹಿನ್ನೆಲೆ ಉದ್ದೇಶಿತ ಬಂಡಿಪುರ ಪ್ರವಾಸೋದ್ಯಮ ಸಫಾರಿ ಸ್ಥಗಿತ

ಸಫಾರಿ ಜೀಪ್ ಓಡಿಸುವ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಸಾಮಾನ್ಯವಾಗಿ ಸಫಾರಿ ಹೋದಾಗ ಆನೆ ಕೆರಳಿದ್ದರೆ ಅಟ್ಟಾಡಿಸಿಕೊಂಡು ಬರುತ್ತದೆ. ಆದರೆ, ಒಟ್ಟಿಗೆ ಎರಡು ಆನೆಗಳು ದಾಳಿಗೆ ಪ್ರಯತ್ನ ನಡೆಸಿದ ಘಟನೆಗಳು ಅಪರೂಪ.

ಮೈಸೂರು: 7 ತಿಂಗಳ ನಂತರ ನಾಗರಹೊಳೆ ಸಫಾರಿ ಪುನರಾರಂಭ ಮೈಸೂರು: 7 ತಿಂಗಳ ನಂತರ ನಾಗರಹೊಳೆ ಸಫಾರಿ ಪುನರಾರಂಭ

ಈ ಘಟನೆ ಕುರಿತು ಕೆ. ಗುಡಿ ಆರ್​ಎಫ್​​ಒ ಶಾಂತಪ್ಪ ಪೂಜಾರ್ ಪ್ರತಿಕ್ರಿಯೆ ನೀಡಿದ್ದಾರೆ. "ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಭತ್ತದಗದ್ದೆ ಕೆರೆ ರಸ್ತೆಯಲ್ಲಿ 9 ಆನೆಗಳ ಗುಂಪಿದೆ" ಎಂದು ಹೇಳಿದರು.

"ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುವುದು ಸಹಜ. ಆದರೆ, ಎರಡೆರಡು ಸಲಗಗಳು ಸಫಾರಿ ವಾಹನ ಅಡ್ಡಗಟ್ಟಿದ ಘಟನೆಗಳು ತೀರಾ ಅಪರೂಪ" ಎಂದು ಅವರು ತಿಳಿಸಿದರು.

ವೈರಲ್ ಆಗಿರುವ ವಿಡಿಯೋ

   Positive Story :ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ ದೇಶದ ಮೊದಲ ಎಸಿ ರೈಲ್ವೆ ಟರ್ಮಿನಲ್ | Oneindia Kannada

   English summary
   A video of elephant chasing away a safari vehicle at K. Gudi Biligiriranga hills in Chamarajanagar district went viral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X