ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ; ಗ್ರಾಮದ ಹೆಸರು ಬದಲಿಸಲು ಪಟ್ಟು ಹಿಡಿದ ಜನ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂ 10: ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಪ್ಪನ ದೊಡ್ಡಿಯಲ್ಲಿ ಈ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಗಿತ್ತು. ಶಾಲೆಯ ಹೆಸರು ಬದಲಿಸಲು ಪಟ್ಟು ಹಿಡಿದಿದ್ದ ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮಸ್ಥರು ಈಗ ಗುರುತಿನ ಚೀಟಿ, ಪಡಿತರ ಚೀಟಿಯಲ್ಲಿನ ಹೆಸರು ಬದಲಿಸಲು ಪಟ್ಟು ಹಿಡಿದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ ಮೈಸೂರಪ್ಪನ ದೊಡ್ಡಿಯ ಬದಲಾಗಿ ಹೊಸದೊಡ್ಡಿ ಎಂದು ನಮೂದಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಶಾಲೆಗೆ ತೆರಳದೇ ಕಳೆದ 8 ದಿನಗಳಿಂದ ತರಗತಿ ಬಹಿಷ್ಕರಿಸಿದ್ದರು.‌

ಚಾಮರಾಜನಗರ: ಬೂದಂಬಳ್ಳಿ ಅಂಗನವಾಡಿ ಶಿಥಿಲ, ಜೀವಭಯದಲ್ಲಿ ಮಕ್ಕಳು ಚಾಮರಾಜನಗರ: ಬೂದಂಬಳ್ಳಿ ಅಂಗನವಾಡಿ ಶಿಥಿಲ, ಜೀವಭಯದಲ್ಲಿ ಮಕ್ಕಳು

ಕೆಲ ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು ಶಾಲಾ ಹೆಸರು ಬದಲಾಗಿದೆ. ಆದರೆ ಈಗ ಊರ ಹೆಸರು ಬದಲಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

 ಆನೆಮಡುವಿನಕೆರೆಗೆ ನೀರು: ಸೋಮಣ್ಣ ಮನವೊಲಿಕೆ ಬಳಿಕ ಹೋರಾಟಕ್ಕೆ ಅಲ್ಪವಿರಾಮ ಆನೆಮಡುವಿನಕೆರೆಗೆ ನೀರು: ಸೋಮಣ್ಣ ಮನವೊಲಿಕೆ ಬಳಿಕ ಹೋರಾಟಕ್ಕೆ ಅಲ್ಪವಿರಾಮ

ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಪ್ಪನ ದೊಡ್ಡಿಯಲ್ಲಿ ಈ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಗಿತ್ತು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ದಾಖಲಾಗದ ಪರಿಣಾಮ ಶಾಲೆಯನ್ನು 40 ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು.

ಶಾಲಾ ಹೆಸರು ಬದಲಾಗಿದ್ದಕ್ಕೆ ದೂರು

ಶಾಲಾ ಹೆಸರು ಬದಲಾಗಿದ್ದಕ್ಕೆ ದೂರು

ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸದೊಡ್ಡಿ ಗ್ರಾಮದ ಶಾಲಾ ಹೆಸರು ಮೈಸೂರಪ್ಪನ ದೊಡ್ಡಿ ಎಂದಿತ್ತು. ಜೊತೆಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಯಲ್ಲೂ ಹೊಸದೊಡ್ಡಿ ಬದಲಾಗಿ ಮೈಸೂರಪ್ಪನ ದೊಡ್ಡಿ ಎಂದಿದೆ. ಶಾಲಾ ನಾಮಫಲಕ ಬದಲಾದಂತೆ, ಗುರುತಿನ ಚೀಟಿಯಲ್ಲೂ ಹೆಸರು ಬದಲಾಗಬೇಕು ಎಂಬುದು ಬೇಡಿಕೆ. ಗ್ರಾಮದಲ್ಲೇ ಮತದಾನದ ಬೂತ್ ತೆರೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹೆಸರು ಬದಲಾಗದಿದ್ದರೇ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಗ್ರಾಮದ 300ಕ್ಕೂ ಹೆಚ್ಚು ಮತದಾರರು ಆಗ್ರಹಿಸಿದ್ದಾರೆ.

