ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಂಡ್ಲುಪೇಟೆ: ಗ್ರಾಪಂ ಸದಸ್ಯನ ಮೇಲೆ ಆ್ಯಸಿಡ್ ದಾಳಿ

ಜಿ.ಪಿ. ಸ್ವಾಮಿ ಹಾಗೂ ಅವರ ಪುತ್ರ ಸುದರ್ಶನ್ ಹಲ್ಲೆಗೊಳಗಾದವರು. ಅವರೀಗ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

|
Google Oneindia Kannada News

ಗುಂಡ್ಲುಪೇಟೆ, ಏಪ್ರಿಲ್ 5: ಮಠದ ಜಮೀನನ್ನು ಗುತ್ತಿಗೆ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಗೋಪಾಲಪುರದ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಆತನ ಪುತ್ರನ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ.

ಜಿ.ಪಿ. ಸ್ವಾಮಿ ಹಾಗೂ ಅವರ ಪುತ್ರ ಸುದರ್ಶನ್ ಹಲ್ಲೆಗೊಳಗಾದವರು. ಅವರೀಗ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Village Panchayath member survives acid attack in Gundlupete Taluk

ಘಟನೆಯ ಹಿನ್ನೆಲೆ: ಗೋಪಾಲಪುರದಲ್ಲಿರುವ ಬಿಕ್ಕು ಮಠಕ್ಕೆ ಸೇರಿದ ಜಮೀನನ್ನು ಈ ಹಿಂದೆ ಬೇರೊಬ್ಬರು ಕಳೆದ ಐದು ವರ್ಷದಿಂದ ಗುತ್ತಿಗೆ ಪಡೆದು ಉಳುಮೆ ಮಾಡುತ್ತಿದ್ದರು. ಆ ಗುತ್ತಿಗೆ ಒಪ್ಪಂದ ಇದೇ ವರ್ಷ ಮಾರ್ಚ್ 31ಕ್ಕೆ ಕೊನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆ ಒಪ್ಪಂದ ನವೀಕರಿಸಲು ಮುಂದಾಗಿದ್ದ ಅವರಿಗೆ ಮತ್ತೆ ಗುತ್ತಿಗೆ ಕೊಡಲೊಲ್ಲದ ಮಠದ ಆಡಳಿತ ಆ ಗುತ್ತಿಗೆಗಾಗಿ ಪ್ರಯತ್ನಿಸಿದ್ದ ಗ್ರಾಮ ಪಂಚಾಯ್ತಿ ಸದಸ್ಯ ಜಿ.ಪಿ. ಸ್ವಾಮಿಯವರಿಗೆ ನೀಡಿತ್ತು.

ಗುತ್ತಿಗೆ ತಮ್ಮ ಹೆಸರಿಗೆ ಬದಲಾದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಿಂದ ಸ್ವಾಮಿ ಮಠದ ಜಮೀನಿನಲ್ಲಿ ಉಳುಮೆ ಶುರು ಮಾಡಿದ್ದರು. ಏಪ್ರಿಲ್ 5ರಂದು ಸ್ವಾಮಿ ಅವರು ತಮ್ಮ ಪುತ್ರ ಸುದರ್ಶನ್ ನೊಂದಿಗೆ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದಾಗ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

ಸ್ವಾಮಿ ಅವರು, ರಾಜಮ್ಮ ಹಾಗೂ ಗುರುಸ್ವಾಮಪ್ಪ ಎಂಬುವರ ವಿರುದ್ಧ ಆರೋಪಿಸಿದ್ದಾರೆ.

English summary
A Village Panchayath memeber and his son survived in an acid attack in Gopalapura of Gundlupete district of Chamaraja Nagara District on April 5, 2017. Land dispute is behind the attack says the police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X