ಏಕಾಏಕಿ ಹೆಸರು ಬದಲಿಸಿದ್ದರಿಂದ ಸಾಮಾಜಿಕ ಕಾರ್ಯಕರ್ತ ಅಪ್ಪಾಜಿ ಎಂಬವರು, ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ದೂರು ನೀಡಿದ್ದು ಶಾಲಾ ಹೆಸರು ಬದಲಿಸಲು ಅನುಮತಿ ಕೊಟ್ಟವರು ಯಾರು?, ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಕ್ರೋಶ ಹೊರಹಾಕಿದ್ದಾರೆ.

8 ದಿನಗಳಿಂದ ತರಗತಿ ಬಹಿಷ್ಕರಿಸಿದ 11 ಮಕ್ಕಳು

8 ದಿನಗಳಿಂದ ತರಗತಿ ಬಹಿಷ್ಕರಿಸಿದ 11 ಮಕ್ಕಳು

ಶಾಲೆಯ ಹೆಸರು ಬದಲಾಗಿದ್ದಕ್ಕೇ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಕಳೆದ 8 ದಿನಗಳಿಂದ ಮಕ್ಕಳು ತರಗತಿಗೆ ತೆರಳದೇ ಬಹಿಷ್ಕರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿತ್ತು. ಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ ಮೈಸೂರಪ್ಪನ ದೊಡ್ಡಿಯ ಬದಲಾಗಿ ಹೊಸದೊಡ್ಡಿ ಎಂದು ನಮೂದಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಶಾಲೆಗೆ ತೆರಳದೇ ತರಗತಿ ಬಹಿಷ್ಕರಿಸಿದ್ದು ಇದನ್ನು ಪಾಲಕರು ಬೆಂಬಲಿಸಿದ್ದಾರೆ. ಕೆಲವರು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದು ಮತ್ತಿತರರು ಹೆಸರು ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.

ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಪ್ಪನ ದೊಡ್ಡಿಯಲ್ಲಿ ಈ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಗಿತ್ತು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ದಾಖಲಾಗದ ಪರಿಣಾಮ ಶಾಲೆಯನ್ನು 40 ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು.

ಹೊಸದೊಡ್ಡಿ ಗ್ರಾಮದ ಪೋಷಕರ ಆಕ್ರೋಶ

ಹೊಸದೊಡ್ಡಿ ಗ್ರಾಮದ ಪೋಷಕರ ಆಕ್ರೋಶ

ಈ ಶಾಲೆಯನ್ನು ಹೊಸದೊಡ್ಡಿ ಗ್ರಾಮಕ್ಕೆ ಸ್ಥಳಾಂತರಿಸುವುದರ ಮೂಲಕ ಇಲ್ಲಿನ ವಿದ್ಯಾರ್ಥಿಗಳನ್ನು ಹೊಸದೊಡ್ಡಿ ಶಾಲೆಗೆ ವರ್ಗಾಯಿಸಲಾಗಿತ್ತು. ವರ್ಗಾಯಿಸಿ 35 ವರ್ಷಗಳು ಕಳೆದರೂ ಸಹ ಶಾಲೆಯ ಹೆಸರನ್ನು ಮೈಸೂರಪ್ಪನ ದೊಡ್ಡಿ ಗ್ರಾಮವೆಂದೇ ನಾಮಫಲಕ ಹಾಕಲಾಗಿದೆ. ಇದರಿಂದ ಬೇಸತ್ತ ಹೊಸದೊಡ್ಡಿ ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಲೆಯನ್ನೇ 8 ದಿನಗಳಿಂದ ಬಹಿಷ್ಕರಿಸಿ ಆಕ್ರೋಶ ಹೊರಹಾಕಿದ್ದಾರೆ.

ಈ ಶಾಲೆಯಲ್ಲಿ 1 ತರಗತಿಯಿಂದ 5ನೇ ತರಗತಿಯವರೆಗೆ 11 ವಿದ್ಯಾರ್ಥಿಗಳು ಕಲಿಯುತ್ತಿದ್ದು 11 ವಿದ್ಯಾರ್ಥಿಗಳು ಕೂಡ ಶಾಲೆಗೆ ಬರದೇ ತರಗತಿ ಬಹಿಷ್ಕರಿಸಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಬಾರದ ಹಿನ್ನಲೆ ಶಿಕ್ಷಕರು ಪೋಷಕರಿಗೆ ಮನವೊಲಿಸಲು ಮುಂದಾದರೂ ಮಕ್ಕಳು, ಪಾಲಕರು 11 ದಿನಗಳಿಂದ ಜಗ್ಗಿಲ್ಲ.

ಬಿಇಒಗೆ ತಲೆನೋವಾಗಿ ಪರಿಣಮಿಸಿದ ಹೆಸರು

ಬಿಇಒಗೆ ತಲೆನೋವಾಗಿ ಪರಿಣಮಿಸಿದ ಹೆಸರು

ಹೊಸದೊಡ್ಡಿ ಶಾಲೆ ಎಂದು ಬದಲಿಸಬೇಕೆಂದು ಒಂದು ಬಣ ಒತ್ತಾಯಿಸುತ್ತಿದ್ದು ಮತ್ತೊಂದು ಬಣ ಮೈಸೂರಪ್ಪನ ದೊಡ್ಡಿ ಎಂದು ಇರಬೇಕು ಎಂದು ಪಟ್ಟು ಹಿಡಿದವು. 40 ವರ್ಷಗಳಿಂದ ಇರುವ ಹೆಸರನ್ನು ಬದಲಿಸಿದರೇ ಕೋರ್ಟ್‌ಗೆ ಹೋಗುತ್ತೇವೆಂದು ಮತ್ತೊಂದು ಬಣ ಎಚ್ಚರಿಸಿರುವುದು ಹನೂರು ಬಿಇಒ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಮೈಸೂರಪ್ಪನದೊಡ್ಡಿ ಎಂಬ ಹೆಸರಿನ ಮುಂದೆ ಬ್ರಾಕೆಟ್ ನಲ್ಲಿ ಹೊಸದೊಡ್ಡಿ ಎಂದು ನಮೂದಿಸಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳುತ್ತಿದ್ದರೂ ಒಂದು ಬಣ ಒಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ, ಕೆಲವರು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದು ಈ ನೇಮ್ ಪಾಲಿಟಿಕ್ಸ್ ಪ್ರತಿಷ್ಟೆಯಾಗಿ ಬದಲಾಗಿದೆ.

ಮಕ್ಕಳ ಆಯೋಗಕ್ಕೆ ಪತ್ರ

ಮಕ್ಕಳ ಆಯೋಗಕ್ಕೆ ಪತ್ರ

ಈ ಸಂಬಂಧ ಹನೂರು ಬಿಇಒ ಸ್ವಾಮಿ ಪ್ರತಿಕ್ರಿಯಿಸಿ, ಕಳೆದ ಒಂದು ವಾರದಿಂದಲೂ ಮನವೊಲಿಸಿದರೂ ಯಾವುದೇ ಫಲ ಕಂಡಿಲ್ಲ ಇದೇ ರೀತಿ 3-4 ದಿನ ಮುಂದುವರೆದರೇ ಮಕ್ಕಳ ಆಯೋಗಕ್ಕೆ ಪತ್ರ ಬರೆಯಲಾಗುವುದು, ಏಕಾಏಕಿ ಶಾಲೆ ಹೆಸರನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

English summary
Chamarajanagar district Hanur taluk Hosadoddi villagers demand to change vilalge name in voter id.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X